ತುಮಕೂರು:ರೋಟರಿ ತುಮಕೂರು ಸಂಸ್ಥೆಯಿಂದ ನಗರದ ರೋಟರಿ ಬಾಲ ಭವನದಲ್ಲಿ ರಾಷ್ಟ್ರೀಯ ಪ್ರಚಾರಕರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಪತ್ರಕರ್ತ ಮಣ್ಣೆರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೋಟರಿ ತುಮಕೂರು ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್ ಮಾತನಾಡಿ,ನಾವು ಮಾಡುವ ಒಳ್ಳೆ ಕೆಲಸ ಇತರರಿಗೆ ಪ್ರೇರಣೆ ಆಗಬೇಕು. ಆ ಕೆಲಸದ ಫಲ ಅಗತ್ಯವಿರುವವರಿಗೆ ತಲುಪಬೇಕು ಎಂದರು.
ಈ ಸಂದರ್ಭದಲ್ಲಿ ಸಂಜನ್ ನಾಗರಾಜ್ ಹಾಗೂ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.ರೋಟರಿ ಕಾರ್ಯದರ್ಶಿ ಚಂದ್ರಕಲಾ.ಎಸ್, ಅಸಿಸ್ಟೆಂಟ್ ಗವರ್ನರ್ ಸಿ.ನಾಗರಾಜ್, ಸೌಮ್ಯ, ಹಿರೇಮಠ, ನಾಗೇಶ್ಕುಮಾರ್, ಮಲ್ಲೇಶಯ್ಯರವಿಶಂಕರ್, ಹೆಚ್.ಮಲ್ಲಿಕಾರ್ಜುನ್, ಕರಣಂರಮೇಶ್, ಎಂ.ಆರ್.ರಘು, ಹೇಮ ಮಲ್ಲಿಕಾರ್ಜುನ್, ಸುಷ್ಮಾ, ವೀರೇಶ್ ಮೊದಲಾದವರು ಭಾಗವಹಿಸಿದ್ದರು.
– ಚಂದ್ರಚೂಡ ಕೆ.ಬಿ.
