ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮುದಾಯ ಅಭಿವೃದ್ಧಿ ವಿಭಾಗದಡಿಯಲ್ಲಿ ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ಹೊದೆಕಲ್ಲು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ರಚನೆಗೆ ಶ್ರೀ ಕ್ಷೇತ್ರದಿಂದ 2ಲಕ್ಷರೂಗಳ ಅನುದಾನ ಮಂಜೂರು ಮಾಡಿದ್ದು ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಪ್ರಭಾಕರ್ ಹಾಗೂ ಧರ್ಮಸ್ಥಳದ ಭಕ್ತಾರಾದ ಸೋಮಣ್ಣನವರು ಡೈರಿಯ ಕಾರ್ಯಕಾರಿ ಮಂಡಳಿಯವರಿಗೆ ಡಿಡಿ ವಿತರಣೆ ಮಾಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀಮತಿಲತಾ, ಕಾರ್ಯದರ್ಶಿಯಾದ ಪುಷ್ಪಲತಾ, ವಲಯ ಮೇಲ್ವಿಚಾರಕರಾದ ಮಹಾಂತೇಶ್, ಸೇವಾ ಪ್ರತಿನಿಧಿ ಸೌಭಾಗ್ಯಮ್ಮ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
