ತುಮಕೂರು:ಶ್ರೀ ಸಂಕಷ್ಠಹರ ಗಣಪತಿ ವಕೀಲರ ಕಲಾ ಬಳಗ(ರಿ),ತುಮಕೂರು ಜಿಲ್ಲಾ ವಕೀಲರ ಸಂಘ ಇವರ ಸಹಯೋಗದೊಂದಿಗೆ ಪುನರ್ ನಿರ್ಮಾಣಗೊಂಡಿರುವ ತಾಲ್ಲೋಕು ಗಣಪತಿ ದೇವಸ್ಥಾನದ ಉದ್ಘಾಟನಾ ಸಮಾರಂಭದ ಪ್ರಯುಕ್ತ ನ್ಯಾಯಾಲಯದ ಆವರಣದಲ್ಲಿ ನಡೆದ ಸಂಪೂರ್ಣ ರಾಮಾಯಣ ಎಂಬ ಪೌರಾಣಿಕ ನಾಟಕವನ್ನು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮೊಹಮ್ಮದ್ ಅಶ್ರಫ್ ಹ್ಯಾರಿಸ್ ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸುನಿಲ್.ಎಸ್.ಹೊಸಮನಿ,ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿಮಹೇಶ್,ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಎಂ.ಎನ್.ಮಧುಸೂಧನ್, ಧನಂಜಯ, ನಾರಾಯಣಸ್ವಾಮಿ, ಎಂ.ಸಿ.ಚಂದ್ರಯ್ಯ, ಶಿವಮಹದೇವಯ್ಯ. ಆರ್.ತಿಪ್ಪೇಸ್ವಾಮಿ, ಹನುಮಂತರಾಯಪ್ಪ ಇತರರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ
