ತುಮಕೂರು: ಮಹಾತ್ಮ ಗಾಂಧಿರವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದಿದ್ದರಿಂದ ಅಂದು ದೇಶಕ್ಕೆ ಸ್ವಾತಂತ್ರ್ಯ ಬಂತು,ಅವರ ಸರಳತೆ,ಸತ್ಯಾಗ್ರಹ,ಅಹಿಂಸಾ ಮಾರ್ಗ,ಉಪವಾಸದಂತಹ ಸರಳ ಮಾರ್ಗದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯದೊರಕಿತು,ಇಂದಿಗೂ ಸಹ ನಮಗೆ ಅನ್ಯಾಯವಾದರೆ ಮೊದಲು ನಾವು ಹೋಗುವುದೇ ಸತ್ಯಾಗ್ರಹ ಮಾರ್ಗಕ್ಕೆ ಅವರು ಹಾಕಿಕೊಟ್ಟ ಸರಳ ತತ್ವಗಳನ್ನು ನಾವು ಅನುಸರಿಸಬೇಕು,ಅವರು ನಡೆದ ಮಾರ್ಗ ಕಷ್ಟಕರವಾಗಿತ್ತು,ದಕ್ಷಿಣ ಆಫ್ರಿಕಾದಲ್ಲಿ ಅವರು ಪಟ್ಟ ಕಷ್ಟಗಳು ಒಂದೆರೆಡಲ್ಲ, ಆ ಎಲ್ಲ ಹಿಂಸೆಗಳನ್ನು ತಡೆದುಕೊಂಡು ನಮ್ಮ ದೇಶಕ್ಕೆ ಬಂದ ನಂತರ ಅವರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ನಮಗೆ ಸ್ವಾತಂತ್ರö್ಯ ಕೊಡಿಸಿದ್ದರಿಂದ ನಾವುಗಳು ಇಂದು ನೆಮ್ಮದಿಯಿಂದ ಇದ್ದೇವೆ,ಅದೇ ರೀತಿ ದೇಶ ಕಂಡ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿçರವರು ಸರಳ ವ್ಯಕ್ತಿತ್ವಕ್ಕೆ ಹೆಸರಾದವರು,ಕುಟುಂಬ ಸದಸ್ಯರು ಸರ್ಕಾರಿ ಕಾರು ಬಳಸಿದ್ದಕ್ಕೆ ತಕ್ಷಣವೇ ಸರ್ಕಾರಕ್ಕೆ ಡೀಸೆಲ್ ಹಣವನ್ನು ತುಂಬಿದ ಮಹಾನುಭಾವರು,ಜೈಜವಾನ್-ಜೈಕಿಸಾನ್ ಎಂದು ಹೇಳಿ ಸೈನಿಕರು ಮತ್ತು ರೈತರ ಬಗ್ಗೆ ಅಪಾರ ಜ್ಞಾನ ಮತ್ತು ಪೂಜ್ಯನೀಯ ಸ್ಥಾನವನ್ನು ನೀಡಿದ ಮಹಾನ್ ನಾಯಕ,ಅಂದಿನ ಇಂಡೋ-ಪಾಕ್ ಯುದ್ಧದಲ್ಲಿ ಗುಂಡಿಗೆ ಗುಂಡಿನ ಮೂಲಕವೇ ಉತ್ತರ ಎಂದು ಸಾರಿದವರು ಹೀಗೆ ಇಬ್ಬರೂ ಮಹಾನೀಯರು ಭಾರತೀಯರಾದ ನಮಗೆ ಪ್ರಾತಃಸ್ಮರಣೀಯರು ಎಂದು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ(ರಿ)ಯ ಅಧ್ಯಕ್ಷರಾದ ಟಿ.ಎಸ್.ಮೋಹನ್ ಕುಮಾರ್ ರವರು ತಿಳಿಸಿದರು.

ಅವರು ಇಂದು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ(ರಿ) ಕಚೇರಿಯಲ್ಲಿ ನಡೆದ ಗಾಂಧೀಜಿರವರ 157ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿರವರ 122ನೇ ಹುಟ್ಟುಹಬ್ಬದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಶ್ರೀಮತಿ ಸುನಂದಮ್ಮನವರು ಗಾಂಧೀಜಿ ಮತ್ತು ಶಾಸ್ತ್ರೀಜಿರವರು ಭಾರತೀಯರ ಹೆಮ್ಮೆ,ಇಬ್ಬರೂ ಮಹಾನ್ ನಾಯಕರು,ಅವರಿಬ್ಬರ ತ್ಯಾಗ ಸರಳ ಜೀವನ ದೇಶಕ್ಕೇ ಮಾದರಿ,ಗಾಂಧೀಜಿರವರು ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭಿಸಿದ ಹೋರಾಟದ ಕಿಚ್ಚು ಬಹಳ ದೊಡ್ಡದು,ಭಾರತೀಯರ ಮೇಲೆ ನಡೆಯುತ್ತಿದ್ದ ನಿರಂತರ ದಬ್ಬಾಳಿಕೆಯನ್ನು ಖಂಡಿಸಿದರು,ವರ್ಣಭೇದ ನೀತಿಯನ್ನು ಖಂಡಿಸಿ ಹೋರಾಟ ಮಾಡಿ ಭಾರತೀಯರಿಗೆ ಅಲ್ಲಿ ನ್ಯಾಯವನ್ನು ಕೊಡಿಸಿದರು,ಭಾರತದಲ್ಲಿ ಬ್ರಿಟೀಷರ ವಿರುದ್ಧ ಅಸಹಕಾರ ಚಳುವಳಿ ಪ್ರಾರಂಭಿಸಿ ಸತ್ಯಾಗ್ರಹಗಳನ್ನು ಮಾಡಿ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾದರು.
ಶಾಸ್ತ್ರೀಜಿಯವರು ಪ್ರಧಾನಿಯಾದರೂ ಸರಳವಾಗಿ ಬದುಕಿದವರು ಅವರ ಕಾಲದಲ್ಲಿ ಬರಬಂದಾಗ ಒಂದು ಹೊತ್ತು ಊಟವನ್ನು ತ್ಯಜಿಸಿ ಭಾರತೀಯರಿಗೂ ಕರೆ ನೀಡಿದರು,ರೈತರಿಗೆ ಹೆಚ್ಚು ಬೆಳೆ ಬೆಳೆಯಲು ಹೊಸ ಹೊಸ ತಳಿಗಳನ್ನು ಅನ್ವೇಷಣೆ ಮಾಡಿ ನೀಡಿ ಉತ್ತಮ ಬೆಳೆ ಬೆಳೆದು ಪ್ರಪಂಚಕ್ಕೆ ಮಾದರಿಯಾದರು,ಇಂತಹ ನಾಯಕರ ಅವಶ್ಯಕತೆ ಇಂದು ನಮಗಿದೆ ಎಂದು ತಿಳಿಸಿದರು.
ಷವೇದಿಕೆಯಲ್ಲಿ ಕಾರ್ಯದರ್ಶಿ ಶ್ರೀಮತಿಗೀತಾನಾಗೇಶ್, ಶ್ರೀಮತಿನಂದಿನಿ, ನಾಗೇಂದ್ರ, ಚೇತನ್, ಗುರುಪ್ರಸಾದ್, ಅಭಿಷೇಕ್, ಶ್ರೀಮತಿಅಂಬಿಕಾ, ಶ್ರೀಮತಿಚಂದನಾ, ಶ್ರೀಮತಿಶೈಲಜಾ, ಶ್ರೀಮತಿಲತಾನಾರಾಯಣ್ ಇತರರು ಉಪಸ್ಥಿತರಿದ್ದರು
– ಚಂದ್ರಚೂಡ ಕೆ.ಬಿ.
