ತುಮಕೂರು:ಆಗ್ನೇಯ ಪದವಿಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಅವರು ಕಾಂಗ್ರೆಸ್ ಮುಖಂಡರ ಜೊತೆ ಮಂಗಳವಾರ ನಗರದ ವಿವಿಧೆಡೆ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.
ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ನೀಡಿ ವಕೀಲರಲ್ಲಿ ಮತಯಾಚನೆ ಮಾಡುತ್ತಾ ಚುನಾವಣೆಯಲ್ಲಿ ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಕೋರಿದರು.ಈ ವೇಳೆ ಮಾತನಾಡಿದ ಅಭ್ಯರ್ಥಿ ಶಶಿ ಹುಲಿಕುಂಟೇಮಠ್, ಆಗ್ನೇಯ ಪದವಿಧರರ ಕ್ಷೇತ್ರಕ್ಕೆ ಯುವ ಅಭ್ಯರ್ಥಿ ಬೇಕೆಂದು ಕಾಂಗ್ರೆಸ್ ನಾಯಕರು ವರ್ಷದ ಹಿಂದೆಯೇ ತಮ್ಮನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು.ಆಗಿನಿಂದಲೂ ತಾವು ನಿರಂತರವಾಗಿ ಆಗ್ನೇಯಕ್ಷೇತ್ರ ಪ್ರವಾಸ ಮಾಡಿ ಪದವಿಧರ ಮತದಾರರನ್ನು ಮುಖತ: ಭೇಟಿ ಮಾಡಿ, ಅವರ ಬೆಂಬಲ ಕೋರಿದ್ದು, ಎಲ್ಲಾ ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರ ಬೆಂಬಲ ಪಡೆದುಅವರೊಂದಿಗೆ ಸಂಪರ್ಕದಲ್ಲಿದ್ದು ಅವರು ತಮ್ಮ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕ್ಷೇತ್ರದೆಲ್ಲೆಡೆ ತಮ್ಮ ಪರವಾಗಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು ತಮ್ಮ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮಾಜಿ ಶಾಸಕ ಡಾ.ಎಸ್.ರಫೀಕ್ಅಹಮದ್, ಜಿಲ್ಲಾಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ಅಹ್ಮದ್, ನಿಂಗರಾಜು, ಶಿವಕುಮಾರಸ್ವಾಮಿ, ಇಲಾಹಿ ಸಿಕಂದರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್, ಖಜಾಂಚಿ ಸಿಂಧೂ, ವಕೀಲರಾದ ಹಾಲನೂರುಅನಂತಕುಮಾರ್, ವೆಂಕಟೇಶಯ್ಯ, ಮಹಲಿಂಗಯ್ಯ, ವೆಂಕಟೇಶ್, ನಗರಪಾಲಿಕೆ ಮಾಜಿ ಸದಸ್ಯರಾದ ಟಿ.ಎಂ. ಮಹೇಶ್,ಎನ್.ಮಹೇಶ್ ಮೊದಲಾದವರು ಮತಯಾಚನೆ ಸಂದರ್ಭದಲ್ಲಿ ಹಾಜರಿದ್ದರು.
– ಚಂದ್ರಚೂಡ ಕೆ.ಬಿ.
