ಕೆ.ಆರ್.ಪೇಟೆ: ಶಾಸಕ ಹೆಚ್.ಟಿ. ಮಂಜು ಅವರ ಬಸವೇಶ್ವರನಗರದಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ಮೂರನೇ ದಿನವೂ ಗೌರಿ-ಗಣೇಶೋತ್ಸವ ಆಚರಣೆಗೆ ದೇಣಿಗೆ ವಿತರಿಸುವ ಕಾರ್ಯಕ್ರಮ ಮುಂದುವರಿಯಿತು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾಗರೋಪಾದಿಯಲ್ಲಿ ಆಗಮಿಸಿದ ಯುವಕರು ಶಾಸಕರನ್ನು ಭೇಟಿ ಮಾಡಿ ಗಣೇಶೋತ್ಸವಕ್ಕೆ ದೇಣಿಗೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಯುವಕರೊಂದಿಗೆ ಮಾತನಾಡಿದ ಶಾಸಕ ಹೆಚ್.ಟಿ. ಮಂಜು, “ಗ್ರಾಮಗಳಲ್ಲಿ ಯಾವುದೇ ಕಾರಣಕ್ಕೂ ಗೊಂದಲಕ್ಕೆ ಅವಕಾಶ ಮಾಡಿಕೊಡದೆ, ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ದಯುತವಾಗಿ ಗಣೇಶೋತ್ಸವವನ್ನು ಆಚರಿಸಬೇಕು” ಎಂದು ಕರೆ ನೀಡಿದರು.

ಗಣೇಶೋತ್ಸವವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಸಮಾಜದಲ್ಲಿ ಒಗ್ಗಟ್ಟು, ಸಹೋದರತ್ವ ಮತ್ತು ಸೌಹಾರ್ದತೆಯನ್ನು ಬೆಳೆಸುವ ಹಬ್ಬವಾಗಬೇಕು. ಯುವಕರು ಶಾಂತಿ, ಸಂಯಮ ಹಾಗೂ ಜವಾಬ್ದಾರಿಯಿಂದ ಹಬ್ಬವನ್ನು ಆಚರಿಸುವ ಮೂಲಕ ಮಾದರಿಯಾಗಬೇಕು ಎಂದು ಶಾಸಕ ಹೆಚ್.ಟಿ. ಮಂಜು ಸಲಹೆ ನೀಡಿದರು.
ಈ ವೇಳೆ ವಿವಿಧ ಗ್ರಾಮಗಳ ಯುವಕರ ಬಳಗದ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
