ಕೆ.ಆರ್.ಪೇಟೆ,ಆ.26: ರೈತರ ಕೃಷಿ ಉಪಕರಣಗಳನ್ನು ರೈತರ ಮನೆ ಬಾಗಿಲಿಗೆ ಹೋಗಿ ದುರಸ್ತಿ ಮಾಡಿಕೊಡುವ ಕಾರ್ಯಕ್ರಮಕ್ಕೆ ಪಟ್ಟಣದಲ್ಲಿ ಚಾಲನೆ ನೀಡಲಾಯಿತು.
ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಸೂರ್ಯ ಎಂಟರ್ ಪ್ರೈಸಸ್ ಶಕ್ತಿಮಾನ್ ಸಂಸ್ಥೆಯ ಸಹಯೋಗದೊಂದಿಗೆ ರೈತರಿಗೆ ಅನುಕೂಲ ಮಾಡಿಕೊಡುವ ಸದುದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ರೈತರು ತಮ್ಮ ಕೃಷಿ ಉಪಕರಣಗಳು, ಕೃಷಿ ಯಂತ್ರಗಳು ಕೆಟ್ಟು ನಿಂತರೆ ಚಿಂತಿಸುವ ಅಗತ್ಯವಿಲ್ಲ. ಕೃಷಿ ಯಂತ್ರೋಪಕರಣಗಳು ಕೆಟ್ಟು ನಿಂತ ರೈತರು ಮಾಹಿತಿ ನೀಡಿದರೆ ನಮ್ಮ ಸೂರ್ಯ ಎಂಟರ್ ಪ್ರೈಸಸ್ ಶಕ್ತಿಮಾನ್ ಸಂಸ್ಥೆಯ ಟ್ಯಾಕ್ಟರ್ ಮತ್ತು ರೋಟರಿ ಸರ್ವಿಸ್ ಸೆಂಟರ್ ವತಿಯಿಂದ ರೈತರ ಮನೆ ಅಥವಾ ಜಮೀನಿನ ಬಳಿ ಹೋಗಿ ದುರಸ್ತಿ ಮಾಡಿಕೊಡಲಾಗುವುದು ಹಾಗಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಕ್ತಿಮಾನ್ ಕೃಷಿ ಯಂತ್ರೋಪಕರಣ ಸರಬರಾಜು ಸಂಸ್ಥೆಯ ಅಧಿಕಾರಿ ರವೀಶ್ ರೈತರಲ್ಲಿ ಮನವಿ ಮಾಡಿದರು.
ಶಕ್ತಿಮಾನ್ ಸಂಸ್ಥೆಯ ಅಧಿಕಾರಿ ಜಾನ್ಸನ್ ಮಾತನಾಡಿ ರೈತರು ಬಳಸುವ ಕೃಷಿ ಯಂತ್ರೋಪಕರಣಗಳು ಕೆಟ್ಟು ನಿಂತರೆ 15ರಿಂದ 20ಕಿಮೀಟರ್ ದೂರದ ಪಟ್ಟಣಕ್ಕೆ ಬಂದು ದುರಸ್ತಿ ಮಾಡಿಕೊಳ್ಳಲು ತುಂಬಾ ತೊಂದರೆ ಇರುತ್ತದೆ. ಇದನ್ನು ತಪ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಮ್ಮ ಶಕ್ತಿಮಾನ್ ಕೃಷಿ ಯಂತ್ರೋಪಕರಣಗಳನ್ನು ಬಳಸುವ ರೈತರಿಗೆ ರೈತರ ಮನೆ ಬಾಗಿಲಿಗೆ ಹೋಗಿ ದುರಸ್ತಿ ಮಾಡಿಕೊಡುವ ನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ ಇದರಿಂದ ರೈತರ ಶ್ರಮ ಮತ್ತು ಹೆಚ್ಚಿನ ಖರ್ಚು ಉಳಿತಾಯವಾಗುತ್ತದೆ. ಈ ಯೋಜನೆ ಇಡೀ ಮಂಡ್ಯ ಜಿಲ್ಲೆಯ ರೈತ ಬಾಂದವರಿಗೂ ಲಭ್ಯವಿರುತ್ತದೆ ಇದನ್ನು ಜಿಲ್ಲೆಯ ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಾನ್ಸನ್ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕೃಷಿ ತಾಂತ್ರಿಕ ಅಧಿಕಾರಿ ಶ್ರೀಧರ್, ಶಕ್ತಿಮಾನ್ ಕಂಪನಿಯ ಅಧಿಕಾರಿಗಳಾದ ರವೀಶ್, ಜಾನ್ಸನ್, ಕೌಶಿಕ್, ನಾಗೇಂದ್ರ, ಕಾವ್ಯ, ಜಯಕುಮಾರ್, ಚಂದನ್, ಶಿವು, ಮತ್ತಿತರರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.
