ತಿರುವಾಡಿಪುರಂ ಎನ್ನುವುದು ಶ್ರೀರಾಮಾನುಜಾಚಾರ್ಯರ ಅನುಯಾಯಿಗಳಾದ ಶ್ರೀವೈಷ್ಣವ ಬಂಧುಗಳಿಗೆ ವಿಶೇಷವಾದ ದಿವಸ,ಶ್ರೀ ವೈಷ್ಣವ ಪರಂಪರೆಯ 12 ಜನ ಆಳ್ವಾರ್ ಗಳಲ್ಲಿ ಒಬ್ಬರಾದ ಶ್ರೀಗೋದಾದೇವಿಯ ಜನ್ಮವರ್ಧಂತಿ,ಆಳ್ವಾರ್ ಜಯಂತಿ ಅಥವಾ ತಮಿಳಿನಲ್ಲಿ ತಿರುವಾಡಿಪೂರಂ ಎಂಬುದು.
ಸುಮಾರು 6ನೇ ಶತಮಾನದಲ್ಲಿ ವಿಷ್ಣುಚಿತ್ತರೆಂಬ ಬ್ರಾಹ್ಮಣೋತ್ತಮರು ಶ್ರೀವಿಲ್ಲಿಪುತ್ತೂರು ಎಂಬ ತಮಿಳುನಾಡಿನ ಒಂದು ಗ್ರಾಮದಲ್ಲಿ ವಾಸಿಸುತ್ತಿದ್ದರು.ಇವರು ವಹಾನ್ ದೈವಭಕ್ತರು ಶ್ರೀರಂಗನ ಪರಮ ಭಕ್ತರು ಶ್ರೀರಂಗನ ಪರಮ ಆರಾಧಕರು,ಇವರದ್ದೇ ಆದ ಒಂದು ತುಲಸೀವನ ಪ್ರತಿನಿತ್ಯ ಶ್ರೀರಂಗನಿಗೆ ತಮ್ಮ ಕೈಯ್ಯಾರೆ ಕಟ್ಟಿದ ತುಳಸೀಮಾಲೆಯನ್ನು ಅರ್ಪಿಸಿ ಅರ್ಚಿಸಿ ಆನಂದಪಡುವುದು ಕೈಂಕರ್ಯ ಅಂದರೆ ಭಗವದ್ ಸೇವೆಯಲ್ಲಿ ಆನಂದ.
ವಿಷ್ಣುಚಿತ್ರ ಆರಾಧನೆಗೆ ಸಂತೃಪ್ತನಾದ ಪರಮಾತ್ಮನು ತುಲಸೀವನದಲ್ಲಿ ಒಂದು ಸುಂದರ ಹೆಣ್ಣುಮಗುವನ್ನು ಕರುಣಿಸಿದ ಪರಮಾನಂದಭರಿತರಾದ ವಿಷ್ಣುಚಿತ್ತರು ಗೋದಾ ಎಂಬ ನಾಮಧೇಯವನ್ನು ಮಗುವಿಗೆ ಹೆಸರಿಟ್ಟರು,ಅಯೋನಿಜೆಯಾದ ಶ್ರೀ ಗೋದಾದೇವಿಯು ಅವತರಿಸಿದ ಈ ದಿನವೇ ತಿರುವಾಡಿಪ್ಪೂರಂ.
ಕಾಲಕ್ರಮೇಣ ವಿಷ್ಣುಚಿತ್ರ ಪ್ರೀತಿಯ ಲಾಲನೆ ಪಾಲನೆಗಳಲ್ಲಿ ಮಗುವು ಬೆಳೆಯುತ್ತಾ ಮಗುವಿಗೆ ಬೇಕಾದ ಸಂಸ್ಕಾರಗಳನ್ನು ಕಲಿಸುತ್ತಾ ಸಾಗಿದವು,ಕಾಲಕ್ರಮದಲ್ಲಿ ಶ್ರೀವಿಷ್ಣುಚಿತ್ತರು ತಮಗೆ ತುಂಬಾಪ್ರಿಯವಾದ ಪುಷ್ಪಕೈಕಂಕರ್ಯದ ಸೇವೆಯನ್ನು ತಮ್ಮ ಪ್ರೀತಿಯ ಮಗಳಿಗೆ ವಹಿಸಿದರು.ಗೋದೆಯು ಪ್ರೀತಿಯಿಂದ ಕಟ್ಟಿದ ತುಲಸೀಮಾಲೆಯನ್ನು ಶ್ರೀರಂಗನಿಗೆ ಅರ್ಪಿಸಿ ಆನಂದಪಡುತ್ತಿದ್ದರು.
ಹೀಗಿರುವಾಗ ಒಂದು ದಿನ ತುಲಸೀಮಾಲೆಯಲ್ಲಿ ಅದು ಹೇಗೋ ಒಂದು ಕೂದಲು ಸೇರಿದುದನ್ನು ಕಂಡ ವಿಷ್ಣುಚಿತ್ತರು ಪರಮ ಅಪಚಾರವಾಯಿತಲ್ಲಾ ಎಂದು ದುಃಖಪಟ್ಟರು.ಮರುದಿನ ಅದೇ ಚಿಂತೆಯಲ್ಲಿ ಇರುವಾಗ ಗೋದೆಯು ತಾನು ಕಟ್ಟಿದ ಮಾಲೆಯನ್ನು ತಾನೇ ಧಾರಣೆ ಮಾಡಿಕೊಂಡು ತನ್ನ ಪ್ರತಿಬಿಂಬವನ್ನು ನೋಡಿಕೊಂಡು ಆನಂದದಿಂದ ತನ್ನ ತಂದೆಯವರ ಕೈಗೆ ತಂದುಕೊಟ್ಟಳು,ಇದನ್ನು ಗೌಪ್ಯವಾಗಿ ಗಮನಿಸಿದ್ದ ವಿಷ್ಣುಚಿತ್ತರು ಒಲ್ಲದ ಮನಸ್ಸಿನಿಂದ ದೇವಾಲಯಕ್ಕೆ ತೆರಳಿ ಆ ತುಲಸೀಮಾಲೆಯನ್ನು ಪಕ್ಕದಲ್ಲಿಟ್ಟು ಬೇರೆ ಮಾಲೆಯನ್ನು ಸ್ವಾಮಿಗೆ ಅರ್ಪಿಸಿದರು.
ಅಂದು ರಾತ್ರಿ ಇದೇ ವಿಷಯವಾಗಿ ಚಿಂತಾಕ್ರಾಂತರಾಗಿ ನಿದ್ರೆಗೆ ಜಾರಿದಾಗ ಅವರಿಗೆ ಕನಸ್ಸಿನಲ್ಲಿ ಸಾಕ್ಷಾತ್ ಸ್ವಾಮಿಯು ಪ್ರತ್ಯಕ್ಷನಾಗಿ,ವಿಷ್ಣುಚಿತ್ತರೇ ದುಃಖಪಡಬೇಡಿ ನಿಮ್ಮ ಮುಗ್ಧಮಗು ಭಕ್ತಿಪರವಶದಿಂದ ಆ ತುಲಸೀಮಾಲೆಯನ್ನು ಕಟ್ಟಿ ತಾನು ಮುಡಿದು ಅದು ನನಗೆ ಧಾರಣೆ ಮಾಡಿಸಿದಾಗ ಹೇಗೆ ಕಾಣುತ್ತದೆ ಎಂಬ ಕುತೂಹಲದೊಂದಿಗೆ ಧರಿಸಿದಳೇ ವಿನಃ ಇಲ್ಲಿ ಯಾವುದೇ ಅಪಚಾರವಾಗಿಲ್ಲ,ಇನ್ನು ಮುಂದೆ ನೀವು ಗೋದೆಯು ತಾನುಧರಿಸಿ ಕೊಟ್ಟ ಮಾಲೆಯನ್ನೇ ನನಗೆ ಅರ್ಪಿಸಿ ಎಂದು ಆಜ್ಞಾಪಿಸಿದರು.
ಇಂತಹ ಪರಮಭಕ್ತೆ ಸೋಚ್ಚಿಷ್ಟಾಯಾಂ ಭುಂಕ್ತೇ ತಸ್ಸ ಷ್ಟಾಯಾಂ ಸೃಜನಿಗಳಿತಂ ಯಾ ಬಲಾತ್ಕೃತ್ಯ ಬುಂಕ್ತೇ ಗೋದಾ ತಸೈ ನಮ ಇದಮಿದಮಿದಂಭೂಯ ಏವಾಸ್ತು ಭೂಯಃ ಅಂದರೆ ತಾನು ಮೊದಲು ಧರಿಸಿ ತೆಗೆದ ಹೂವಿನ ಮಾಲೆಯಲ್ಲಿ ಶ್ರೀರಂಗನನ್ನು ಭಕ್ತಿಯಿಂದ ಕಟ್ಟಿಹಾಕಿ ತಾನು ವಶಪಡಿಸಿಕೊಂಡ ಆ ಗೋದಾದೇವಿಗೆ ಪುನಃ ಪುನಃ ನಮಸ್ಕಾರ.
*ಗೋದಾ:* ತುಲಸಿಯ ವನದಲ್ಲಿ ಪರಮಾತ್ಮನಿಂದ ಭೂದೇವಿಯ ಅಂಶದಿಂದ ಬಂದವಳು, *ಆಂಡಾಳ್* :ಭಗವಂತನನ್ನು ಭಕ್ತಿಯಿಂದ ವಶಪಡಿಸಿಕೊಂಡವಳು ಗೋದೆ ಕರುಣಿಸಿರುವ 30ಶ್ಲೋಕಗಳ ಮಾರ್ಗಶೀರ್ಷ ಮಾಸದಲ್ಲಿ ತಾನೇ ಸ್ವತಃ ತನ್ನ ಕೈಯಲ್ಲಿರುವ ತನ್ನ ವಯಸ್ಸಿನ ಹೆಂಗಳೆಯರೊಡಗೂಡಿ ಆಚರಿಸಿದ ವೃತವನ್ನು ಇಂದಿಗೂ ಸಾಂಪ್ರದಾಯಿಕ ಶ್ರೀವೈಷ್ಣವ ಪರಂಪರೆಯು ಮುಂದುವರೆಸಿಕೊಂಡು ಬರುತ್ತಿದೆ.
ಈ 30 ಪಾಶುರಗಳ ಮಾಲೆಯನ್ನು ತುರುಪ್ಪಾವೈ ಎಂದು ಕರೆಯುತ್ತಾರೆ.ಇದಲ್ಲದೆ ನಾಚ್ಚಿಯಾರ್ ತಿರುಮೋಳಿ ಮುಂತಾದ ದಿವ್ಯಪ್ರಬಂಧಗಳನ್ನು ಕರುಣಿಸಿರುವ ಆಂಡಾಳ್ ತಾಯಿಯ ಶಾತ್ತುಮುರೈಯಿಲ್ಲದೆ ಹಾಗೂ ಶ್ರೀ ವಿಷ್ಣುಚಿತ್ತರು ಕರುಣಿಸಿರುವ ತಿರುಪಲ್ಲಾಂಡುಗಳನ್ನು ಪಠಿಸದೇ ಎಲ್ಲಾ ಶ್ರೀವೈಷ್ಣವ ದೇವಸ್ಥಾನಗಳಲ್ಲಿನ ಪೂಜೆ ಅಪೂರ್ಣ.ಹಾಗಾಗಿ ಈ ತಿರುನಕ್ಷತ್ರವು ಪವಿತ್ರಮಯವಾದ ದಿನ ತನ್ನ ಭಕ್ತಿಯ ಪರಾಕಾಷ್ಠೆತೆಯಿಂದ ಶ್ರೀರಂಗನ್ನೇ ತನ್ನ ಪತಿಯಾಗಿ ಪಡೆದು ಶ್ರೀರಂಗನಾಯಕಿಯಾದ ಗೋದಾದೇವಿಯ ವರ್ಧಂತಿಯ ಶುಭಾಶಯಗಳು.
*ಲೇಖನ:ಭಕ್ತವತ್ಸಲ.ಡಿ.ಎಸ್. ತುಮಕೂರು.*
