ಕೊರಟಗೆರೆ;- ತಾಲೂಕಿನ ಹೊಳವನಹಳ್ಳಿ ಗ್ರಾಮದ ಪೇಟೆ ಬೀದಿಯಲ್ಲಿ ಶ್ರೀ ವಿದ್ಯಾ ಗಣಪತಿ ಗೆಳೆಯರ ಬಳಗದವತಿಯಿಂದ 29 ನೇ ವರ್ಷದ ಗಣೇಶೋತ್ಸವ ಅದ್ದೂರಿಯಾಗಿ ವಿಸರ್ಜನೆ ನೆಡೆಯಿತು.
ಪೇಟೆ ಬೀದಿಯಲ್ಲಿರುವ ಯುವಕ ತಂಡ ಸತತ 29 ವರ್ಷದಿಂದ ವಿಶಿಷ್ಠವಾಗಿ ಗಣಪತಿಯನ್ನ ಕೂರಿಸಿಕೊಂಡು ಬರುತ್ತಿದ್ದು, ಈ ಭಾರಿ ಬರಗಾಲ ಇದ್ದ ಅಂಗವಾಗಿ ಗಣಪತಿ ಹೊಲ ಹೂಳುವ ರೀತಿಯಲ್ಲಿ ಗಣಪತಿಯನ್ನ ಕೂರಿಸಿದ್ದು ವಿಶೇಷವಾಗಿತ್ತು. ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿರುವ ಮನೆ, ದೀಪದ ಲಾಟಿನ್, ಒಲೆ, ನೇಗಿಲು, ಹಸು, ಬಾವಿ, ಜಪ್ಪರದ ಕೆಳಗೆ ರಾಗಿ ಪೈರು, ಸೇರಿದಂತೆ ಅಪ್ಪಟ ಹಳ್ಳಿ ಸೊಗಡನ್ನ ತೊರಿಸುವ ಪ್ರಯತ್ನ ಈ ಯುವಕರ ತಂಡ ಮಾಡಿದೆ.
ಈ ಯುವಕರ ತಂಡದ ವಿಶೇಷ ಏನಂದರೆ ಗ್ರಾಮದಲ್ಲಿ ಯಾರ ಹತ್ತಿರನೂ ಕೂಡ ಒಂದು ರೂಪಾಯಿಯನ್ನ ಪಡೆಯದೇ ತಮ್ಮ ಸ್ವಂತ ಹಣದಲ್ಲಿ ಪ್ರತಿವರ್ಷ ಗಣಪತಿಯನ್ನ ಕೂರಿಸಿಕೊಂಡು ಬರುತ್ತಿದ್ದಾರೆ, ಶನಿವಾರ ಹೊಳವನಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಗೋಷ್ಠಿಗಳೊಂದಿಗೆ ಗಣಪತಿಯನ್ನ ಮೆರವಣಿಗೆ ಮಾಡುವ ಮೂಲಕ ಗಣಪತಿ ವಿಸರ್ಜನೆ ಮಾಡಿದರು.

ಬರುವ ಭಕ್ತರಿಗೆ ಅನ್ನಸಂರ್ಪಣೆ ಮಾಡಲಾಗಿತ್ತು,
ಆಯೋಜಕ ಉಮೇಶ್ (ಗೊಟ್ಟು) ಮಾತನಾಡಿ, ಹೊಳವನಹಳ್ಳಿ ಗ್ರಾಮದ ಪೇಟೆ ಬೀದಿಯಲ್ಲಿ 29 ನೇ ವರ್ಷದ ಗಣಪತಿಯನ್ನ ಕೂರಿಸಿಕೊಂಡು ಬರುತ್ತಿದ್ದು, ಈ ಯುವಕರ ತಂಡದಲ್ಲಿ ಯಾವುದೇ ಹುದ್ದೆಯನ್ನ ನೀಡಿಲ್ಲ ಎಲ್ಲರೂ ಸಮಾನರು ಎನ್ನವ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಬಾರಿ ಬರಗಾಲ ಇದ್ದ ಅಂಗವಾಗಿ ಗಣಪತಿಯಲ್ಲಿ ಹೊಲ ಹೂಳುವ ರೀತಿಯಲ್ಲಿ ಗಣಪತಿಯನ್ನ ಕೂರಿಸಲಾಗಿದೆ ಎಂದರು.
ಯುವಕರ ತಂಡದ ಅಭಿಷೇಕ್(ಗಜ) ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಜಪ್ಪರದ ಮನೆ, ದೀಪದ ಲಾಟಿನ್, ಒಲೆ, ನೇಗಿಲು, ಹಸು, ಬಾವಿ, ಜಪ್ಪರದ ಕೆಳಗೆ ರಾಗಿ ಪೈರು, ಸೇರಿದಂತೆ ಅಪ್ಪಟ ಹಳ್ಳಿ ಸೊಗಡನ್ನ ತೊರಿಸುವ ಪ್ರಯತ್ನ ಮಾಡಲಾಗಿದ್ದು, ಹೊಳವನಹಳ್ಳಿ ಗ್ರಾಮದ ಮಹಿಳೆಯರು ಯುವಕರು ಇಲ್ಲಿಗೆ ಬಂದು ಬೇಟಿ ನೀಡಿ ಗಣಪತಿಯ ದರ್ಶನವನ್ನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಸಂತೋಷ್(ಗಂಗಣ್ಣ) ರಮೇಶ್, ಶರಣ್, ಚಂದ್ರು, ಶರಣ್ಶಟ್ಟಿ, ಶ್ರೀನಿವಾಸ್, ರಾಜೇಶ್, ಶಶಿ, ಹೇಮಂತ್, ಮಂಜುನಾಥ್, ವಿವೇಕ್, ಮನೋಜ್, ಸಂತೋಷ್, ಕಿರಣ್ (ಡಿಸಿಸಿ) ಶರಣ್ ಸೇರಿದಂತೆ ಇತರರು ಇದ್ದರು.
– ಶ್ರೀನಿವಾಸ್ ಆರ್.
