ಕೊರಟಗೆರೆ;- ಮಹರ್ಷಿ ವಾಲ್ಮೀಕಿ ಅವರನ್ನ ಭಾರತದಲ್ಲಿ ದೇಶ ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕಥೆಗಳನ್ನ ಅನೇಕರು ರಚಿಸಿದ್ದಾರೆ. ಎಂದು ವಾಲ್ಮೀಕಿ ಸಮುದಾಯದ ಮುಖಂಡರಾದ ಹೆಚ್.ಎನ್.ಕವಿತಾ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಬಸ್ ನಿಲ್ದಾಣದಲ್ಲಿ ನಾಯಕ ಸಮುದಾಯ ಹಾಗೂ ಗ್ರಾಪಂ ಅಧಿಕಾರಿಗಳ ಸಹಯೋಗದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಪುತ್ತಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ರಾಮಾಯಣದ ಮೂಲಕ ನ್ಯಾಯ, ನೀತಿ, ಧರ್ಮ ಮತ್ತು ಮಾನವೀಯತೆಯನ್ನ ಸಾರಿದ ಮಹರ್ಷಿ ವಾಲ್ಮೀಕಿಯ ಆದರ್ಶಗಳನ್ನ ನಾವುಗಳು ಪಾಲಿಸಬೇಕು. ವಾಲ್ಮೀಕಿ ಎಂದರೆ ಒಬ್ಬ ವ್ಯಕ್ತಿ ಅಲ್ಲ, ನಮ್ಮ ಸಮುದಾಯದ ಶಕ್ತಿ ಎಂದು ನಂಬಿದ್ದೇವೆ. ದೇಶದಲ್ಲಿ ನಮ್ಮ ಸಮುದಾಯದ ಬೃಹತಾಗಿ ಬೆಳದಿದೆ, ಆದರೆ ನಮಗೆ ನೀಡುತ್ತಿರುವ ಮೀಸಲಾತಿ ಕಡಿಮೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀಸಲಾತಿ ಹೆಚ್ಚಳ ಮಾಡಿ ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿದರು.
ಗ್ರಾಪಂ ಪಿಡಿಒ ಸಿದ್ದರಾಮಯ್ಯ ಮಾತನಾಡಿ ಮಹರ್ಷಿ ವಾಲ್ಮೀಕಿ ಬರೆದಂತಹ ರಾಮಾಯಣವನ್ನ ಪ್ರತಿಯೊಬ್ಬರು ಓದಬೇಕು, ಅದರಲ್ಲಿ ಸಾಕಷ್ಟು ನಾವು ಅನುಸರಿಸಬೇಕಾದ ಅಂಶಗಳನ್ನ ವಾಲ್ಮೀಕಿಯವರು ಬರೆದಿದ್ದಾರೆ. ಅವರ ಆದರ್ಶವನ್ನ ಪ್ರತಿಯೊಬ್ಬರು ಪಾಲಿಸಬೇಕು ಎಂದು ತಿಳಿಸಿದರು.
ಮಾಜಿ ಗ್ರಾಪಂ ಸದಸ್ಯ ರವಿಕುಮಾರ್ ಮಾತನಾಡಿ ಹೊಳವನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರತಿವರ್ಷ ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಯಾವುದೇ ಜಾತಿ ಭೇದವಿಲ್ಲದೇ ಜಯಂತಿ ಆಚರಣೆಯಲ್ಲಿ ಭಾಗವಹಿಸಿಕೊಂಡು ಬರುತ್ತಿದ್ದು, ಹೊಳವನಹಳ್ಳಿ ಸೇರಿದಂತೆ ಅಕ್ಕಪಕ್ಕದ ವಾಲ್ಮೀಕಿ ಸಮುದಾಯದ ಮುಖಂಡರು ಒಟ್ಟಾಗಿ ವಾಲ್ಮೀಕಿ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಎಂದರು.
ಈ ಸಂಧರ್ಭದಲ್ಲಿ ನಾಯಕ ಸಮುದಾಯದ ಮುಖಂಡರಾದ ರಂಗಶಾಮಯ್ಯ, ಮಾದಣ್ಣ, ಓಬಳೇಶ್, ದೊಡ್ಡಮನೆ ಮೂರ್ತಿ, ರಂಗಯ್ಯ, ಜಯರಾಜ್, ಮುದ್ದರಂಗಯ್ಯ, ಶಿವರಾಜ್, ಹನುಮಂತರಾಜು, ಮರುಡಪ್ಪ, ಗೋಪಿ, ನಾಗರಾಜು, ರಾಜಣ್ಣ, ವಿನೋದ್ಕುಮಾರ್, ರಾಜೇಶ್, ರಾಮಾಂಜಿ, ಸತೀಶ್, ಸೇರಿದಂತೆ ಇತರರು ಇದ್ದರು.
– ಶ್ರೀನಿವಾಸ್ ಕೊರಟಗೆರೆ.
