ಅತೀಯಾದ ಬುದ್ದಿವಂತಿಕೆˌ ಓದುˌ ಪಾಂಡಿತ್ಯ ಇವು ಬದುಕನ್ನು ದುರ್ಬರಗೊಳ್ಳಿಸುತ್ತವೆ ಹೊರತು ಸರಳಗೊಳ್ಳಿಸುವುದಿಲ್ಲ. ಬದುಕಿನ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಲು ಹೋಗಿ ಬುದ್ದಿವಂತ ಸಿಕ್ಕಿಕೊಳ್ತಾನೆ. ಬದುಕನ್ನು ಸುಂದರಗೊಳ್ಳಿಸಲು ಸಾಮಾನ್ಯ ಜ್ಞಾನವಿದ್ದರೆ ಸಾಕು ವಿಶೇಷ ಪರಿಣಿತಿ ಬೇಕಾಗಿಲ್ಲ. Life is run by magically , Not logically… ಸಾಮಾನ್ಯ ಜ್ಞಾನ ಬುದ್ಧಿವಂತ ಜನರಲ್ಲಿ ಕಡಿಮೆ ಇರುತ್ತದೆ.
ಈ ಜನರಲ್ ನಾಲೆಡ್ಜ ಎಂಬುವುದು ಜನರಲ್ ಸ್ಟೋರ್ ದಲ್ಲಿ ಸಿಗುವಂಥದಲ್ಲ. ಅದು ದಿನನಿತ್ಯದ ಬದುಕಿನ ಅನುಭವಗಳಿಂದ ದೊರೆಯುವುದು. ನೀವು ಜೀನಿಯಸ್ ಎಂದು ಕರೆಯುವ ವ್ಯಕ್ತಿಗಳನ್ನು ನೋಡಿ ಅವರಲ್ಲಿ ಬದುಕಿನ ಬಗ್ಗೆ ಸಾಮಾನ್ಯ ಜ್ಞಾನ ಕಡಿಮೆ. ಆದರೆ ˌ ಅವರು ಜೀವನವನ್ನು ತುಂಬಾ ವರ್ಣಮಯವಾಗಿ ವಿವರಿಸಬಲ್ಲರು. ಈ ವರ್ಣಮಯವಾಗಿ ಜೀವನವನ್ನು ವಿವರಿಸುವವರೆಲ್ಲಾ ಅಷ್ಟೆ ವರ್ಣಮಯವಾಗಿ ಬದುಕಿರುವುದಿಲ್ಲ. ಅವರ ಹಿಂದೆಯೊಂದು ಕಪ್ಪು ಬಿಳುಪಿನ ಚಿತ್ರವಿರುತ್ತದೆ. ಅದು ತೋರುವ ಬಣ್ಣದ ಮುಖ ಅಸಲಿ ಮುಖ ಮರೆ ಮಾಚುತ್ತದೆ. ಅದಕ್ಕೆ ಹೇಳುವುದು ಮನುಷ್ಯನಿಗೆ ಎರಡು ಮುಖಗಳಿವೆ ಹೊರಗೊಂದು ಒಳಗೊಂದು ಎಂದು. ಹೊರಗಿನ ಮುಖ ಎಷ್ಟೇ ಕಲರಫುಲ್ ಆಗಿದ್ದರು ˌ ಒಳಗಿನ ಮುಖ ಕಪ್ಪು ಬಿಳುಪಿನದು. ಸತ್ಯವೆಂದರೆˌ ತೆರೆ ಮೇಲೆ ತೋರುವ ಅಲ್ಲಾ ತೆರೆಯ ಹಿಂದಿನ ಬದುಕಿನ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಂಡು ಬದುಕುವುದಕ್ಕೆ ಸಾಮಾನ್ಯ ಜ್ಞಾನ ಸಾಕು. ರಾಕೇಟ್ ಕಂಡು ಹಿಡಿದ ವಿಜ್ಞಾನಿಗೆ ತನ್ನ ಬದುಕನ್ನು ಹೇಗೆ ಬದುಕಬೇಕೆಂಬ ಸಿಂಪಲ್ ಫಂಡಾ ಗೊತ್ತಿರುವುದಿಲ್ಲ. ಹೀಗಾಗಿ ಬುದ್ದಿವಂತರು ಜೀನಿಯಸ್ ಗಳು ಆತ್ಮಹತ್ಯೆ ಮಾಡಿಕೊಳ್ತಾರೆ ಅಥವಾ ಹುಚ್ಚರಾಗಿರುತ್ತಾರೆ…
ಈ ಹಿಂದೆ ಜನಗಳಲ್ಲಿ ಅಷ್ಟೊಂದು ವಿದ್ಯೆ ˌ ಬುದ್ಧಿ ˌ ತಂತ್ರಜ್ಞಾನ ˌ ಸೌಕರ್ಯಗಳು…ಇರಲಿಲ್ಲ. ಆದರೂ ನಮ್ಮಗಿಂತ ನೂರುಪಟ್ಟು ಶಾಂತಿ ನೆಮ್ಮದಿಯಿಂದ ˌ ಸಂತೋಷದಿಂದ ಜೀವನ ಮಾಡಿದರು. ಕಾರಣ ಬದುಕು ತೋಳಿನ ಶಕ್ತಿ ಮೇಲೆ ಆಧಾರವಾಗಿತ್ತು . ಇವತ್ತು ತಲೆ ಮೇಲೆ ಜೀವನ ಹೆಚ್ಚಾಗಿ ನಿಂತಿದೆ. ತಲೆಭಾರವಾಗಿದೆˌ ತೋಳಗಳು ದುರ್ಬಲವಾಗಿವೆ.
ಬುದ್ದಿವಂತರುˌ ಸಾಹಿತಿಗಳುˌ ಜೀನಿಯಸ್ …ಬಹಳಷ್ಟು ಜನಗಳು ದುರಂತ ಅಂತ್ಯ ಹೊಂದಿದ್ದಾರೆ. ಕಾರಣ ಅವರು ಜೀವನವನ್ನು ಹೆಚ್ಚು ವಿವರಿಸುತ್ತಾರೆ…ಹೀಗಾಗಿ ಅವರು ಅದನ್ನು ಜೀವಿಸುವುದಿಲ್ಲ. ಸಾಮಾನ್ಯ ಜ್ಞಾನವಿರುವ ವ್ಯಕ್ತಿ ಸುಮ್ನೆ ಜೀವಿಸುತ್ತಾನೆ ˌ ಅದನ್ನು ವಿವರಿಸಲು ಹೋಗುವುದಿಲ್ಲ.
ನೀರಲ್ಲಿ ಇರುವ ಮೀನು ನೀರು ಹೇಗೆ ಎಂದು ವರ್ಣಿಸುವುದಿಲ್ಲ. ಅದು ಅಲ್ಲಿಯೇ ಇದೆ. ಬದುಕನ್ನು ತಿಳಿದವನು ಅದನ್ನು ವಿವರಿಸುವುದಿಲ್ಲ ಜೀವಿಸುತ್ತಾನೆ. ಪ್ರೇಮಿಯಾದವನು ಪ್ರೇಮದಲ್ಲಿ ಇರುತ್ತಾನೆ…ಪ್ರೇಮದಿಂದ ಹೊರಬಂದಾಗ ಪ್ರೇಮ ವ್ಯಾಖ್ಯಾನಿಸುತ್ತಾನೆ.
ಬದುಕಲು ಬುದ್ದಿವಂತಿಕೆಗಿಂತ ಸಾಮಾನ್ಯ ಜ್ಞಾನ ಬೇಕು. ಸಾಮಾನ್ಯ ಜ್ಞಾನವೆಂಬುವುದು ಶಾಲೆ ಕಾಲೇಜ್ ಪುಸ್ತಕ ಓದಿ ತಿಳಿಯುವುದಲ್ಲ …ಸಾಮಾನ್ಯ ಜೀವನ ಅನುಭವದಿಂದ ತಿಳಿದು ಬದುಕುವುದು.
ಬದುಕಿನ ಉದ್ದೇಶವೇನು? ಸಾಯುತ್ತನಾ ಬದುಕುವುದೆ ಬದುಕಿನ ಉದ್ದೇಶ. ಬದುಕಿನ ಉದ್ದೇಶ ಮತ್ತು ಅರ್ಥ ಹುಡುಕಲು ಹೋದವರೆಲ್ಲಾ ಬದುಕಿಗೆ ಯಾವುದೆ ನಿರ್ದಿಷ್ಟ ಉದ್ದೇಶವಿಲ್ಲ ಮತ್ತು ಬದುಕಿಗೆ ಯಾವುದೇ ಅರ್ಥವಿಲ್ಲಾ ಎಂದು ನಿರಾಶೆಯಿಂದ ಹಿಂದೆ ಬಂದಿದ್ದಾರೆ. ಅಸ್ತಿತ್ವ ತನ್ನಿಂದ ಎಷ್ಟು ಕೆಲಸ ಮಾಡಿಸಬೇಕೋ ಅಷ್ಟು ಮಾಡಿಸಿ ಕರೆಯಿಸಿಕೊಳ್ಳುತ್ತದೆ. ಸಾವು ಬರುವವರೆಗೂ ದೈರ್ಯದಿಂದ ಏನೇಯಾಗಲಿ ಹೋರಾಡುತ್ತಲೆ ಇರಬೇಕು.
*ಜಯದೇವ ಪೂಜಾರ*
7676870233
