ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿಯು ಇಂದು ಸಶಸ್ತ್ರ ಪಡೆಗಳ ಸನ್ನದ್ಧತೆಯನ್ನು ಹೆಚ್ಚಿಸಲು 54,000 ಕೋಟಿ ರೂ.ಗಳಿಗೂ
ಹೆಚ್ಚಿನ ಮೌಲ್ಯದ ಬಂಡವಾಳ ಸ್ವಾಧೀನ ಪ್ರಸ್ತಾವನೆಗಳನ್ನು ಅನುಮೋದಿಸಿದೆ.
ಖರೀದಿಗೆ ಅನುಮೋದನೆ ನೀಡಲಾದ ವಿಷಯಗಳು ಈ ಕೆಳಗಿನಂತಿವೆ:
➡️ ಭಾರತೀಯ ಸೇನೆಯ ಟಿ-90 ಟ್ಯಾಂಕ್ಗಳಿಗೆ 1350 ಎಚ್ಪಿ ಎಂಜಿನ್
➡️ ಭಾರತೀಯ ನೌಕಾಪಡೆಗೆ ವರುಣಾಸ್ತ್ರ ಟಾರ್ಪಿಡೊಗಳು (ಯುದ್ಧ)
➡️ ಭಾರತೀಯ ವಾಯುಪಡೆಗೆ ವಾಯುಗಾಮಿ ಮುಂಚಿನ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನ ವ್ಯವಸ್ಥೆಗಳು
ಬಂಡವಾಳ ಸ್ವಾಧೀನ ಪ್ರಕ್ರಿಯೆಯ ಸಮಯವನ್ನು ಕಡಿಮೆ ಮಾಡುವ ಮಾರ್ಗಸೂಚಿಗಳನ್ನು ಸಹ ತೆರವುಗೊಳಿಸಲಾಗಿದೆ.