ಕೆ.ಆರ್.ಪೇಟೆ:* ದೇಶದ ಪವಿತ್ರ ಗ್ರಂಥಗಳಲ್ಲಿ ಒಂದಾದ ವಾಲ್ಮೀಕಿ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು, ಚಿಂತನೆಗಳು ಹಾಗೂ ಜೀವನ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕ್ಷೇತ್ರದ ಜನಪ್ರಿಯ ಶಾಸಕ ಹೆಚ್.ಟಿ ಮಂಜು ತಿಳಿಸಿದರು.
ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಬೇಡ ಜನಾಂಗದಲ್ಲಿ ಹುಟ್ಟಿದರೂ ಸಹ ತಮ್ಮ ಅಪಾರ ಜ್ಞಾನದಿಂದಾಗಿ ಮಹರ್ಷಿ ವಾಲ್ಮೀಕಿ ಅವರು ತಮ್ಮ ಜ್ಞಾನ, ತಪಸ್ಸು ಮತ್ತು ಸಾಹಿತ್ಯದ ಮೂಲಕ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಗೆ ರಾಮಾಯಣ ಕೃತಿಯನ್ನು ರಚಿಸುವ ಮೂಲಕ ನಮ್ಮ ಭಾರತೀಯ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ರಚಿಸಿದ ರಾಮಾಯಣವು ಕೇವಲ ಧಾರ್ಮಿಕ ಗ್ರಂಥವಲ್ಲ, ಅದು ಮಾನವೀಯ ಮೌಲ್ಯಗಳು, ಸತ್ಯ, ಧರ್ಮ, ತ್ಯಾಗ, ಕರ್ತವ್ಯಪ್ರಜ್ಞೆ ಮತ್ತು ಆದರ್ಶ ಜೀವನದ ಮಹತ್ವವನ್ನು ಸಾರುವ ಮಹಾನ್ ಕೃತಿಯಾಗಿದೆ. ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಮತ್ತು ಆದರ್ಶಗಳನ್ನು ಯುವಜನತೆ ತಿಳಿದುಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕ ಸರ್ಕಾರದ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಸಂದೇಶಗಳು ಸಮಾಜದಲ್ಲಿ ಸಮಾನತೆ, ಸಹೋದರತ್ವ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬೆಳೆಸಲು ಪ್ರೇರಣೆ ನೀಡುತ್ತವೆ. ಅವರ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರ ತತ್ವಾದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಪಾಲಿಸುವುದು ನಿಜವಾದ ಗೌರವವಾಗಿದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಭಾಷಣಕಾರರಾದ ಸುಗುಣ ಅವರು ಕಾರ್ಯಕ್ರಮ ಕುರಿತು ಪ್ರಧಾನ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿ.ಎಸ್. ಶ್ರೇಯಸ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಅಶೋಕ್ ಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎ.ಆರ್.ರಾಜಾನಾಯಕ್, ಜಿಲ್ಲಾ ದಿಶಾ ಸಮಿತಿ ಸದಸ್ಯರು ಹಾಗೂ ನಾಯಕರ ಸಂಘದ ಅಧ್ಯಕ್ಷ ನರಸನಾಯಕ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್, ತಾಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಎಂ.ಮೋಹನ್, ತಾ.ಪಂ.ಮಾಜಿ ಅಧ್ಯಕ್ಷರಾದ ಮೆಣಸ ಮಹಾದೇವೇಗೌಡ, ಮಾಜಿ ತಾ.ಪಂ. ಸದಸ್ಯರಾದ ಹುಲ್ಲೇಗೌಡ, ಮುತ್ತಮ್ಮನಾಗರಾಜು, ನಿರ್ದೇಶಕರಾದ ಕುರುಬಹಳ್ಳಿ ನಾಗೇಶ್, ಹುಲ್ಲೇಗೌಡ, , ಜಿ.ಪಂ ಮಾಜಿ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಶಿಕ್ಷಣ ಸಂಯೋಜಕ ಕೃಷ್ಣನಾಯಕ್, ತಾಲೂಕು ನಾಯಕ ಸಂಘದ ಅಧ್ಯಕ್ಷ ನರಸನಾಯಕ, ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ರಾಜು, ಬಲರಾಮ್, ಮುಖಂಡರಾದ ಜಿ.ಪಂ.ಮಾಜಿ ಸದಸ್ಯರಾದ ಅಕ್ಕಿಹೆಬ್ಬಾಳು ಶ್ರೀನಿವಾಸ ನಾಯಕ್, ಬೊಮ್ಮೇನಹಳ್ಳಿ ಮಂಜುನಾಥ್ ಡಾ.ಬಸವರಾಜು, ಕೆ.ರಮೇಶ್, ನಟರಾಜ್, ಗ್ತಾಸ್ ತಮ್ಮಯ್ಯ, ಪುರಸಭಾ ಮಾಜಿ ಅಧ್ಯಕ್ಷರಾದ ನಟರಾಜ್, ಮಹಾದೇವಿನಂಜುಂಡ, ಎನ್.ರವಿ, ಲೋಕೇಶ್, ಭೈರನಾಯಕ್, ಶಶಿಕುಮಾರ್, ಮಂಜು, ಎಸ್.ಜೆ.ಭರತ್, ಬೊಮ್ಮೇನಹಳ್ಳಿ ಲತಾ, ತಾ.ಪಂ.ಮಾಜಿ ಅಧ್ಯಕ್ಷೆ ,ಜಯಲಕ್ಷ್ಮೀ ಸ್ವಾಮಿ ನಾಯಕ್, ಪೂವನಹಳ್ಳಿ ಯಜಮಾನ್ ದೇವರಾಜು, ಅಕ್ಕಿಹೆಬ್ಬಾಳು ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ್, ಸೊಸೈಟಿ ಅಧ್ಯಕ್ಷ ಗುರು( ಗಂಗರಾಜು), ಕಾಳನಾಯಕ್, ನಾಗರಾಜು, ಬಲರಾಂನಾಯಕ್, ಬಾಲಕೃಷ್ಣನಾಯಕ್, ರಾಮಸ್ವಾಮಿ, ರವಿಕುಮಾರ್, ಮಧನ್ ಕುಮಾರ್, ಸುಬ್ಬನಾಯಕ್, ರಘುನಾಯಕ್, ಕಾಮನಹಳ್ಳಿ ಮಂಜುನಾಯಕ, ಆಲಂಬಾಡಿಕಾವಲು ಗ್ರಾ.ಪಂ.ಮಾಜಿ ಅಧ್ಯಕ್ಷೆ ಚಂದ್ರಕಲಾ ಬಸವರಾಜು, ಬಿ.ಗಂಗರಾಜು, ಸಿಂಗನಹಳ್ಳಿ ಗೋಪಾಲ್, ರಂಗನಾಥನಾಯಕ್, ಸಿದ್ದಪ್ಪನಾಯಕ್, ಬಸವನಹಳ್ಳಿ ರಾಮಕೃಷ್ಣನಾಯಕ್, ರಾಜಾನಾಯಕ್, ಗುರುಮೂರ್ತಿ, ನಾಗಕುಮಾರ್, ಪ್ರಭಾಕರ್, ಶಶಿಕುಮಾರ್, ಜಯರಾಂನಾಯಕ್, ಮಂಜುಟ್ರೇಡರ್, ಗಂಗಾಧರ್, ರಘು, ಭೈರನಾಯಕ, ಬಾರೆ ಬೈರನಾಯಕ್, ತಾಲೂಕು ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್ ರಾಜು, ಕಾರ್ಯದರ್ಶಿ ಕೃಷ್ಣನಾಯಕ್, ಬಲಬಲರಾಂನಾಯಕ್ ಎ.ಜೆ.ಮಂಜು, ನಾಗಕುಮಾರ್, ಡಾ.ಬಸವರಾಜು, ಸಿದ್ದನಾಯಕ್, ಜಗದೀಶ್, ರಾಮಕೃಷ್ಣ, ಕುಪ್ಫಳ್ಳಿ ಕಿರಣ್ ನಾಯಕ್ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಬೆಳ್ಳಿಯ ಸಾರೋಟಿನಲ್ಲಿ ವೇದಿಕೆಯ ವರೆಗೆ ಜಾನಪದ ಕಲಾತಂಡಗಳ ಮೂಲಕ ಮೆರವಣಿಗೆ ಮಾಡಲಾಯಿತು.
– ಶ್ರೀನಿವಾಸ್ ಆರ್.
