*ಬೆಂಗಳೂರು, ಅಕ್ಟೋಬರ್ 27, 2026: ಜಾಗತಿಕ ಎಫ್ಎಂಸಿಜಿ ಕಂಪನಿಯಾದ ಎಲ್ಟಿ ಫುಡ್ಸ್ ಲಿಮಿಟೆಡ್, ತನ್ನ ದಾವತ್ ರೋಜಾನಾ ಬ್ರ್ಯಾಂಡ್ಗಾಗಿ ಹೊಸ ಜಾಹೀರಾತು ಅಭಿಯಾನವನ್ನು ಆರಂಭಿಸಿದೆ. ದೈನಂದಿನ ಅಡುಗೆಯಲ್ಲಿ ಒಂದೇ ರೀತಿಯ ಗುಣಮಟ್ಟ ಮತ್ತು ರುಚಿಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಈ ಅಭಿಯಾನ ಸಾರುತ್ತದೆ. ಖ್ಯಾತ ಬಾಣಸಿಗ, ಲೇಖಕ ಹಾಗೂ ಕಿರುತೆರೆ ನಿರೂಪಕ ರಣವೀರ್ ಬ್ರಾರ್ ಈ ಅಭಿಯಾನದಲ್ಲಿ ಕಾಣಿಸಿಕೊಂಡಿದ್ದಾರೆ.
‘ಹರ್ ದಿನ್ ಬನೇ ಪರ್ಫೆಕ್ಟ್’ (ಪ್ರತಿದಿನವೂ ಪರಿಪೂರ್ಣವಾಗಿರಲಿ) ಎಂಬ ಪರಿಕಲ್ಪನೆಯಡಿ ರೂಪಿಸಿರುವ ಈ ಅಭಿಯಾನವು ಭಾರತೀಯ ಮನೆಗಳಲ್ಲಿ ಪ್ರತಿದಿನವೂ ಒಂದೇ ರೀತಿಯ ಪರಿಪೂರ್ಣ ಅನ್ನ ತಯಾರಿಸುವುದು ಸುಲಭದ ಕೆಲಸವಲ್ಲ ಎಂಬ ವಾಸ್ತವವನ್ನು ಮನರಂಜನಾತ್ಮಕವಾಗಿ ಪ್ರಸ್ತುತಪಡಿಸುತ್ತದೆ. ದೈನಂದಿನ ಊಟಕ್ಕೆ ಸ್ಥಿರ ಗುಣಮಟ್ಟದ ಬಾಸ್ಮತಿ ಅಕ್ಕಿಯನ್ನು ಒದಗಿಸುವ ದಾವತ್ ರೋಜಾನಾದ ವೈಶಿಷ್ಟ್ಯವನ್ನು ಇದು ಪರಿಚಯಿಸುತ್ತದೆ.
ಬಿಬಿಡಿಒ ಇಂಡಿಯಾ ರೂಪಿಸಿರುವ ಜಾಹೀರಾತು ಚಿತ್ರವು ಸಾಮಾನ್ಯ ಕುಟುಂಬವೊಂದರ ಊಟದ ಮೇಜಿನ ದೃಶ್ಯದೊಂದಿಗೆ ಆರಂಭವಾಗುತ್ತದೆ. ಪರೀಕ್ಷೆಯಲ್ಲಿ ಮಗ ರೋಹನ್ನ ಅಂಕಗಳು ಪ್ರತಿ ಬಾರಿಯೂ ಬದಲಾಗುತ್ತಿರುವುದನ್ನು ತಾಯಿ ಪ್ರಶ್ನಿಸುತ್ತಾರೆ. ಇದಕ್ಕೆ ಚುರುಕಾಗಿ ಪ್ರತಿಕ್ರಿಯಿಸುವ ರೋಹನ್, ಮನೆಯಲ್ಲಿನ ಅನ್ನದ ಗುಣಮಟ್ಟವೂ ಹಾಗೆಯೇ ಇದೆ ಎಂದು ಹೇಳುತ್ತಾನೆ. ಒಂದು ದಿನ ಅನ್ನ ಉದುರುದುರಾಗಿದ್ದರೆ, ಮತ್ತೊಂದು ದಿನ ಅಂಟಿಕೊಳ್ಳುತ್ತದೆ ಎಂದು ತನ್ನ ಅಸಮಾಧಾನ ವ್ಯಕ್ತಪಡಿಸುತ್ತಾನೆ.
ಈ ಸನ್ನಿವೇಶದ ಮೂಲಕ ದೈನಂದಿನ ಅಡುಗೆಯಲ್ಲಿ ಎದುರಾಗುವ ಸಮಸ್ಯೆಯನ್ನು ಅಭಿಯಾನ ಮನಮುಟ್ಟುವಂತೆ ಕಟ್ಟಿಕೊಡುತ್ತದೆ. ಬಳಿಕ ಬಾಣಸಿಗ ರಣವೀರ್ ಬ್ರಾರ್ ಅವರು ಸಡಿಲವಾಗಿ ಮಾರಾಟವಾಗುವ ಬಾಸ್ಮತಿ ಅಕ್ಕಿಗೆ ಪರ್ಯಾಯವಾಗಿ ದಾವತ್ ರೋಜಾನಾವನ್ನು ಪರಿಚಯಿಸುತ್ತಾರೆ. ಎಚ್ಚರಿಕೆಯಿಂದ ಆಯ್ಕೆ ಮಾಡಲಾದ ಈ ಅಕ್ಕಿ ವಾರದ ಏಳು ದಿನಗಳೂ ಒಂದೇ ರೀತಿಯ ಗುಣಮಟ್ಟದ ಅನ್ನವನ್ನು ನೀಡುತ್ತದೆ ಎಂಬುದನ್ನು ಅವರು ವಿವರಿಸುತ್ತಾರೆ. ಕೊನೆಯಲ್ಲಿ, ‘ದಾವತ್ ರೋಜಾನಾ. ಹರ್ ದಿನ್ ಬನೇ ಪರ್ಫೆಕ್ಟ್!’ ಎಂಬ ಸಂದೇಶದೊಂದಿಗೆ ಜಾಹೀರಾತು ಮುಕ್ತಾಯಗೊಳ್ಳುತ್ತದೆ. ಬಳಿಕ ಕುಟುಂಬದ ಊಟದ ಮೇಜಿಗೆ ಮರಳುವ ದೃಶ್ಯದಲ್ಲಿ, ತಯಾರಿಸಿದ ಅನ್ನಕ್ಕೆ ಮಗನಿಂದ ಪೂರ್ಣ ಅಂಕಗಳು ದೊರೆಯುತ್ತವೆ.
*ಅಭಿಯಾನದ ಕುರಿತು ಮಾತನಾಡಿದ ಎಲ್ಟಿ ಫುಡ್ಸ್ ಲಿಮಿಟೆಡ್ನ ಭಾರತ ಮತ್ತು ದೂರಪ್ರಾಚ್ಯ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿತೇಶ್ ಅರೋರಾ,* “ಗ್ರಾಹಕರ ಆಹಾರ ಆದ್ಯತೆಗಳು ಮತ್ತು ಬಳಕೆಯ ಅಭ್ಯಾಸಗಳನ್ನು ಅರ್ಥಮಾಡಿಕೊಂಡು ದೀರ್ಘಕಾಲಿಕ ಗ್ರಾಹಕ ಬ್ರ್ಯಾಂಡ್ಗಳನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ಬಲಿಷ್ಠ ಬ್ರ್ಯಾಂಡ್ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ಗ್ರಾಹಕರ ವಿವಿಧ ಅಗತ್ಯಗಳು ಮತ್ತು ಬಳಕೆಯ ಸಂದರ್ಭಗಳಿಗೆ ಅನುಗುಣವಾಗಿ ಬ್ರ್ಯಾಂಡ್ನ ವ್ಯಾಪ್ತಿಯನ್ನು ವಿಸ್ತರಿಸಲು ನಾವು ಪ್ರಯತ್ನಿಸುತ್ತಿದ್ದೇವೆ.
ವಿವಿಧ ಗ್ರಾಹಕ ವರ್ಗಗಳು ಮತ್ತು ಬೆಲೆ ಶ್ರೇಣಿಗಳಿಗೆ ಸೂಕ್ತವಾದ ಆಕರ್ಷಕ ಉತ್ಪನ್ನಗಳನ್ನು ಪರಿಚಯಿಸುವುದು, ಉತ್ಪನ್ನಗಳ ಶ್ರೇಣಿಯನ್ನು ಬಲಪಡಿಸುವುದು ಹಾಗೂ ಪ್ಯಾಕೆಟ್ನಲ್ಲಿ ದೊರೆಯುವ ಬ್ರ್ಯಾಂಡೆಡ್ ಬಾಸ್ಮತಿ ಅಕ್ಕಿಯ ಬಳಕೆಯನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಆದ್ಯತೆಗಳಾಗಿವೆ. ಈ ಪ್ರಯತ್ನದಲ್ಲಿ ದಾವತ್ ರೋಜಾನಾ ಪ್ರಮುಖ ಪಾತ್ರ ವಹಿಸುತ್ತದೆ. ದೈನಂದಿನ ಅಕ್ಕಿ ಬಳಕೆಯಲ್ಲಿ ನಮ್ಮ ಉಪಸ್ಥಿತಿಯನ್ನು ಬಲಪಡಿಸುವುದರ ಜೊತೆಗೆ, ಹೆಚ್ಚಿನ ಗ್ರಾಹಕರನ್ನು ಬ್ರ್ಯಾಂಡೆಡ್ ಪ್ಯಾಕೆಟ್ ಅಕ್ಕಿಯ ಬಳಕೆಯತ್ತ ಆಕರ್ಷಿಸಲು ಇದು ನೆರವಾಗಲಿದೆ. ಗ್ರಾಹಕರ ದೈನಂದಿನ ಜೀವನದಲ್ಲಿ ದಾವತ್ ಬ್ರ್ಯಾಂಡ್ನ ಪ್ರಸ್ತುತತೆಯನ್ನು ಹೆಚ್ಚಿಸುವುದರ ಜೊತೆಗೆ, ಬ್ರ್ಯಾಂಡ್ನ ಮೇಲಿನ ವಿಶ್ವಾಸ, ಗುಣಮಟ್ಟ ಮತ್ತು ಸ್ಥಿರತೆಯ ಭರವಸೆಯನ್ನು ಒಟ್ಟುಗೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ” ಎಂದು ತಿಳಿಸಿದರು.
*ಎಲ್ಟಿ ಫುಡ್ಸ್ ಲಿಮಿಟೆಡ್ನ ಭಾರತ ಮತ್ತು ದೂರಪ್ರಾಚ್ಯ ವಿಭಾಗದ ಮುಖ್ಯ ಮಾರುಕಟ್ಟೆ ಅಧಿಕಾರಿ ರಿತೇಶ್ ಸೂದ್* ಮಾತನಾಡಿ, “ಅಕ್ಕಿ ನಮ್ಮ ದೈನಂದಿನ ಆಹಾರದ ಅವಿಭಾಜ್ಯ ಅಂಗ. ಆದರೆ ಪ್ರತಿಬಾರಿಯೂ ಒಂದೇ ರೀತಿಯ ಪರಿಪೂರ್ಣ ಅನ್ನ ತಯಾರಿಸುವುದು ಮನೆಗಳಲ್ಲಿ ಎದುರಾಗುವ ಸಾಮಾನ್ಯ ಸವಾಲಾಗಿದೆ. ಈ ನೈಜ ಅನುಭವವನ್ನು ಆಧರಿಸಿ, ಪರೀಕ್ಷೆಯ ಅಂಕಗಳಲ್ಲಿನ ಏರಿಳಿತ ಮತ್ತು ಅನ್ನದ ಗುಣಮಟ್ಟದಲ್ಲಿನ ವ್ಯತ್ಯಾಸವನ್ನು ಹೋಲಿಸುವ ಮೂಲಕ ಅಭಿಯಾನವನ್ನು ಮನರಂಜನಾತ್ಮಕವಾಗಿ ರೂಪಿಸಿದ್ದೇವೆ. ದೈನಂದಿನ ಅಡುಗೆಯಲ್ಲಿ ಉತ್ಪನ್ನದ ಗುಣಮಟ್ಟದ ಪ್ರಯೋಜನವನ್ನು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ತಿಳಿಸುವುದರ ಜೊತೆಗೆ, ಪ್ರತಿದಿನವೂ ಪರಿಪೂರ್ಣ ಬಾಸ್ಮತಿ ಅನ್ನ ತಯಾರಿಸಲು ದಾವತ್ ರೋಜಾನಾ ಉತ್ತಮ ಆಯ್ಕೆ ಎಂಬ ಸಂದೇಶವನ್ನು ಈ ಅಭಿಯಾನ ನೀಡುತ್ತದೆ” ಎಂದರು.
ದಾವತ್ ರೋಜಾನಾ ಡಿಲೈಟ್ ಅಕ್ಕಿ ಇ-ಕಾಮರ್ಸ್, ಕ್ವಿಕ್ ಕಾಮರ್ಸ್, ಆಧುನಿಕ ಚಿಲ್ಲರೆ ಮಳಿಗೆಗಳು ಹಾಗೂ ಸಾಮಾನ್ಯ ಚಿಲ್ಲರೆ ಅಂಗಡಿಗಳು ಸೇರಿದಂತೆ ವಿವಿಧ ಮಾರಾಟ ವೇದಿಕೆಗಳಲ್ಲಿ ಲಭ್ಯವಿದೆ.
