ತುಮಕೂರು:ಎನ್.ಡಿ.ಎ.ಅಭ್ಯರ್ಥಿ ಕೆ.ಎಂ.ಸುರೇಶ್ ರವರ ಗೆಲುವಿಗೆ ಎಲ್ಲ ಮುಖಂಡರು ಹಗಲಿರುಳು ಶ್ರಮಿಸಿ ಪ್ರಥಮ ಪ್ರಾಶಸ್ತö್ಯದ ಮತ ನೀಡಿ ಗೆಲ್ಲಿಸಬೇಕು,1ಲಕ್ಷ ಮತಗಳನ್ನು ನಮ್ಮ ಅಭ್ಯರ್ಥಿ ಪಡೆಯಲಿದ್ದಾರೆ,ನಾನು,ಚೌಡರೆಡ್ಡಿತೂಪಲ್ಲಿ,ಎಂ.ಚಿದಾನಂದಗೌಡ,ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿಯ ಹಾಲಿ ಮತ್ತು ಮಾಜಿ ವಿಧಾನಪರಿಷತ್ ಮತ್ತು ವಿಧಾನಸಭಾ ಸದಸ್ಯರು ಒಟ್ಟಾಗಿ ಇಂದು ಕೆಲಸ ಮಾಡುತ್ತಿದ್ದೇವೆ,ನಾನು ವಿಧಾನಪರಿಷತ್ ಸದಸ್ಯನಾಗಿದ್ದ ವೇಳೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ,ಬಿ.ಎಸ್.ವೈ ಉಪಮುಖ್ಯಮಂತ್ರಿಗಳಾಗಿದ್ದರು ಅಂದು ಪದವೀಧರರಿಗೆ,ಶಿಕ್ಷಕರುಗಳಿಗೆ ಎಲ್ಲಿಗೆ ಬೇಕಾದರೂ ವರ್ಗಾವಣೆ ಮಾಡಿಕೊಟ್ಟೆವು,ಶಿಕ್ಷಣ ಸಂಸ್ಥೆಗಳಿಗೆ ಅನುಮತಿ,ನೂತನ ಶಿಕ್ಷಕರ ನೇಮಕ,ನೂತನ ಶಾಲಾಕಾಲೇಜುಗಳ ನಿರ್ಮಾಣ ಹೀಗೆ ಅದೊಂದು ಸುವರ್ಣಯುಗವಾಗಿತ್ತು ಆದ್ದರಿಂದ ನಮಗಿಂತಲೂ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಕೆ.ಎಂ.ಸುರೇಶ್ ರವರ ಗೆಲುವಿಗೆ ತಾವೆಲ್ಲ ಕಾಯಾವಾಚಾ ಮನಸಾ ಕೆಲಸ ಮಾಡಬೇಕೆಂದು ಮಾಜಿ ವಿಧಾನಪರಿಷತ್ ಮತ್ತು ಮಾಜಿ ವಿಧಾನಸಭಾಸದಸ್ಯರಾದ ಹೆಚ್.ಎಸ್.ಶಿವಶಂಕರ್ ರವರು ಮನವಿ ಮಾಡಿದರು.

ಆಗ್ನೇಯ ಪದವಿಧರರಕ್ಷೇತ್ರದಎನ್ಡಿಎಅಭ್ಯರ್ಥಿ ಕೆ.ಎಂ. ಸುರೇಶ್ ಬೆಂಬಲಿಸಿ ಬಿಜೆಪಿ, ಜೆಡಿಎಸ್ ಪಕ್ಷಗಳ ಮೈತ್ರಿಕೂಟ ನಗರದ ಅರ್ಬನ್ ರೆಸಾರ್ಟ್ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪದವಿಧರ ಮತದಾರರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಧಾನ ಪರಿಷತ್ನ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶಿಕ್ಷಕರ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಲ್ಲ. ಇದೂವರೆಗೂ ಶಿಕ್ಷಕರು ಹಾಗೂ ಪದವೀಧರರ ಹಿತಕಾಪಾಡಿದ್ದು ನಾವೇ ಹೊರತು ಕಾಂಗ್ರೆಸ್ ಸರ್ಕಾರವಲ್ಲ. ಎನ್ಪಿಎಸ್ ತೆಗೆದು ಒಪಿಎಸ್ ಜಾರಿಗೊಳಿಸುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದ ಕಾಂಗ್ರೆಸ್ನವರು ಇದೂವರೆಗೂ ಈ ಸಂಭಂದ ಒಂದು ಸಭೆ ಮಾಡಿಲ್ಲ ಎಂದು ಟೀಕಿಸಿದರು.

ವಿಧಾನ ಸಭೆಯಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ಬಾಬು ಬರಗಾಲ ಪರಿಸ್ಥಿತಿಯಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾಗಿದ್ದ ರಾಜ್ಯಕಾಂಗ್ರೆಸ್ ಸರ್ಕಾರ ಸ್ಟಿಂಗ್ ಆಪರೇಷನ್ ಮೂಲಕ ರಾಜಕಾರಣಿಗಳ ತೇಜೋವಧೆ ಮಾಡುವುದರಲ್ಲಿ ತೊಡಗಿ ರಾಜಕಾರಣವನ್ನು ಕಲುಶಿತಗೊಳಿಸುತ್ತಿದೆ. ಇಂತಹ ದುಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು.ರಾಜ್ಯದ ನಾಲ್ಕು ವಿಧಾನಪರಿಷತ್ ಚುನಾವಣೆಯಲ್ಲಿ ಎನ್ಡಿಎ ಗೆಲ್ಲುವ ಮೂಲಕ ಸರ್ಕಾರಕ್ಕ ಸ್ಪಷ್ಟ ಸಂದೇಶವಾಗಲಿದೆ ಹಾಗೂ 28ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, 23ರಂದು ನಡೆಯುವ ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸಮನ್ವಯತೆಯಿಂದ ಕೆಲಸ ಮಾಡಿ ಸುರೇಶ್ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ ಪ್ರದೀಪ್ಕುಮಾರ್, ಅಭ್ಯರ್ಥಿ ಕೆ.ಎಂ. ಸುರೇಶ್, ಜಿ.ಎಸ್.ಬಸವರಾಜು, ಬಿ.ಸುರೇಶ್ ಗೌಡ, ಎಂ.ಚಿದಾನಂದಗೌಡ ಮೊದಲಾದವರು ಮಾತನಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯಡಾ.ಎಂ.ಆರ್. ಹುಲಿನಾಯ್ಕರ್, ಜಿಲ್ಲಾಜೆಡಿಎಸ್ ಮಾಜಿಅಧ್ಯಕ್ಷ ಆರ್.ಸಿ. ಆಂಜನಪ್ಪ, ನಗರ ಕಾರ್ಯಾಧ್ಯಕ್ಷ ಟಿ.ಎಸ್.ಮೋಹನ್ ಕುಮಾರ್,ಅಧ್ಯಕ್ಷ ಟಿ.ಹೆಚ್. ಜಯರಾಮ್, ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್, ಬಿಜೆಪಿ ಕಾನೂನು ಪ್ರಕೋಷ್ಟ ರಾಜ್ಯ ಸಂಚಾಲಕ ವಸಂತಕುಮಾರ್, ಡಿ.ಸಿ.ಹಿಮಾನಂದ್ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
