ಶಿವಮೊಗ್ಗ: ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟ, ಶಿವಮೊಗ್ಗ ವತಿಯಿಂದ 2ನೇ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1ರಂದು ಭಾನುವಾರ ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಶ್ರೀ ಧನಂಜಯ ಜಿವಾಳ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕನ್ನಡ ಭಾಷೆ, ನಾಡು-ನುಡಿಯ ಗೌರವವನ್ನು ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕನ್ನಡಿಗರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
“ಕನ್ನಡ ಏನೆ ಕುಣಿದಾಡುವುದೆನ್ನೆದೆ, ಕನ್ನಡ ಏನೆ ಕಿವಿ ನಿಮಿರುವುದು” ಎಂಬ ಕುವೆಂಪು ಅವರ ನುಡಿಯ ಆಶಯದೊಂದಿಗೆ ಕನ್ನಡದ ಏಕತೆ ಮತ್ತು ಭಾಷಾಭಿಮಾನವನ್ನು ಸಾರುವ ಕಾರ್ಯಕ್ರಮ ಇದಾಗಿದೆ.
ಕನ್ನಡದ ಉತ್ಸವದಲ್ಲಿ ಭಾಗವಹಿಸಿ, ಕನ್ನಡದ ಹಿರಿಮೆ ಮತ್ತು ನಾಡಿನ ಸಂಸ್ಕೃತಿಯನ್ನು ಸಂಭ್ರಮದಿಂದ ಆಚರಿಸುವಂತೆ ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟ ಮನವಿ ಮಾಡಿದೆ.
