ಕೊರಟಗೆರೆ:- ಕ್ಯಾಮೇನಹಳ್ಳಿ ಶ್ರೀಆಂಜನೇಯ ಶ್ರೀಕ್ಷೇತ್ರ ಕೊರಟಗೆರೆಯ ಸುಪ್ರಸಿದ್ದ ಪುಣ್ಯಕ್ಷೇತ್ರ. ರಾಜಗೋಪುರ ನಿರ್ಮಾಣಕ್ಕೆ ನನ್ನ ಸಹಕಾರದ ಜೊತೆ 5ಲಕ್ಷ ದೇಣಿಗೆ ನೀಡಿದ್ದೇನೆ ಎಂದು ಕೊರಟಗೆರೆ ಸಮಾಜಸೇವಕ ಎಂಎನ್ಜೆ-ಮಂಜುನಾಥ ತಿಳಿಸಿದರು.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿಯ ಸುಪ್ರಸಿದ್ದ ಪುಣ್ಯಕ್ಷೇತ್ರ ಶ್ರೀಆಂಜನೇಯ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ಶನಿವಾರ 5ಲಕ್ಷ ದೇಣಿಗೆ ನೀಡಿದ ನಂತರ ಮಾತನಾಡಿದರು.
ರಾಜಗೋಪುರ ನಿರ್ಮಾಣದ ಸಮಿತಿಗೆ ನಾನು ಮಾತು ಕೊಟ್ಟ ಹಾಗೇ ದೇಣಿಗೆ ನೀಡಿದ್ದೇನೆ. ಜೀರ್ಣೋದ್ದಾರ ಸಮಿತಿಯ ನಾನು ಒಬ್ಬ ಸದಸ್ಯನಾಗಿ ಕ್ಯಾಮೇನಹಳ್ಳಿ ಪುಣ್ಯಕ್ಷೇತ್ರದ ಮತ್ತಷ್ಟು ಅಭಿವೃದ್ದಿಗೆ ನನ್ನ ಸಹಕಾರ ಇರಲಿದೆ. ರಾಜಗೋಪುರ ನಿರ್ಮಾಣಕ್ಕೆ ಭಕ್ತಾವೃಂದ್ದ ಮತ್ತಷ್ಟು ದೇಣಿಗೆ ನೀಡಲಿ ಎಂದು ಮನವಿ ಮಾಡುತ್ತೇನೆ ಎಂದರು.
ಆಂಜನೇಯ ಜೀರ್ಣೊದ್ದಾರ ಸಮಿತಿ ಸದಸ್ಯ ಎಲ್.ರಾಜಣ್ಣ ಮಾತನಾಡಿ 2ಕೋಟಿ ವೆಚ್ಚದಲ್ಲಿ ರಾಜಗೋಪುರ ಕಾಮಗಾರಿ ನಡೆಯುತ್ತಿದೆ. ಭಕ್ತರ ಸಹಕಾರದಿಂದ ಈಗಾಗಲೇ ಮುಕ್ಕಾಲುಭಾಗ ಕಾಮಗಾರಿ ಮುಕ್ತಾಯವಾಗಿದೆ. ಇನ್ನೂಳಿದ ಕಾಮಗಾರಿಗೆ ಭಕ್ತರ ಸಹಕಾರ ಅತ್ಯಗತ್ಯ. 5ಲಕ್ಷ ದೇಣಿಗೆ ನೀಡಿದ ಎಂಎನ್ಜೆ ಮಂಜುನಾಥ ಅವರಿಗೆ ಧನ್ಯವಾದಗಳು ಎಂದರು.
ಕ್ಯಾಮೇನಹಳ್ಳಿಯ ಆಂಜನೇಯ ಸ್ವಾಮಿ ರಾಜಗೋಪುರ ನಿರ್ಮಾಣಕ್ಕಾಗಿ ಜೀರ್ಣೋದ್ದಾರ ಸಮಿತಿಯ ಸದಸ್ಯರಾದ ರಾಜಣ್ಣ ಅವರಿಗೆ ಕೊರಟಗೆರೆಯ ಸಮಾಜ ಸೇವಕ ಎಂಎನ್ಜೆ ಮಂಜುನಾಥ ಹಿರಿಯರು ಮತ್ತು ಸ್ನೇಹಿತರ ಜೊತೆಗೂಡಿ 5ಲಕ್ಷ ನಗದು ಹಸ್ತಾಂತರಿಸಿ ಗೋಪುರ ನಿರ್ಮಾಣಕ್ಕೆ ಮತ್ತಷ್ಟು ಸಹಕಾರ ನೀಡುವುದಾಗಿ ಭರವಸೆ ನೀಡಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅರ್ಚಕ ರಾಮಚಾರ್, ವೀರಶೈವ ಸೇವಾಸಮಿತಿ ಅಧ್ಯಕ್ಷ ಮಂಜುನಾಥ, ಮುಖಂಡರಾದ ರಾಜಣ್ಣ, ಎಲ್.ವಿ.ಪ್ರಕಾಶ್, ಓಬಳರಾಜು, ಚಂದ್ರಶೇಖರ್, ಉಮಾಶಂಕರ್, ಬಸವರಾಜು, ವೆಂಕಟಾರೆಡ್ಡಿ, ರಾಮಕೃಷ್ಣ, ಮರುಡಪ್ಪ, ರಂಗಣ್ಣ, ಲೊಕೇಶ್, ಸುರೇಶ್, ಕಾಳಿಚರಣ್, ಭಾನುಪ್ರಕಾಶ್, ಅಬ್ಬಾಸ್, ದಿಲೀಪ್, ಮಹೇಶ್, ನವೀನ್ ಸೇರಿದಂತೆ ಇತರರು ಇದ್ದರು.
- ಶ್ರೀನಿವಾಸ್ ಕೊರಟಗೆರೆ.
