ಬರೆದೆ ಒಂದು ಪತ್ರ
ಅದರಲ್ಲಿ ನಿನ್ನ ಚಿತ್ರ
ನಿನ್ನ ಕಣ್ಣ ಓರೇ ನೋಟ
ಬಯಸಿದೆಯೇ ನನ್ನ ಒಡನಾಟ
ನಿನ್ನ ಹೆಸರು ಶಾಂತ ಅಂತ
ನನಗೇಗೋ ಗೊತ್ತು ಆಯ್ತ
ನಿನ್ನ ಮುಖವು ಕಾಂತಿ ಐತಾ
ಅದರಾಗ ಕಳೆಯು ತುಂಬೈತಾ
ನೀ ನಕ್ರೆ ಕೆನ್ನೆ ತುಂಬಾ
ಗುಳಿಯೂ ಬೀಳುತೈತಾ
ಅದು ನೋಡಿ ನನ್ನ ಮನದಿ
ಬಿರುಗಾಳಿ ಬೀಸುತೈತಾ
ನನ್ನ ಮನದ ತುಂಬಾ
ನಿನ್ನ ಮ್ಯಾಗ ಪ್ರೀತಿ ಚಿಗುರುತೈತಾ
ಅದು ತಿಳಿಸಬೇಕು ಅಂದ್ರ
ಹೃದಯ ಬೆದರುತೈತಾ
ನನ್ನ ಪ್ರೀತಿ ಮಾಡೊ ಮನಸ್ಸು
ಇದ್ರೆ ನಿನಗೆ ಹುಡುಗಿ
ನನ್ನ ಪತ್ರಕ್ಕೆ ಉತ್ತರ
ಬರೆದು ತಿಳಿಸು ಗೆಳತಿ
—
ಗೊರೂರು ಅನಂತರಾಜು,
ಹಾಸನ,
9449462879
