ಕೆ.ಆರ್.ಪೇಟೆ: ತಾಲೂಕಿನ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕಮಹಾಸಭೆಯು ಸಂಘದ ಅಧ್ಯಕ್ಷ ಎಂ.ಬಿ.ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶೀಳನೆರೆ ಎಸ್.ಅಂಬರೀಶ್ ಅವರು ಮಹಾಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅಂಬರೀಶ್ ಅವರು ಸಹಕಾರ ಸಂಘಗಳು ರಾಜಕೀಯ ಮುಕ್ತವಾಗಿರಬೇಕು. ರೈತರ ಅಭಿವೃದ್ದಿಯಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರವಾಗಿದೆ. ಸಹಕಾರ ಸಂಘಗಳು ಆರಂಭವಾಗದೇ ಇದ್ದಲ್ಲಿ ರೈತರು ಬೇಸಾಯದ ಖರ್ಚು ವೆಚ್ಚಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಗೆ ಅಲೆಯಬೇಕಾಗಿತ್ತು. ಅಲೆದರೂ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಸಾಲ ನೀಡುತ್ತಿರಲಿಲ್ಲ. ಇದನ್ನು ಮನಗಂಡ ಗದಗ ಜಿಲ್ಲೆಯ ಕಣಗಿನಹಾಳದ ಸಹಕಾರಿ ಧುರೀಣರಾದ ಸಿದ್ದನಗೌಡ ಪಾಟೀಲ್ ಅವರು 1905 ರಲ್ಲಿ ಕಣಗಿನಹಾಳ ಗ್ರಾಮದಲ್ಲಿ ಪ್ರಥಮ ಸಹಕಾರ ಸಂಘವನ್ನು ರೈತರಿಂದ ವಂತಿಕೆ ಸಂಗ್ರಹಿಸಿ ಪ್ರಾರಂಭಿಸಿತು. ಇದು ಏಷ್ಯಾ ಖಂಡದಲ್ಲಿಯೇ ಮೊದಲ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂದು ದೇಶಾದ್ಯಂತ ಸಹಕಾರ ಸಂಘಗಳು ಪ್ರತಿ ಗ್ರಾಮಗಳಲ್ಲಿಯೂ ಆರಂಭವಾಗಿವೆ. ರೈತರಿಗೆ ಸಕಾಲದಲ್ಲಿ ಸಾಲ ಕೊಡುವ ಮೂಲಕ ರೈತರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಹಾಗಾಗಿ ಸಹಕಾರ ಸಂಘಗಳನ್ನು ಉಳಿಸಿಕೊಳ್ಳಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಅಂಬರೀಶ್ ಹೇಳಿದರು. ಸಾಲ ಮನ್ನ ಆಗುವುದಿಲ್ಲ.
ರಾಜ್ಯದಲ್ಲಿ ಬರಗಾಲ ಇರುವ ಕಾರಣ ಸಾಲ ಮನ್ನಾ ಆಗುಬಹುದು ಎಂದು ರೈತರು ಸಹಕಾರ ಸಂಘಗಳ ಸಾಲವನ್ನು ಮರುಪಾವತಿ ಮಾಡುವುದನ್ನು ನಿಲ್ಲಿಸಬಾರದು. ತೀವ್ರ ಬರಗಾಲ ಇರುವ ತಾಲ್ಲೂಕುಗಳಲ್ಲಿ ಮಾತ್ರ ಸಾಲ ಮರುಪಾವತಿಗೆ ಒಂದು ವರ್ಷ ಮುಂದೂಡಬಹುದು ಆದರೆ ಸಾಲಮನ್ನ ಆಗುವುದಿಲ್ಲ ಎಂದು ತಿಳಿಸಿದರು. ಸಂಘದ ಸಿಇಓ ಜೆ.ಎಸ್.ಚೇತನ್ ವಾರ್ಷಿಕ ವರದಿ ಮಂಡಿಸಿ, ಆಡಿಟ್ ವರದಿಯನ್ನು ಓದಿದರು. ಸಭೆಯಲ್ಲಿ ತಾಲೂಕು ಸಹಕಾರ ನಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್ ಕುಮಾರ್, ಸಂಘದ ಉಪಾಧ್ಯಕ್ಷ ನಂಜಪ್ಪಾಚಾರಿ ನಿರ್ದೇಶಕರಾದ ಹೊನ್ನೇನಹಳ್ಳಿ ಕೃಷ್ಣೇಗೌಡ, ಅಗಸರಹಳ್ಳಿ ಗೋವಿಂದರಾಜು, ಅಗಸರಹಳ್ಳಿ ಬಲರಾಮು, ನಾಡಬೋಗನಹಳ್ಳಿ ನಂಜುಂಡಪ್ಪ, ಮುರುಕನಹಳ್ಳಿ ಶಿವಸಾಗರ್, ನಾಗಮ್ಮ, ಸರಸ್ವತಿ, ರಾಜು, ಲಲಿತಮ್ಮ, ಮೇಲ್ವಿಚಾರಕ ಜಲೇಂದ್ರ, ಸಂಘದ ಕಾರ್ಯದರ್ಶಿ ಜೆ.ಎಸ್.ಚೇತನ್, ಗುಮಾಸ್ತರಾದ ಮಧುಚಂದ್ರ, ಎಂ.ಆರ್.ಸುರೇಶ್, ಹಾಗು ಸಂಘದ ಶೇರುದಾರರು, ಮುಖಂಡರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.
