ಹಾರನಹಳ್ಳಿ: ಚಂದ್ರೇಗೌಡರವರ ವೃತ್ತಿ ಜೀವನ ಆರೋಗ್ಯಕರವಾಗಿದ್ದು, ಮುಂದಿನ ದಿನಗಳು ಸುಖಕರವಾಗಿರಲಿ ಎಂದು ಅವರ ಕುಟುಂಬದ ಆಪ್ತರು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.
ಚಂದ್ರೇಗೌಡರವರ ಪುತ್ರಿ ಶ್ರೀಮತಿ ದೀಪ್ತಿ ಅವರೊಂದಿಗೆ ಶಾಲಾ ದಿನಗಳಿಂದಲೂ ಸ್ನೇಹ ಹೊಂದಿರುವ ಶ್ರೀಮತಿ ದೀಪಶ್ರೀ ಪ್ರಮೋದ್ ಅವರು, ದೀಪ್ತಿ ಅವರು 7ನೇ ತರಗತಿಗೆ ಹಾರನಹಳ್ಳಿಗೆ ಬಂದ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ಪರಿಚಯ ಬೆಳೆದು, ನಂತರ ದ್ವಿತೀಯ ಪಿಯುಸಿವರೆಗೂ ಒಟ್ಟಿಗೆ ವಿದ್ಯಾಭ್ಯಾಸ ಮಾಡಿರುವುದನ್ನು ಸ್ಮರಿಸಿದ್ದಾರೆ.
ಚಂದ್ರೇಗೌಡರವರ ಧರ್ಮಪತ್ನಿ ಶ್ರೀಮತಿ ಮಂಜುಳ ಅವರು ಕುಟುಂಬದವರಷ್ಟೇ ಅಲ್ಲದೆ, ತಮ್ಮ ಮಕ್ಕಳ ಸ್ನೇಹಿತರು ಹಾಗೂ ವಿವಿಧ ಗ್ರಾಮಗಳಿಂದ ಚಂದ್ರೇಗೌಡರನ್ನು ಭೇಟಿಯಾಗಲು ಬರುತ್ತಿದ್ದವರಿಗೂ ಆತ್ಮೀಯವಾಗಿ ಅನ್ನ-ಆತಿಥ್ಯ
. ಅವರ ಸರಳತೆ, ಆತ್ಮೀಯತೆ ಹಾಗೂ ಅನ್ನಪೂರ್ಣೇಶ್ವರಿ ಸ್ವರೂಪದ ಸೇವಾ ಮನೋಭಾವವನ್ನು ಸ್ನೇಹಿತರು ಸ್ಮರಿಸಿದ್ದಾರೆ.
ಚಂದ್ರೇಗೌಡರವರ ವೃತ್ತಿ ಜೀವನ ಉತ್ತಮ ಆರೋಗ್ಯ, ನೆಮ್ಮದಿ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಅವರ ಪುತ್ರಿ ದೀಪ್ತಿ ಯೋಗೇಶ್ ಅವರ ಸ್ನೇಹಿತರಾದ ಶ್ರೀಮತಿ ದೀಪಶ್ರೀ ಪ್ರಮೋದ್, ಶ್ರೀಮತಿ ಚೈತ್ರ ರಘು, ಶ್ರೀಮತಿ ಗೀತಾ ಪ್ರಕಾಶ್, ಶ್ರೀಮತಿ ಭಾಗ್ಯ ಮೃತ್ಯುಂಜಯ ಹಾಗೂ ಶ್ರೀಮತಿ ಶ್ವೇತಾ ರಾಂಪುರ ಅವರು ಶುಭಾಶಯ ಕೋರಿದ್ದಾರೆ.
