ಆ
ಮೌನದೊಳಗಿನ
ಮಾತು
ಕೇಳುತಿದೆಯೇ?
ಕೇಳಬಲ್ಲೆಯಾದರೆ
ನೀನೇ ಬುದ್ಧ!
ನೀನೇ ಬಸವಣ್ಣ!
ನೀನೇ ಗಾಂಧೀಜೀ!
ನೀನೇ ಅಂಬೇಡ್ಕರು!
ಆಗದಿದ್ದರೇ…
ನಾನೋ ನೀನೋ..
ನಾವೆಂಥಾ ಭಾರತೀಯರು!?
*******
ಬೀಜ
ಅಡ
ಇಟ್ಟರೆ.. ತ್ರಿವರ್ಣ
ಧ್ವಜಕ್ಕೆ ಅವಮಾನ
ಆಗಿರಲಿಲ್ಲ!
ಬ್ಯಾಂಕು
ಅಡ
ಇಟ್ಟರೆ..
ತ್ರಿವರ್ಣ ಧ್ವಜಕ್ಕೆ ಅವಮಾನ
ಆಗಿರಲಿಲ್ಲ!!
ರಂಕಾ, ದಾಸು ಬಂಧಿಸಲ್ಪಟ್ಟರೆ
ಆಯ್ತದೇಕೆ ಅವಮಾನ?
ಈ ಎಲ್ಲ ಸರ್ಕಸ್
ಬಿಡಿ!
ಗುಲಾಮಗಿರಿಯ
ಮೂಲ
ವಿಷಯಕ್ಕೆ ಬನ್ನಿ!
**********
ಸರಿ
ಬಿಜೆಪಿ
ಆರೆಸ್ಸೆಸ್ಸೂ
ಗೋಮುಖ ವ್ಯಾಘ್ರಗಳೇ!
ಕಾಂಗ್ರೆಸ್ಸು
ವ್ಯಾಘ್ರಗಳನ್ನೇ
ಸಾಕಿಕೊಂಡಿರುವ
ಗೋಶಾಲೆ!
*******
ಪ್ರಜ್ಞೆಯ
ಬೆಳಕು
ಪ್ರತಿಭೆಯ
ಹಾದಿ
ತೆರೆಯುವುದೆಂದು???
* ಚಂಸು*
