ನವದೆಹಲಿ: ಭಾರತ ಸರ್ಕಾರದ ಪ್ರಮುಖ ಉಪಕ್ರಮಗಳಾದ ‘ಮೇಕ್ ಇನ್ ಇಂಡಿಯಾ’ (Make in India) ಮತ್ತು ‘ಆತ್ಮನಿರ್ಭರ ಭಾರತ’ (Aatmanirbhar Bharat) ಅಭಿಯಾನಗಳಿಗೆ ಜಾಗತಿಕ ತಾಂತ್ರಿಕ ವೇಗ ನೀಡುವ ನಿಟ್ಟಿನಲ್ಲಿ, ಭಾರತ ಮತ್ತು ಜೆಕ್ ಗಣರಾಜ್ಯಗಳು (Czech Republic) ತಮ್ಮ ದ್ವಿಪಕ್ಷೀಯ ರಕ್ಷಣಾ ಕೈಗಾರಿಕಾ ಸಹಯೋಗವನ್ನು ವಿಸ್ತರಿಸಲು 2026 ರ ಅಕ್ಟೋಬರ್ ೧೩ ರಂದು ಮಹತ್ವದ ಒಪ್ಪಂದಕ್ಕೆ ಬಂದಿವೆ.
ನವದೆಹಲಿಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಜೆಕ್ ಗಣರಾಜ್ಯದ ಪ್ರಥಮ ಉಪ ಪ್ರಧಾನ ಮಂತ್ರಿ ಮತ್ತು ಕೈಗಾರಿಕೆ ಹಾಗೂ ವಾಣಿಜ್ಯ ಸಚಿವ ಕರೇಲ್ ಹಾವ್ಲಿಚೆಕ್ (Karel Havlíček) ಅವರ ನಡುವೆ ನಡೆದ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
೧. ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಕಾರ್ಯತಂತ್ರದ ಚೌಕಟ್ಟು:
-
ಜಂಟಿ ರಕ್ಷಣಾ ಸಮಿತಿ (India-Czech Joint Defence Committee):
ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಚರ್ಚೆಗಳ ಅಧಿಕೃತ ದ್ವಿಪಕ್ಷೀಯ ಕಾರ್ಯವಿಧಾನವಾದ ‘ಭಾರತ-ಜೆಕ್ ಜಂಟಿ ರಕ್ಷಣಾ ಸಮಿತಿ’ಯ ಅಡಿಯಲ್ಲಿ ಕೈಗಾರಿಕಾ ಸಹಯೋಗ, ಜಂಟಿ ಉದ್ಯಮಗಳು (Joint Ventures) ಮತ್ತು ಸುಧಾರಿತ ಮಿಲಿಟರಿ ತಂತ್ರಜ್ಞಾನ ವರ್ಗಾವಣೆಯನ್ನು ಮತ್ತಷ್ಟು ವಿಸ್ತರಿಸಲು ಸಮ್ಮತಿಸಲಾಗಿದೆ.
-
ಪ್ರಾದೇಶಿಕ ಭದ್ರತೆ ಮತ್ತು ಶಾಂತಿ:
ಜಾಗತಿಕ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡುವಲ್ಲಿ ರಕ್ಷಣಾ ಸಹಭಾಗಿತ್ವದ ಅಗತ್ಯವನ್ನು ಉಭಯ ನಾಯಕರು ಪುನರುಚ್ಚರಿಸಿದರು.
-
ಭಾರತ ಪ್ರವಾಸದ ವ್ಯಾಪ್ತಿ:
ಕರೇಲ್ ಹಾವ್ಲಿಚೆಕ್ ಅವರ ನಾಲ್ಕು ದಿನಗಳ ಭಾರತ ಭೇಟಿಯಲ್ಲಿ ನವದೆಹಲಿಯ ಸಚಿವಾಲಯ ಸಭೆಗಳಲ್ಲದೆ, ಭಾರತದ ತಂತ್ರಜ್ಞಾನ ಮತ್ತು ವಾಣಿಜ್ಯ ರಾಜಧಾನಿಗಳಾದ ಬೆಂಗಳೂರು ಹಾಗೂ ಮುಂಬೈನ ಪ್ರಮುಖ ಕೈಗಾರಿಕಾ ಕೇಂದ್ರಗಳ ವೀಕ್ಷಣೆಯೂ ಸೇರಿದೆ.
೨. ಭಾರತೀಯ ನಿಯೋಗದ ಪ್ರಾಗ್ ಭೇಟಿ ಮತ್ತು ‘ಫ್ಯೂಚರ್ ಫೋರ್ಸಸ್ ಫೋರಮ್ ೨೦೨೬’:
-
SIDM ನಿಯೋಗ:
ಭಾರತೀಯ ರಕ್ಷಣಾ ತಯಾರಕರ ಒಕ್ಕೂಟವು (SIDM – Society of Indian Defence Manufacturers) ೨೦೨೬ ರ ಅಕ್ಟೋಬರ್ ೨೦ ರಂದು ಭಾರತೀಯ ರಕ್ಷಣಾ ಕೈಗಾರಿಕಾ ನಿಯೋಗವನ್ನು ಜೆಕ್ ಗಣರಾಜ್ಯದ ರಾಜಧಾನಿ ಪ್ರಾಗ್ಗೆ (Prague) ಕೊಂಡೊಯ್ಯಲಿದೆ.
-
ಸೆಮಿನಾರ್ ಮತ್ತು ಪ್ರದರ್ಶನ:
ಪ್ರಾಗ್ನಲ್ಲಿ ಆಯೋಜಿಸಲಾಗುವ ಪ್ರತಿಷ್ಠಿತ ಅಂತರರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪ್ರದರ್ಶನವಾದ ‘ಫ್ಯೂಚರ್ ಫೋರ್ಸಸ್ ಫೋರಮ್ ೨೦೨೬’ (Future Forces Forum 2026) ನ ಅಂಗವಾಗಿ ‘ಭಾರತ-ಜೆಕ್ ರಕ್ಷಣಾ ಕೈಗಾರಿಕಾ ಸಹಯೋಗ ಸೆಮಿನಾರ್’ ನಡೆಯಲಿದೆ.
೩. ಜೆಕ್ ಗಣರಾಜ್ಯದ ಐತಿಹಾಸಿಕ ಮತ್ತು ಜಾಗತಿಕ ಹಿನ್ನೆಲೆ:
-
ಐತಿಹಾಸಿಕ ಸಂಬಂಧಗಳು: ಭಾರತವು ೧೯೪೭ ರಲ್ಲಿ ಹಿಂದಿನ ಜೆಕೊಸ್ಲೊವಾಕಿಯಾ (Czechoslovakia) ಜೊತೆಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿತ್ತು.
-
ಸ್ವತಂತ್ರ ರಾಷ್ಟ್ರ ರಚನೆ: ಜೆಕೊಸ್ಲೊವಾಕಿಯಾ ವಿಭಜನೆಯಾದ ನಂತರ, ೧೯೯೩ ರ ಜನವರಿ ೧ ರಂದು ಜೆಕ್ ಗಣರಾಜ್ಯವು ಪ್ರತ್ಯೇಕ ಸಾರ್ವಭೌಮ ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಿತು.
-
ಜಾಗತಿಕ ಮೈತ್ರಿಕೂಟಗಳು:
-
ನ್ಯಾಟೋ (NATO – North Atlantic Treaty Organization): ಜೆಕ್ ಗಣರಾಜ್ಯವು ೧೯೯೯ ರಲ್ಲಿ ನ್ಯಾಟೋ ಮೈತ್ರಿಕೂಟವನ್ನು ಸೇರಿತು.
-
ಯುರೋಪಿಯನ್ ಯೂನಿಯನ್ (EU): ೨೦೦೪ ರಲ್ಲಿ ಯುರೋಪಿಯನ್ ಒಕ್ಕೂಟದ ಪೂರ್ಣ ಸದಸ್ಯತ್ವವನ್ನು ಪಡೆಯಿತು.
-
