ತುಮಕೂರು:ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ವಿಶೇಷವಾದದ್ದು. ಹಲವು ಜಾತಿ-ಧರ್ಮ, ಹಲವು ಭಾಷೆ, ಹಲವು ಸಂಸ್ಕೃತಿ ಒಳಗೊಂಡ ಭಾರತದಲ್ಲಿಐಕ್ಯತೆ ಮೂಡಿಸುವುದುಕಷ್ಟದ ಕೆಲಸ ಆದರೆ, ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯತೋಟದಂತೆ ನಾವು ಏಕತೆಯ ಪ್ರವೃತ್ತಿ ಬೆಳೆಸಿಕೊಂಡಾದ ಸಾಧ್ಯವಾಗುತ್ತದೆಎಂದು ಶಿವಗಂಗಾ ಕ್ಷೇತ್ರದ ಮೇಲಣಗವಿ ಸಂಸ್ಥಾನ ಮಠದಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯಿಂದ ದಸರಾ ಮಹೋತ್ಸವದ ಅಂಗವಾಗಿ ಬುಧವಾರ ನಗರದರೇಣುಕಾ ವಿದ್ಯಾಪೀಠ ಆವರಣದ ಮಹಾನಮಿ ಮಂಟಪದಲ್ಲಿ ಹಮ್ಮಿಕೊಂಡಿದ್ದ ವಿಜಯದಶಮಿಯ ಶಮಿ ಪೂಜೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿ, ವೈಯಕ್ತಿಕ ಪ್ರತಿಷ್ಠೆ ದೂರವಿರಿಸಿ ಸಮಾಜಕ್ಕೆ ಸಂಪೂರ್ಣ ತೊಡಗಿಸಿಕೊಂಡರೆ ಐಕ್ಯತೆಕಾಪಾಡಲು ಸಾಧ್ಯವಾಗುತ್ತದೆ ಎಂದರು.
ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಮಾತನಾಡಿ, ರಾಜ್ಯ, ದೇಶ, ಜನರು ಸುಖ, ಸೌಖ್ಯದಿಂದ ಬಾಳಬೇಕು ಎನ್ನುವ ಕಾರಣಕ್ಕೆ ಶಮಿ ಪೂಜೆ ಮಾಡಲಾಗುತ್ತದೆ.ಈಗ ಎಲ್ಲೆಡೆ ಅಕ್ರಮ, ದೌರ್ಜನ್ಯ, ಕ್ರೌರ್ಯ ಹೆಚ್ಚಾಗುತ್ತಿದೆ.ಧರ್ಮಾಚರಣೆಯಲ್ಲಿ ರಾಜಕೀಯ ಬೆರೆತರೆ ನಾಗರೀಕ ಸಮಾಜ ದುಸ್ಥಿತಿಗೆ ಹೋಗುತ್ತದೆ ಎಂದರು.
ಈ ವೇಳೆ ದೇಶದ ಶೆಟ್ಟರಾದ ಕೆ.ಎಸ್.ಚನ್ನಬಸಪ್ಪ ಅವರು ಶಮಿ ಪೂಜೆ ನೆರವೇರಿಸಿ ಬನ್ನಿ ಮರಕಡಿದು ಪೂಜೆ ಸಲ್ಲಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್, ತುಮಕೂರು ವೀರಶೈವ ಸಹಕಾರ ಬ್ಯಾಂಕ್(ಲಿ) ಅಧ್ಯಕ್ಷ ಕೆ.ಜೆ.ರುದ್ರಪ್ಪ, ಗಂಗಾ ಪರಮೇಶ್, ವೀರಶೈವ ಉಚಿತ ವೈದ್ಯಕೀಯ ಸೇವಾ ಕೇಂದ್ರ ಅಧ್ಯಕ್ಷ ಎಂ.ಅರ್ಜುನ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ನಗರ ವೀರಶೈವ ಸಮಾಜ ಸೇವಾ ಸಮಿತಿ ನಟರಾಜು,ಟಿ.ಬಿ.ಹರೀಶ್, ಟಿ.ಜೆ.ಸಿದ್ಧಲಿಂಗಸ್ವಾಮಿ,ಮಹೇಶ್, ಆರ್.ಎಸ್. ಪ್ರಭು, ಜಿ.ಕೆ.ಸ್ವಾಮಿ ಹಾಗೂ ನಿರ್ದೇಶಕರು, ಸಮಾಜದ ವಿವಿಧ ಅಂಗ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಚಂದ್ರಚೂಡ ಕೆ.ಬಿ.
