ಚನ್ನರಾಯಪಟ್ಟಣ: ರೈತರ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದನ್ನು ರೂಡಿಸಿಕೊಂಡಲ್ಲಿ ಇದರಿಂದ ಬ್ಯಾಂಕ್ ಬೆಳವಣಿಗೆಯಾಗುವುದರ ಜೊತೆಗೆ ರೈತರಿಗೆ ಮತ್ತಷ್ಟು ಸಾಲ ನೀಡಲು ಹಣದ ಲಭ್ಯತೆಯಾಗಲಿದೆ ಎಂದು ಪಟ್ಟಣದ ಪೀಕಾರ್ಡ್ ಬ್ಯಾಂಕ್ನ ಅಧ್ಯಕ್ಷರಾದ ಬಿ.ಎನ್.ಮಂಜುನಾಥ್ ತಿಳಿಸಿದರು.
ಬ್ಯಾಂಕ್ನ ಆವರಣದಲ್ಲಿ ಗುರುವಾರದಂದು ನಡೆದ 2025-2026ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕಿನ ಪೀಕಾರ್ಡ್ ಬ್ಯಾಂಕ್ನಿoದ ಸಾವಿರಾರು ರೈತರಿಗೆ ಮಧ್ಯಮ, ಮತ್ತು ದೀರ್ಘಾವಧಿ ಸಾಲಗಳನ್ನು ನೀಡುತ್ತಾ ಬರಲಾಗಿದೆ. ಬ್ಯಾಂಕ್ ಸುದೀರ್ಘ ಅವಧಿಗೆ ಉತ್ತಮವಾಗಿ ನಡೆಸಿಕೊಂಡು ಹೋಗಬೇಕಾದ್ದಲ್ಲಿ ಸುಸ್ತಿದಾರರು ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಬೇಕು. ಕಳೆದ ಎರಡ್ಮೂರು ವರ್ಷಗಳ ಹಿಂದೆ ಸಾಲ ಮರುಪಾವತಿ ಇಲ್ಲದೇ ಬ್ಯಾಂಕಿನ ವಹಿವಾಟು ನಿಷ್ಕ್ರಿಯವಾಗಿತ್ತು. ಎಲ್ಲ ನಿರ್ದೇಶಕರು ಸುಸ್ತಿದಾರರಾದ ರೈತರನ್ನು ಮನವೊಲಿಸಿ ಹಣ ಕಟ್ಟಿಸಿದ ಪರಿಣಾಮ ಬ್ಯಾಂಕ್ ಅಭಿವೃದ್ಧಿಯತ್ತ ಸಾಗಿದೆ ಎಂದರು.
ಸರ್ಕಾರ ಹೊಸ ರೈತರಿಗೆ ಸಾಲ ನೀಡುವ ಉದ್ದೇಶಕ್ಕಾಗಿ ಎರಡು ಅವಧಿಗೆ 10 ಕೋಟಿ ರೂ. ಹಣ ನೀಡಿತ್ತು, ಇದೀಗ 6 ಕೋಟಿ ರೂ. ನೀಡಿದೆ. ನಮ್ಮ ಖಾತೆಗೆ ಜಮೆಯಾಗುವುದಷ್ಟೆ ಬಾಕಿಯಿದೆ. ಈಗಾಗಲೇ ಸುಸ್ತಿದಾರರದವರಿಗೆ ಬಾಕಿ ಕಟ್ಟಿದ್ದಲ್ಲಿ ಪುನಃ ಸಾಲ ನೀಡುವ ಭರವಸೆಯನ್ನು ನೀಡಿರುವುದರಿಂದ ಮೊದಲಿಗೆ ಅವರಿಗೆ ಸಾಲ ನೀಡಿ ಉಳಿಕೆ ಹಣದಿಂದ ಹೊಸ ರೈತರಿಗೆ ಸಾಲ ನೀಡುವ ತೀರ್ಮಾನವನ್ನು ಆಡಳಿತ ಮಂಡಳಿ ಮಾಡಿದ್ದು, ರೈತರ ಸಹಕರಿಸಬೇಕೆಂದ ಅವರು, ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 20 ಲಕ್ಷ ರೂ. ನಿವ್ವಳ ಲಾಭ ದಾಖಲಿಸಿದೆ. ಲಾಭದ ಹಣದಲ್ಲಿ ಪ್ರಾಧಿಕಾರದಿಂದ ೩೪೫ ಚ.ಮೀಟರ್ ಆಳತೆ ನಿವೇಶನವನ್ನು ಬ್ಯಾಂಕಿನ ಅಭಿವೃದ್ಧೀ ಉದ್ದೇಶಕ್ಕೆ ಖರೀದಿ ಮಾಡಲಾಗಿದೆ ಎಂದರು.

ಬ್ಯಾಂಕಿನ ಮಾಜಿ ಅಧ್ಯಕ್ಷ ಎಂ.ಶoಕರ್ ಮಾತನಾಡಿ, ತಾಲ್ಲೂಕಿನ ಪಿಎಲ್ಡಿ ಬ್ಯಾಂಕಿನಿoದ ಅತಿಹೆಚ್ಚು ರೈತರು ಸಾಲ ಪಡೆದು ಅಭಿವೃದ್ಧಿ ಸಾಧಿಸಿದ್ದಾರೆ. ಸಾಲ ಪಡೆದವರು ನಿಯಮಿತವಾಗಿ ಮರುಪಾವತಿಗೆ ಮುಂದಾಗಬೇಕು. ಪಡೆದ ಸಾಲವನ್ನು ಪಡೆದ ಉದ್ದೇಶಕ್ಕಷ್ಟೆ ಬಳಸಬೇಕು. ಇತರೆ ಬಳಕೆಗೆ ಮುಂದಾಗಬಾರದು ಎಂದ ಅವರು ಜಮೀನಿಗೆ ಮೌಲ್ಯ ಬಂದಿದ್ದು, ಭೂಮಿಯನ್ನು ಕಳೆಯದಂತೆ ಎಚ್ಚರವಹಿಸಬೇಕೆಂದರು. ಆರoಭದಲ್ಲಿ ಬ್ಯಾಂಕಿನ ವಾರ್ಷಿಕ ವರದಿಯನ್ನು ಬ್ಯಾಂಕಿನ ವ್ಯವಸ್ಥಾಪಕ ಎಂ.ಎಸ್.ಧರ್ಮ ಸಭೆಗೆ ಮಂಡಿಸಿದರು. ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದ ರೈತರನ್ನು ಅಭಿನಂದಿಸಲಾಯಿತ್ತು.
ಈ ವೇಳೆ ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಎಂ.ಆರ್.ಮoಜುನಾಥ್, ನಿರ್ದೇಶರುಗಳಾದ ಎನ್.ಟಿ.ಬೊಮ್ಮೇಗೌಡ, ನಂಜುoಡೇಗೌಡ, ಕೆ.ಟಿ.ನಟೇಶ್, ಕೆ.ಆರ್.ಬಾಬು, ಮಧುಕುಮಾರ್, ಕಿರಣ್ ಬೂಕ, ಎ.ಬಿ.ನಂಜುoಡೇಗೌಡ, ಎಂ.ಎ.ಕುಮಾರಸ್ವಾಮಿ, ಕನ್ಯಾಕುಮಾರಿ, ಭಾರತಿಪಾಂಡು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್.ಮೂರ್ತಿ , ಪಿ ಎಲ್ ಡಿ ಬ್ಯಾಂಕಿನ ಸಿಬ್ಬಂದಿಗಳಾದ ಧರ್ಮ, ದೇವರಾಜ್, ಕುಮಾರಿ, ಶಿಲ್ಪ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ.
