ಚನ್ನರಾಯಪಟ್ಟಣ: ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಜೆ. ಗೌಡ ಅವರ 45ನೇ ವರ್ಷದ ಹುಟ್ಟುಹಬ್ಬವನ್ನು ಚನ್ನರಾಯಪಟ್ಟಣದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿಯಾಗಿ ಆಚರಿಸಿದರು.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ 2023ರ ಬಿಜೆಪಿ ಅಭ್ಯರ್ಥಿ ಸಿ.ಆರ್. ಚಿದಾನಂದ್ ಅವರ ನೇತೃತ್ವದಲ್ಲಿ ಪಟ್ಟಣದ 40 ಅಡಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಆಗಮಿಸಿದ ಪ್ರೀತಂ ಜೆ. ಗೌಡ ಅವರನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಂಡರು. ಈ ವೇಳೆ ಬೃಹತ್ ಸೇಬಿನ ಹಾರ ಹಾಕಿ ಶುಭಾಶಯ ಕೋರಿದರು.

ನಂತರ ಕೇಕ್ ಕತ್ತರಿಸಿ ಸಂಭ್ರಮಿಸಿದ ಪ್ರೀತಂ ಜೆ. ಗೌಡ ಅವರು, ತಮ್ಮ ಮೇಲಿನ ಪ್ರೀತಿ ಮತ್ತು ಅಭಿಮಾನ ಇದೇ ರೀತಿ ಮುಂದುವರಿಯಲಿ ಎಂದು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಮತದಾರರ ಆಶೀರ್ವಾದ ದೊರೆತರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಉತ್ತಮ ಸ್ಥಾನಮಾನ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಸಿ.ಆರ್. ಚಿದಾನಂದ್, ಸಿ.ಎನ್. ಶಶಿಧರ್, ಪರಮ ಗಂಗಾಧರ್, ಗನ್ನಿ ವಿಶ್ವನಾಥ್, ಕುಮಾರ್, ಸಿ. ನಾಗರಾಜ್, ನಂಜುಂಡಮೈಮ್, ಕೆರೆಬೀದಿ ಜಗದೀಶ್, ಧರಣಿ ನಾಗೇಶ್, ಚಿಕ್ಕತರಹಳ್ಳಿ ನಾಗೇಶ್, ರೂಪೇಶ್, ಗುಂಡಶೆಟ್ಟಿಹಳ್ಳಿ ಮಂಜುನಾಥ್, ಮಾರೇನಹಳ್ಳಿ ಆನಂದ್, ಜಯರಾಮ್, ನಲ್ಲೂರು ನವೀನ್, ಟಿವಿಎಸ್ ಧರಣೇಶ್, ಟಿವಿಎಸ್ ರಾಹುಲ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
– ಮಂಜುನಾಥ್ ಐ.ಕೆ.
