ಬೆಂಗಳೂರು, ಆಗಸ್ಟ್ 23: ಹೆರಿಟೇಜ್ ಫುಡ್ಸ್ ಲಿಮಿಟೆಡ್ ತನ್ನ ಪ್ರೋಟೀನ್ ಸಮೃದ್ಧ ಡೈರಿ ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಿಸುವ ಉದ್ದೇಶದಿಂದ **‘ನರಿಶ್+ ಹೈ ಪ್ರೋಟೀನ್ ಮೊಸರು’**ವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹೊಸ ಉತ್ಪನ್ನದ 400 ಗ್ರಾಂ ಪ್ಯಾಕ್ನಲ್ಲಿ 25 ಗ್ರಾಂ ಪ್ರೋಟೀನ್ ಲಭ್ಯವಿದ್ದು, ನಿತ್ಯದ ಆಹಾರದಲ್ಲೇ ಹೆಚ್ಚಿನ ಪ್ರೋಟೀನ್ ಸೇರಿಸಿಕೊಳ್ಳಲು ಅನುಕೂಲವಾಗುವಂತೆ ಉತ್ಪನ್ನವನ್ನು ರೂಪಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಸಾಮಾನ್ಯ ಮೊಸರಿನ ರುಚಿ ಮತ್ತು ಮೃದುವಾದ ಹದವನ್ನು ಉಳಿಸಿಕೊಂಡು ಹೆಚ್ಚಿನ ಪ್ರೋಟೀನ್ ಒದಗಿಸುವುದು ಉತ್ಪನ್ನದ ಪ್ರಮುಖ ವಿಶೇಷತೆಯಾಗಿದೆ.
ಮೊಸರನ್ನು ನೇರವಾಗಿ ಸೇವಿಸುವುದರ ಜೊತೆಗೆ ಅನ್ನದೊಂದಿಗೆ ಅಥವಾ ರಾಯತಾದ ರೂಪದಲ್ಲಿಯೂ ಬಳಸಬಹುದಾಗಿದೆ. 400 ಗ್ರಾಂ ಪ್ಯಾಕ್ಗೆ ₹75 ದರ ನಿಗದಿಪಡಿಸಲಾಗಿದ್ದು, ಕ್ವಿಕ್-ಕಾಮರ್ಸ್ ವೇದಿಕೆಗಳು, ಆಧುನಿಕ ರಿಟೇಲ್ ಮಳಿಗೆಗಳು, ಹೆರಿಟೇಜ್ ಹ್ಯಾಪಿನೆಸ್ ಪಾಯಿಂಟ್ಗಳು ಹಾಗೂ ಆಯ್ದ ದಿನಸಿ ಮಳಿಗೆಗಳಲ್ಲಿ ಲಭ್ಯವಿರಲಿದೆ.
ಹೆರಿಟೇಜ್ ಫುಡ್ಸ್ನ ಕಾರ್ಯನಿರ್ವಾಹಕ ನಿರ್ದೇಶಕಿ ಬ್ರಾಹ್ಮಣಿ ನಾರಾ ಮಾತನಾಡಿ, ಭಾರತೀಯರ ದೈನಂದಿನ ಆಹಾರ ಪದ್ಧತಿಯಲ್ಲಿ ಡೈರಿ ಉತ್ಪನ್ನಗಳಿಗೆ ಪ್ರಮುಖ ಸ್ಥಾನವಿದೆ. ಜನರು ತಾವು ಇಷ್ಟಪಡುವ ಆಹಾರವನ್ನು ತ್ಯಜಿಸದೆ, ಅದೇ ಆಹಾರದ ಮೂಲಕ ಹೆಚ್ಚಿನ ಪ್ರೋಟೀನ್ ಪಡೆಯುವಂತೆ ಮಾಡುವುದು ನರಿಶ್+ ಶ್ರೇಣಿಯ ಉದ್ದೇಶವಾಗಿದೆ ಎಂದು ಹೇಳಿದರು.
ಈಗಾಗಲೇ ನರಿಶ್+ ಶ್ರೇಣಿಯಲ್ಲಿ ಹೈ ಪ್ರೋಟೀನ್ ಪನೀರ್ ಮತ್ತು ಪ್ರೋಟೀನ್ ರಿಚ್ ಮಿಲ್ಕ್ ಉತ್ಪನ್ನಗಳು ಲಭ್ಯವಿದ್ದು, ಇದೀಗ ಹೈ ಪ್ರೋಟೀನ್ ಮೊಸರಿನ ಸೇರ್ಪಡೆಯೊಂದಿಗೆ ಉತ್ಪನ್ನಗಳ ಶ್ರೇಣಿ ಮತ್ತಷ್ಟು ವಿಸ್ತರಿಸಿದೆ.
1992ರಲ್ಲಿ ಸ್ಥಾಪನೆಯಾದ ಹೆರಿಟೇಜ್ ಫುಡ್ಸ್ ದೇಶದ 16 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಾಲು, ಮೊಸರು, ಬೆಣ್ಣೆ, ತುಪ್ಪ, ಪನೀರ್ ಸೇರಿದಂತೆ ವಿವಿಧ ಡೈರಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದೆ.