ಬೆಂಗಳೂರಿನಲ್ಲಿ ವಾಹನ ದಟ್ಟಣೆ ಮತ್ತು ರಸ್ತೆ ಕಾಮಗಾರಿಗಳಿಂದ PM2.5 ಹಾಗೂ PM10 ಧೂಳಿನ ಕಣಗಳ ಪ್ರಮಾಣ ಹೆಚ್ಚಾಗುತ್ತಿದೆ. ಪೀಣ್ಯ, ಮೈಸೂರು ರಸ್ತೆ ಮತ್ತು ಮೆಜೆಸ್ಟಿಕ್ನಂತಹ ಪ್ರದೇಶಗಳಲ್ಲಿ AQI 100ರಿಂದ 115ರವರೆಗೆ ದಾಖಲಾಗಿದ್ದರೆ, ಜಯನಗರ, ಮಲ್ಲೇಶ್ವರಂ ಹಾಗೂ ಸದಾಶಿವನಗರದಲ್ಲಿ ತುಸು ಉತ್ತಮ ಗಾಳಿಯ ಗುಣಮಟ್ಟವಿದೆ ಎಂದು ವರದಿ ತಿಳಿಸಿದೆ.
ರಾಜ್ಯದ ಇತರ ನಗರಗಳ ಪೈಕಿ ಮಡಿಕೇರಿಯಲ್ಲಿ AQI 40–50, ಮಂಗಳೂರಿನಲ್ಲಿ 45–55, ಮೈಸೂರಿನಲ್ಲಿ 58 ಹಾಗೂ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ 52–60ರಷ್ಟಿದೆ. ಹುಬ್ಬಳ್ಳಿ–ಧಾರವಾಡದಲ್ಲಿ 65ರಷ್ಟು ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ.
ಇನ್ನೊಂದೆಡೆ, ಬಳ್ಳಾರಿ ಮತ್ತು ಕಲಬುರಗಿಯಲ್ಲಿ ಕೈಗಾರಿಕೆಗಳು ಹಾಗೂ ಧೂಳಿನ ವಾತಾವರಣದಿಂದ AQI 105–120ರಷ್ಟಿದ್ದು, ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ.
ವಾಯು ಮಾಲಿನ್ಯದ ಪರಿಣಾಮಗಳನ್ನು ತಗ್ಗಿಸಲು ಮಕ್ಕಳು, ಹಿರಿಯ ನಾಗರಿಕರು ಹಾಗೂ ಆಸ್ತಮಾ ಮತ್ತು ಹೃದಯ ಸಂಬಂಧಿ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಮಳೆಯು ಧೂಳಿನ ಕಣಗಳನ್ನು ಕಡಿಮೆ ಮಾಡಲು ನೆರವಾಗಬಹುದಾದರೂ, ಸ್ಥಳದಿಂದ ಸ್ಥಳಕ್ಕೆ ಗಾಳಿಯ ಗುಣಮಟ್ಟ ಬದಲಾಗುವ ಸಾಧ್ಯತೆಯಿದೆ.
