ತುಮಕೂರು:ದುಶ್ಚಟಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದು ಮಹಾತ್ಮಗಾಂಧಿ ಕನಸು ಕಂಡಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಸಂಸ್ಥೆ ಮದ್ಯವರ್ಜನ ಶಿಬಿರಗಳ ಮೂಲಕ ಮದ್ಯವ್ಯಸನಿಗಳಿಗೆ ಹೊಸ ಬದುಕು ನೀಡುತ್ತಾ ಅವರ ಮನೆಯ, ಮನೆದ ದೀಪ ಬೆಳಗುತ್ತಿದೆ.ಆದರೆ ಸರ್ಕಾರ ಹಾಗೂ ರಾಜಕಾರಣಿಗಳು ಮದ್ಯವನ್ನು ಪ್ರೋತ್ಸಾಹಿಸುತ್ತಾ ಮನೆಗಳ ದೀಪ ಆರಿಸುತ್ತಿದ್ದಾರೆ ಎಂದು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನದ ಡಾ||ಹನುಮಂತನಾಥಸ್ವಾಮೀಜಿ ವಿಷಾದಿಸಿದರು.

ಗಾಂಧಿಜಯಂತಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಆಶ್ರಯದಲ್ಲಿ ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಸಭಾಭವನದಲ್ಲಿ ಶುಕ್ರವಾರ ನಡೆದದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಕುಡುಕರನ್ನು ಅವಹೇಳನ ಮಾಡುವ ಈ ಸಮಾಜದಲ್ಲಿ ಇಡೀ ಜಗತ್ತಿನಲ್ಲಿ ಕುಡುಕರಿಗೆ ವೇದಿಕೆ ನೀಡಿ, ಕುಡಿತ ಬಿಟ್ಟವರನ್ನು ಗೌರವಿಸುವ ಏಕೈಕ ಸಂಸ್ಥೆ ಎಂದರೆ ಅದು ಪೂಜ್ಯ ಡಾ||ಡಿ.ವೀರೇಂದ್ರಹೆಗ್ಗಡೆರವರು ಕಟ್ಟಿದ ಧರ್ಮಸ್ಥಳ ಸಂಸ್ಥೆ. ಒಂದು ಸರ್ಕಾರ ಮಾಡಬೇಕಾದ ಸಮಾಜ ಸುಧಾರಣಾ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಅಭಿನಂದಿಸಿದರು.

ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ನೀಡಿ ಅವರನು ್ನಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವುದರಿಂದ ಹಿಡಿದು, ದೇವಾಲಯಗಳ ಜೀಣೋದ್ಧಾರ, ಅಶಕ್ತರಿಗೆ ಮನೆ ಕಟ್ಟಿಸಿಕೊಡುವುದು, ವಿದ್ಯಾರ್ಥಿವೇತನ, ವೃದ್ಧಾಪ್ಯ ವೇತನ, ಶಾಲೆಗಳಿಗೆ ಡೆಸ್ಕ್ ಕೊಡುವುದು ಮುಂತಾದ ಹಲವಾರು ಕಾರ್ಯಕ್ರಮಗಳ ಮೂಲಕ ಧರ್ಮಸ್ಥಳ ಸಂಸ್ಥೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಸ್ವಾಸ್ಠ್ಯ ಸಮಾಜ ನಿರ್ಮಾಣದ ಗಾಂಧೀಜಿ ಕನಸನ್ನು ನನಸು ಮಾಡುವಕಡೆ ಮುನ್ನಡೆದಿದೆ ಎಂದು ಹೇಳಿದರು.
ಈಗ ದೇವಸ್ಥಾನಗಳು, ಮಠಮಾನ್ಯಗಳು ಜಾತಿಆಧಾರಿತವಾಗಿವೆ. ಆದರೆ ಜಾತಿ, ಧರ್ಮ, ಲಿಂಗ, ಪಕ್ಷ ಬೇಧವಿಲ್ಲದೆಎಲ್ಲರಿಗೂ ಸಹಾಯ ಮಾಡುವ ಮೂಲಕ ಮಾದರಿ ಸಮಾಜ ನಿರ್ಮಾಣಕಟ್ಟುವ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ||ವೀರೇಂದ್ರ ಹೆಗ್ಗಡೆಯವರು ಸ್ಥಾಪನೆ ಮಾಡಿದ ಈ ಸಂಸ್ಥೆ ಮಾಡುತ್ತಿದೆ.ಕುಡಿತಚಟ ಅನೇಕ ಕುಟುಂಬಗಳ ನೆಮ್ಮದಿ ಹಾಳು ಮಾಡಿದೆ.ಸಂಸಾರಗಳನ್ನು ಬೀದಿಗೆತಂದಿದೆ.
ಅಂತಹ ವ್ಯಸನಿಗಳನ್ನು ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತರನ್ನಾಗಿ ಮಾಡಿಅವರನ್ನು ಹೊಸ ಬದುಕಿನತ್ತ ಕರೆದೊಯ್ಯುತ್ತಿರುವ ಧರ್ಮಸ್ಥಳ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಡಾ||ಹನುಮಂತನಾಥ ಸ್ವಾಮೀಜಿ ಹೇಳಿದರು.
ಜನಜಾಗೃತಿ ವೇದಿಕೆ ಟ್ರಸ್ಟ್ನ ಜಿಲ್ಲಾ ಅಧ್ಯಕ್ಷ ಆರ್.ಕಾಮರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಬಾಪೂಜಿಯವರ ರಾಮರಾಜ್ಯ ಸ್ಥಾಪನೆ ಕನಸಿಗೆ ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ರಮಗಳು ಪ್ರೇರಣೆಯಾಗಿವೆ. 30 ವರ್ಷಗಳ ಹಿಂದೆಡಾ. ವೀರೇಂದ್ರ ಹೆಗ್ಗಡೆಯವರು ಸ್ಥಾಪನೆ ಮಾಡಿದ ಜನಜಾಗೃತಿ ವೇದಿಕೆ ಮೂಲಕ ಮದ್ಯವ್ಯಸನಿಗಳನ್ನು ಮನ:ಪರಿವರ್ತನೆ ಮೂಲಕ ವ್ಯಸನಮುಕ್ತರನ್ನಾಗಿ ಮಾಡುತ್ತಿದೆ ಎಂದರು.
ಲೇಖಕಿ ಮಲ್ಲಿಕಾ ಬಸವರಾಜುಅವರು ಮಹಾತ್ಮಗಾಂಧೀಜಿ ಬಗ್ಗೆ ಉಪನ್ಯಾಸ ನೀಡಿದರು.ಸ್ಫೂರ್ತಿಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕಎಸ್.ಪಿ.ಚಿದಾನಂದ್ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಬೇಕಾದ ಸರ್ಕಾರ ಮದ್ಯ ಮಾರಾಟವನ್ನು ಪ್ರೋತ್ಸಾಹಿಸುತ್ತಿರುವುದು ಎಷ್ಟು ಸರಿ? ಮದ್ಯವ್ಯಸನದಿಂದ ಕುಟುಂಬ ವ್ಯವಸ್ಥೆ ಹಾಳಾಗುತ್ತಿದೆ.ಕುಡಿತದಿಂದ ಆರೋಗ್ಯವೂ ಹಾಳಾಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ ಧರ್ಮಸ್ಥಳ ಸಂಸ್ಥೆ ಮದ್ಯವರ್ಜನ ಶಿಬಿರ ಮೂಲಕ ವ್ಯವಸನಿಗಳಿಗೆ ನವಜೀವನ ನೀಡುತ್ತಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ಡಾ.ಆರ್.ಎಲ್. ರಮೇಶ್ಬಾಬು ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಅ.ನ.ಲಿಂಗಪ್ಪ,ತಾಲ್ಲೋಕು ಯೋಜನಾಧಿಕಾರಿಗಳಾದ ಪಿ.ಬಿ.ಸಂದೇಶ್,ಪ್ರಭಾಕರ್ ರಾಮ್ ನಾಯಕ್, ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.ರಾಜೇಶ್ ನಿರೂಪಿಸಿದರು,ಸತೀಶ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು,ಪಿ.ಬಿ.ಸಂದೇಶ್ ಸ್ವಾಗತಿಸಿ,ಪ್ರಭಾಕರ್ ರಾಮ್ ನಾಯಕ್ ವಂದಿಸಿದರು.
– ಚಂದ್ರಚೂಡ ಕೆ.ಬಿ.
