ಸುಮಧುರ ಗ್ರೂಪ್ ಚೆನ್ನೈಗೆ ಪಾದಾರ್ಪಣೆ: 52 ಎಕರೆ ವಿಸ್ತೀರ್ಣದಲ್ಲಿ ಗ್ರೇಡ್-ಎ ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಪಾರ್ಕ್ ನಿರ್ಮಾಣಕ್ಕೆ ಸಜ್ಜು, ₹400 ಕೋಟಿ ಹೂಡಿಕೆ
ಬೆಂಗಳೂರು ಸೆಪ್ಟೆಂಬರ್ 1,2026: ದಕ್ಷಿಣ ಭಾರತದ ಪ್ರಮುಖ ವೈವಿಧ್ಯಮಯ ರಿಯಲ್ ಎಸ್ಟೇಟ್ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿರುವ ಸುಮಧುರ ಗ್ರೂಪ್ ಚೆನ್ನೈನಲ್ಲಿ ಮೊದಲ ಗ್ರೇಡ್-ಎಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಪಾರ್ಕ್ ನಿರ್ಮಿಸುವ ಮೂಲಕ ತನ್ನ ಕಾರ್ಯಚಟುವಟಿಕೆ ವಿಸ್ತರಿಸಲುಸಜ್ಜಾಗಿದೆ.
ಉತ್ತರ ಚೆನ್ನೈನ ರೆಡ್ ಹಿಲ್ಸ್ನ ಚೆನ್ನೈ ಪೆರಿಫೆರಲ್ ರಿಂಗ್ ರೋಡ್ (CPRR) ಸಮೀಪ ಈ ಯೋಜನೆರೂಪಗೊಳ್ಳಲಿದ್ದು, ಇದಕ್ಕಾಗಿ ಸುಮಾರು ₹400 ಕೋಟಿ ಹೂಡಿಕೆ ಮಾಡಲಾಗುತ್ತಿದೆ.
ಪ್ರಸ್ತಾವಿತಯೋಜನೆಯ ಭಾಗವಾಗಿ 52 ಎಕರೆ ಭೂಪ್ರದೇಶದಲ್ಲಿ ಸುಮಾರು 12 ಲಕ್ಷ ಚದರ ಅಡಿ ಗ್ರೇಡ್-ಎಗೋದಾಮು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಯೋಜನೆಯ ಮೂಲಕ ಸರಿಸುಮಾರು 2,500 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದ್ದು, ಯೋಜನೆಯಕಾಮಗಾರಿಯನ್ನು 2028ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಈಗಾಗಲೇ ಬೆಂಗಳೂರಿನ ಹೊಸಕೋಟೆಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಸುಮಧುರ ಲಾಜಿಸ್ಟಿಕ್ಸ್ಪಾರ್ಕ್ನ ಗ್ರೇಡ್-ಎ ಗುಣಮಟ್ಟದ ಮಾನದಂಡಗಳನ್ನು ಆಧರಿಸಿ ಯೋಜನೆಯನ್ನುಅಭಿವೃದ್ಧಿಪಡಿಸಲಾಗಿದೆ.
ಉದ್ಯಮಗಳ ಅಗತ್ಯಗಳಿಗೆ ಅನುಗುಣವಾಗಿ ಸುರಕ್ಷತಾ ವ್ಯವಸ್ಥೆ, ಸಾಮಾನ್ಯ ವ್ಯವಹಾರ ಸೌಲಭ್ಯಗಳುಮತ್ತು ಆಧುನಿಕ ಮೂಲಸೌಕರ್ಯದ ಜತೆಗೆ ಸುಸ್ಥಿರ ಹಾಗೂ ಪರಿಸರ ಸ್ನೇಹಿ ವಿನ್ಯಾಸಕ್ಕೆಯೋಜನೆಯಲ್ಲಿ ಆದ್ಯತೆ ನೀಡಲಾಗುತ್ತದೆ.
“ಉತ್ಪಾದನಾ ಕ್ಷೇತ್ರದ ಬೆಳವಣಿಗೆಗೆ ಈ ಪಾರ್ಕ್ ನೆರವಾಗಲಿದೆ,ಮಾತ್ರವಲ್ಲದೇ,ಆಟೋಮೊಬೈಲ್, ಇ-ಕಾಮರ್ಸ್, 3PL ಸೇರಿದಂತೆ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುವಕಂಪನಿಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ.
ಆಧುನಿಕ ಗೋದಾಮು ಹಾಗೂ ಲಾಜಿಸ್ಟಿಕ್ಸ್ ಸೌಲಭ್ಯಗಳೊಂದಿಗೆ, ಕಂಪನಿಗಳಿಗೆ ಸುಗಮಕಾರ್ಯಾಚರಣೆ ಮತ್ತು ಪರಿಣಾಮಕಾರಿ ಸರಕು ನಿರ್ವಹಣೆಗೆ ಅನುಕೂಲ ಕಲ್ಪಿಸುವುದು ಯೋಜನೆಯಪ್ರಮುಖ ಆದ್ಯತೆಯಾಗಿದೆ.
ರೆಡ್ ಹಿಲ್ಸ್ನಲ್ಲಿರುವ ಈ ಯೋಜನೆಯು ಪ್ರಮುಖ ಕೈಗಾರಿಕಾ ಮತ್ತು ಗೋದಾಮು ವಲಯಗಳಿಗೆಉತ್ತಮ ಸಂಪರ್ಕವನ್ನು ಹೊಂದಿದೆ. ಪ್ರಮುಖ ಹೆದ್ದಾರಿಗಳು, ಚೆನ್ನೈ ಅಂತರರಾಷ್ಟ್ರೀಯ ವಿಮಾನನಿಲ್ದಾಣ, ಕೇಂದ್ರ ವ್ಯಾಪಾರ ಜಿಲ್ಲೆ (CBD) ಹಾಗೂ ಪ್ರಾದೇಶಿಕ ಸರಬರಾಜು ಸೇವೆಗಳಿಗೆ ಸುಗಮಸಂಪರ್ಕ ಕಲ್ಪಿಸುವ ಮೂಲಕ, ಸರಕು ಸಾಗಣೆ ಮತ್ತು ವಿತರಣಾ ಕಾರ್ಯಾಚರಣೆಗಳಿಗೆ ಹೆಚ್ಚಿನಅನುಕೂಲ ಒದಗಿಸಲಿದೆ.
ಅಲ್ಲದೆ, ಎನ್ನೋರ, ಕಾಟುಪಳ್ಳಿ ಮತ್ತು ಚೆನ್ನೈ ಬಂದರುಗಳಿಗೆ ಸಮೀಪದಲ್ಲಿರುವುದರಿಂದ ಈಯೋಜನೆಯು ದೇಶೀಯ ಸರಕು ವಿತರಣೆ ಹಾಗೂ ರಫ್ತು ಚಟುವಟಿಕೆಗಳಿಗೆ ವೇಗ ಮತ್ತು ಸುಗಮಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.
ಸುಮಧುರ ಗ್ರೂಪ್ ಈಗಾಗಲೇ ಬೆಂಗಳೂರಿನ ಹೊಸಕೋಟೆಯಲ್ಲಿ 25 ಲಕ್ಷ ಚದರ ಅಡಿ ವಿಸ್ತೀರ್ಣದಗ್ರೇಡ್-A+ ಲಾಜಿಸ್ಟಿಕ್ಸ್ ಪಾರ್ಕ್ ಅನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಇಲ್ಲಿ ನಿಪ್ಪಾನ್ ಎಕ್ಸ್ಪ್ರೆಸ್(NX Logistics), ಅಮೆಜಾನ್, ಜೆಪ್ಟೋ ಮತ್ತು ಝೊಮ್ಯಾಟೊ ಸೇರಿದಂತೆ ಹಲವು ಪ್ರಮುಖಕಂಪನಿಗಳು ತಮ್ಮ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.
ಸುಮಧುರ ಗ್ರೂಪ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಧುಸೂಧನ್ ಜಿ. ಮಾತನಾಡಿ, ಪ್ರ ಬಲ ಉತ್ಪಾದನಾ ವಲಯ, ಅತ್ಯುತ್ತಮ ಬಂದರು ಸಂಪರ್ಕ ಮತ್ತು ರೆಡ್ ಹಿಲ್ಸ್, ಶ್ರೀಪೆರಂಬದೂರುಹಾಗೂ ಓರಗಡಂನಂತಹ ಪ್ರಮುಖ ಕೈಗಾರಿಕಾ–ಲಾಜಿಸ್ಟಿಕ್ಸ್ ಹಬ್ಗಳ ವೇಗದ ಬೆಳವಣಿಗೆಯಿಂದಾಗಿ“ಚೆನ್ನೈ’’ ನಮ್ಮ ವೇರ್ಹೌಸಿಂಗ್ ವ್ಯವಹಾರದ ವಿಸ್ತರಣೆಗೆ ಅತ್ಯಂತ ಸೂಕ್ತವಾದ ತಾಣವಾಗಿದೆ ಎಂದು ಹೇಳಿದರು.
ಸುಮಧುರ ಗ್ರೂಪ್ನ ಇಂಡಸ್ಟ್ರಿಯಲ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ ನಿರ್ದೇಶಕ ವಂಶಿ ಕರಂಗುಲಮಾತನಾಡಿ, ಭಾರತದಲ್ಲಿ ಗ್ರೇಡ್-A ಗೋದಾಮುಗಳತ್ತ ಕಂಪನಿಗಳ ಆಸಕ್ತಿ ವೇಗವಾಗಿ ಹೆಚ್ಚುತ್ತಿದೆ.
ಗುಣಮಟ್ಟದ ಮೂಲಸೌಕರ್ಯ ಹಾಗೂ ದೊಡ್ಡ ಪ್ರಮಾಣದ ವೇರ್ಹೌಸಿಂಗ್ ಸ್ಥಳಗಳಿಗೆ ಬೇಡಿಕೆಮುಂದಿನ ದಿನಗಳಲ್ಲಿ ಮತ್ತಷ್ಟು ವೃದ್ಧಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
2026ರ ಮೊದಲಾರ್ಧದಲ್ಲಿ ಚೆನ್ನೈನಲ್ಲಿ 41 ಲಕ್ಷ ಚದರ ಅಡಿ ಗ್ರೇಡ್-A ಕೈಗಾರಿಕಾ ಮತ್ತುವೇರ್ಹೌಸಿಂಗ್ ಸ್ಥಳದ ಬೇಡಿಕೆ ದಾಖಲಾಗಿದೆ. ದೇಶದ ಪ್ರಮುಖ ಎಂಟು ನಗರಗಳ ಪೈಕಿ ಇದುಎರಡನೇ ಅತಿ ಹೆಚ್ಚಿನ ಪ್ರಮಾಣವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಚೆನ್ನೈನಲ್ಲಿಈ ಸ್ಥಳಗಳ ಬೇಡಿಕೆ ಶೇ.11ರಷ್ಟು ಹೆಚ್ಚಾಗಿದೆ.
ದೆಹಲಿ ಎನ್ಸಿಆರ್ ಜತೆಗೆ, ಪ್ರಸ್ತುತ ಸಾಲಿನಲ್ಲಿ ಗ್ರೇಡ್-ಎ ಕೈಗಾರಿಕಾ ಮತ್ತು ವೇರ್ಹೌಸಿಂಗ್ ವಲಯದ ಒಟ್ಟು ಲೀಸಿಂಗ್ನಲ್ಲಿ ಚೆನ್ನೈ ಶೇಕಡಾ 45ಕ್ಕೂ ಹೆಚ್ಚಿನ ಪಾಲು ಹೊಂದಿದೆ. ಈ ಅಂಕಿ-ಅಂಶಗಳು ಪ್ರಮುಖ ಉತ್ಪಾದನಾ ಮತ್ತು ಲಾಜಿಸ್ಟಿಕ್ಸ್ ಕೇಂದ್ರವಾಗಿ ಚೆನ್ನೈ ವೇಗವಾಗಿ ಬೆಳೆಯುತ್ತಿರುವುದನ್ನು ಸೂಚಿಸುತ್ತದೆ.
ಪ್ರಮುಖ ಉತ್ಪಾದನಾ ಹಾಗೂ ಲಾಜಿಸ್ಟಿಕ್ಸ್ ಕೇಂದ್ರವಾಗಿ ಚೆನ್ನೈಯ ಮಹತ್ವ ಮತ್ತು ಬೆಳವಣಿಗೆ ವೇಗವಾಗಿ ಹೆಚ್ಚುತ್ತಿರುವುದನ್ನು ಈ ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.
ಚೆನ್ನೈನ ಯೋಜನೆಪೂರ್ಣಗೊಂಡ ಬಳಿಕ ಸುಮಧುರ ಗ್ರೂಪ್ನ ಒಟ್ಟು ವೇರ್ಹೌಸಿಂಗ್ ಭೂಮಿ ಪೋರ್ಟ್ಫೋಲಿಯೊ150 ಎಕರೆಗೂ ಅಧಿಕವಾಗಲಿದೆ. ಇದರಿಂದ ದಕ್ಷಿಣ ಭಾರತದಲ್ಲಿ ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ಕ್ಷೇತ್ರದಲ್ಲಿ ತನ್ನ ವಿಸ್ತರಣೆಯನ್ನು ಮತ್ತಷ್ಟು ಬಲಪಡಿಸಲು ಸಂಸ್ಥೆಗೆ ನೆರವಾಗಲಿದೆ.
ಸುಮಧುರ ಗ್ರೂಪ್ ಬಗ್ಗೆ ಸುಮಧುರ ಗ್ರೂಪ್ ದಕ್ಷಿಣ ಭಾರತದ ಪ್ರಮುಖ ವೈವಿಧ್ಯಮಯ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿದ್ದು, ಸುಮಾರು ಮೂರು ದಶಕಗಳ ಅನುಭವದೊಂದಿಗೆ ವಸತಿ, ವಾಣಿಜ್ಯ ಮತ್ತುವೇರ್ಹೌಸಿಂಗ್ ಸೇರಿದಂತೆ ವಿವಿಧ ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ಯೋಜನೆಗಳನ್ನುಅಭಿವೃದ್ಧಿಪಡಿಸುತ್ತಿದೆ. ಬೆಂಗಳೂರಿನೊಂದಿಗೆ ಹೈದರಾಬಾದ್ನಲ್ಲಿಯೂ ಸಂಸ್ಥೆ ತನ್ನದೇ ಆದ ಛಾಪುಮೂಡಿಸಿದೆ.
ಇದುವರೆಗೆ 56ಕ್ಕೂ ಹೆಚ್ಚು ಯೋಜನೆಗಳನ್ನು ಒಟ್ಟು 1.7 ಕೋಟಿ ಚದರ ಅಡಿಗೂ ಅಧಿಕ ವಿಸ್ತೀರ್ಣದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಸಂಸ್ಥೆ, ಮುಂದಿನ ದಿನಗಳಲ್ಲಿ 4 ಕೋಟಿ ಚದರ ಅಡಿಗೂ ಅಧಿಕ ವಿಸ್ತೀರ್ಣದ ಹೊಸ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.
ವಸತಿ ಯೋಜನೆಗಳಿಗಷ್ಟೇ ಸೀಮಿತವಾಗದೆ, ವಾಣಿಜ್ಯ, ವೇರ್ಹೌಸಿಂಗ್, ಕೋ-ಲಿವಿಂಗ್ ಸೇರಿದಂತೆ ರಿಯಲ್ ಎಸ್ಟೇಟ್ನ ವಿವಿಧ ವಿಭಾಗಗಳಲ್ಲೂ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಮೂಲಕ ಸಂಸ್ಥೆ ತನ್ನ ವೈವಿಧ್ಯಮಯ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸಿದೆ.
