ಚನ್ನರಾಯಪಟ್ಟಣ: ಅಬಕಾರಿ ಪ್ರಕರಣಗಳಲ್ಲಿ ಸರ್ಕಾರಕ್ಕೆ ವಶಪಡಿಸಿಕೊಳ್ಳಲಾಗಿದ್ದ ಅಕ್ರಮ ಮದ್ಯ ಹಾಗೂ ಸೇಂದಿಯನ್ನು ಅಬಕಾರಿ ಅಧಿಕಾರಿಗಳ ಆದೇಶದಂತೆ ಬುಧವಾರ ನಾಶಪಡಿಸಲಾಯಿತು.
ಅಬಕಾರಿ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಜನವರಿ 2025ರಿಂದ ಸೆಪ್ಟೆಂಬರ್ 2026ರವರೆಗೆ ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಒಟ್ಟು ₹60 ಸಾವಿರ ಮೌಲ್ಯದ 92.580 ಲೀಟರ್ ಮದ್ಯ ಹಾಗೂ 27.500 ಲೀಟರ್ ಸೇಂದಿಯನ್ನು ಚನ್ನರಾಯಪಟ್ಟಣ ವಲಯ ಕಚೇರಿ ಆವರಣದಲ್ಲಿ ನಾಶಪಡಿಸಲಾಯಿತು.
ಪ್ರಾಧಿಕೃತ ಅಧಿಕಾರಿಗಳು ಹಾಗೂ ಹಾಸನ ಜಿಲ್ಲಾ ಅಬಕಾರಿ ಉಪ ಆಯುಕ್ತರ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದ್ದು, ರಾಜಸ್ವ ನಿರೀಕ್ಷಕ ಮಂಜುನಾಥ ಎಂ.ಆರ್., ಹಾಸನ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ರಘು ಎಂ.ಹೆಚ್. ಅವರ ಉಪಸ್ಥಿತಿಯಲ್ಲಿ ವಶಪಡಿಸಿಕೊಂಡಿದ್ದ ಮದ್ಯವನ್ನು ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಚನ್ನರಾಯಪಟ್ಟಣ ವಲಯದ ಅಬಕಾರಿ ನಿರೀಕ್ಷಕಿ ನೂರ್ ಜಹರಾ ಎನ್.ಐ., ಅಬಕಾರಿ ಉಪ ನಿರೀಕ್ಷಕರಾದ ಶಮೀಲ್ ಅಹಮದ್ ಬೇಗ್, ಪ್ರೇಮಾನಂದ ಬಿ. ಹಾಗೂ ಅಬಕಾರಿ ಮುಖ್ಯ ಪೇದೆಗಳಾದ ಜೀವನ್ ಎನ್.ಎಸ್., ಅಭಿಲಾಷ್ ಕೆ., ಅಬಕಾರಿ ಪೇದೆ ಧ್ರುವಕುಮಾರ್ ಎ.ಎಂ. ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ
