ಮನಸು ಮೃದಂಗ
(ಲೇಖನಗಳ ಸಂಕಲನ)
ಯೋಗ-ಭೋಗ
ಅರಿವು ಮತ್ತು ಚೇತನ ಯೋಗಕ್ಕೆ ಉಪಕಾರಿ ಹಾಗು ಪೂರಕವು ಹೌದು. ಯೋಗವು ಭೋಗದ ವಿರುದ್ದ ಪಥ. ಅಂದರೆ ಯೋಗದಲ್ಲಿ “ಧಾತು”ವನ್ನು ಹೊರ ಬಿಂದುವಾಗಿ ಮಾರ್ಪಡುಕೊಳ್ಳುವುದು. ಮಾನವನು ಸಾಮಾಜಿಕ ಜೀವಿ. ಆತನದೇ ಆದ ಸಂಸ್ಕೃತಿ, ಧರ್ಮ, ಪರಂಪರೆ ಮತ್ತು ಗ್ರಂಥಗಳ ಚೌಕಟ್ಟಿನಲ್ಲಿ ಬೆಳದಿರುವನಾಗಿರುತ್ತಾನೆ. ಈ ಕಾರಣದಿಂದಲೆ ಅವನ ಆತ್ಮ ಬಿಂದು ತ್ವರಿತ ಗತಿಯಲ್ಲಿ ಹೊರ ಹಾಕಲು ಸಾಧ್ಯವಾಗುವುದಿಲ್ಲ. ಹೊರಹಾಕಿದರೆ ಅವನಿಗೆ ಅನಾಹುತ ಶತ ಸಿದ್ದ. ಈ ವಿವೇಚನವನ್ನು ಪಡೆಯುವುದು ಅಷ್ಠು ಸುಲಭದ ಮಾತಲ್ಲ. ಜ್ಞಾನ ಕಾಸಿಗೆ ಸಿಗುವ ವಸ್ತು ಅಲ್ಲ. ಅದು ಯಾರ ಆಸ್ಥಿಯೂ ಅಲ್ಲ.
ಜ್ಞಾನವು ಬ್ರಂಹ್ಮಾಡದ ಆಸ್ಥಿ. ಈ ಆಸ್ಥಿಯನ್ನು ಪಡೆಯಬೇಕಾದರೆ ಯೋಗಚಿತ್ತನಾಗಿರಬೇಕು. ಯೋಗವು ಕಲಿಯುವುದೊಂದೆ ಅಲ್ಲ. ಕಲಿತಿದ್ದಿನ್ನ ತಿಳಿಯುವಂತನಾಗಿರಬೇಕು. ತಿಳಿದಿದ್ದನ್ನ ಅರ್ಥವನ್ನು ಮಾಡಕೊಳ್ಳಬೇಕು. ಆ ಅರ್ಥವನ್ನ ಈ ವಿಶಾಲವಾದ ಭೂಮಿಯಲ್ಲಿ ಹುಡಕಬೇಕು. ಹುಡಿಕಿದಂತಾ ಅರ್ಥಕ್ಕೆ ಅಧೀನನಾಗಿರಬೇಕು.
ಅಧೀನತೆಯಲ್ಲಿ ಮಾನವನು ಪವಿತ್ರಗೊಳ್ಳುತ್ತಾನೆ. ಪವಿತ್ರೆತೆಯಲ್ಲಿ ಪ್ರೇಮಾವಶನಾಗುತ್ತಾನೆ. ಹಾಗೆಯೆ ಕಲಿತಂತ ವ್ಯಕ್ತಿ ಸೃಷ್ಠಿಕರ್ತನಿಗೆ ದಾಸನಾಗಬೇಕು. ಈ ಪವಿತ್ರ ದಾಸಾಪ್ರವೃತ್ತಿ ಹೊಂದಿದಾಗ ಕ್ಷಣತುರಿಕೆ ಹಾಗು ತ್ವರಿತಗತಿಯ ಬಿಂದು ವಿಸರ್ಜನೆಯನ್ನ ನಿಯಂತ್ರಣ ಮಾಡುವಂತನಾಗುತ್ತಾನೆ. ಹೆಣ್ಣು ಮತ್ತು ಗಂಡಿನ ಭೋಗವಲ್ಲದ ಯೋಗದಲ್ಲಿ ಪರಸ್ಪರ ಹತ್ತಿರ ಬಂದಾಗ ಪ್ರೀತಿಯಾ ಒಲುಮೆ ಕಾಣುವಂತಾ ವಾತವರಣ ನಿರ್ಮಾಣವಾಗುವುದು. ಈ ಸಮಯದಲ್ಲಿ ಸಾಕ್ಷಾತ್ ಕಾಮ ದೇವತೆಯೆ ಪ್ರತ್ಯಕ್ಷೆಯಾಗುವುದರಲ್ಲಿ ಸಂದೇಹವಿಲ್ಲ. ಸಕಾರತ್ಮಕ ಮಿಲನ ಮಹೋತ್ಸವನ್ನು ಶಿವ ಪಾರ್ವತಿಗೆ ಹೋಲಿಸಬಹುದೆನ್ನುವುದು ನನ್ನ ಅಭಿಪ್ರಾಯ.
ತಂತ್ರ ವಿಜ್ಞಾನ ಹಾಗು ಐಚ್ಚಿಕ ಜ್ಞಾನ ಮತ್ತು ಸಿಧ್ಧಾಂತ ಇಲ್ಲಿ ನಿಷ್ಪ್ರಯೋಜಕ. ಇಲ್ಲಿ ಆಲಿಸುವುದೊಂದೆ ಮಂತ್ರ. ರಾಸ ಲೀಲೆ ಮತ್ತು ಶಿವ ಲೀಲೆಗಳು ದಾರ್ಶಿನಕವಲ್ಲ. ಈ ಉಚ್ಚ ಸ್ಥಿತಿ ಅನುಭೋಗವೇ ಹೊರತು ಯೋಗವಲ್ಲ. ಆದರೆ ಅನುಭೋಗ ಧೀರ್ಗ ಸಮಯದ ಅನುಭವ ಯೋಗದಿಂದ ಮಾತ್ರ ಸಾಧ್ಯ.
ಬ್ರಂಹ್ಮಾಡ ಸೃಷ್ಠಿ ಮಹಾನ್ ಶಕ್ತಿಯಿಂದಲೆನ್ನುವುದು ತಿಳಿದಿರುವ ವಿಷಯ. ಪಿಂಡದಲ್ಲು ಸಹ ಸೂಕ್ಷ್ಮವಾದ ಶಕ್ತಿಯನ್ನ ಹೊರ ಹಾಕಲೇ ಬೇಕು, ಇಲ್ಲವಾದಲ್ಲಿ ಮಾನವನ ಸಂತತಿ ಕೊನೆಗೊಳ್ಳಬಹುದು. ಆದುದರಿಂದ ಆದಿ ಶಕ್ತಿ, ಪರಾ ಶಕ್ತಿ ಮತ್ತು ಮಹಾ ಶಕ್ತಿಯಾದ ಪಾರ್ವತಿಯು ಶಿವನ ಉತ್ಕೃಷ್ಠ ಶಕ್ತಿಯನ್ನು ಅರಿವುಳ್ಳವಳಾಗಿದ್ದರಿಂದ, ತನ್ನ ಜಾಣತನದಿಂದ, ತನ್ನ ಜ್ಞಾನದಿಂದ ಹಾಗು ತನ್ನ ತಾಳ್ಮೆಯಿಂದ ಆ ಶಕ್ತಿಯನ್ನು ತನ್ನ ಮಡಿಲಲ್ಲಿ ಶೇಕರಸಿ ನಮ್ಮ ಸಂತತಿಗೆ ಕಾರಣ ಕರ್ತಳಾದಳೆನ್ನುವದು ತಂತ್ರದಲ್ಲಿ ತಿಳಿಸಿರುವ ವಿಷಯವಾಗಿದೆ.
ಇದನ್ನೆ ಇಂಗ್ಲೀಷ್ನಲ್ಲಿ “ಕನ್ಸಪ್ಷನ್” ಎನ್ನುವರು. ಇದೇ ಕಾರಣದಿಂದಾಗಿಯೇ ಬಹುರೂಪಿಯಾದ ಸ್ತ್ರೀ ಯನ್ನು “ಗರ್ಬ ಧರಸಿದ ವ್ಯಕ್ತಿ” ಎನ್ನುವದು. ಈ ಕಾರಣದಿಂದಲೆ ಈಶ್ವರನ ಇನ್ನೊಂದು ಅವತಾರವನ್ನು “ಅರ್ಧನಾರಿಶ್ವರ” ಎಂಬುದಾಗಿ ಕರೆಯುವುದು.

ನಮ್ಮ ನಮ್ಮ ಕೆಂದ್ರ ಬಿಂದು ಅಗಾದವಾದ ಶಕ್ತಿಯನ್ನು ಹೊಂದಿರುತ್ತೆ. ಈ ಶಕ್ತಿಯನ್ನು ಅಣು ಬಾಂಬಿಗೆ ಹೋಲಿಸಬಹುದು. ಇಂತಹ ಯೋಗ ಶಕ್ತಿಯನ್ನು ಮನುಷ್ಯನು ಒಂದು ಕಲಿಕೆಯ ಮಾಪನವನ್ನಾಗಿ ಬಳಸಿದರೆ ಈ ಮನುಷ್ಯನು ಮಾನವನಾಗಿ ಪರಿವರ್ಥನೆಗೊಳ್ಳುತ್ತಾನೆ, ಇಲ್ಲವಾದಲ್ಲಿ ಮೃಗನಾಗುತ್ತಾನೆ.
ಹೊರ ಕೆಂದ್ರ ಬಿಂದುವು ಅಗೊ ಬ್ರಹ್ಮನಲ್ಲಿ ಹುದಗಿ ಹೋಗಿರುವದರಿಂದ ಈ “ಸಂ”ನ್ನು ನಾವು ಹುಡಕಬೇಕಾಗುತ್ತದೆ. ಹುಡುಕುವ ಕೆಲಸ ಕಷ್ಟಧಾಯಕ. ಈ ಪಥ ಅಷ್ಠು ಸಲಭದ ಮಾತಲ್ಲ. ಎಲ್ಲರಿಗು ಸುಲಭವಾಗಿಯೆ ಎಲ್ಲಾ ಕೆಲಸಗಳಾಗಬೇಕು ಹಾಗು ಕುಳಿತಿದ್ದ ಜಾಗಕ್ಕೇ ತಂದು ಕೊಡಬೇಕು, ಇದು ಸಾಧ್ಯವೆ? ಜ್ಞಾನವು ಕಷ್ಠ, ಈ ಪಥವನ್ನು ಹುಡಕಲೆತ್ನಿಸಿದವನಿಗೆ ಜ್ಞಾನಿ ಎಂದು ಕರೆಯುವರು. ಈ ಮಾರ್ಗವನ್ನ ಹುಡಕಬೇಕಾದವನಿಗೆ ಅರಿವು, ಗಮನ, ಏಕಾಗ್ರತೆ, ನಿಲುವು, ಗುರಿ, ಸಂಯಮ, ಅಭ್ಯಾಸಗಳೆಲ್ಲವು ಸಾದನಗಳಾಗಿರುತ್ತೆವೆ. ಜ್ಞಾನವೆಂದರೆ ಬ್ರಹ್ಮನಲ್ಲಿ ಅಡಿಗಿರುವ ಅಖಂಡ ವಿಚಾರ ಮತ್ತು ವಿಷಯಗಳು.
ಇವುಗಳನ್ನು ಯಾವುದೆ ಪುಸ್ತಕ ಭಂಡಾರಗಳಲ್ಲಿ ಸಿಗುವಂತದ್ದಲ್ಲ. ಇದನ್ನೆ “ಪ್ರಾಣ”ವೆನ್ನುತ್ತಾರೆ. ಇಂದಿನ ಯೋಗಿವರ್ಯರು ‘ಪ್ರಾಣಾಯಾಮ’ದ ಹೆಸಿರಿನಲ್ಲಿ ವೈಭವೀಕರಿಸಿ ವಾಣಿಜ್ಯವಾಗಿಸಿದ್ದಾರೆ. ಅಘಾದವಾದ ಬ್ರಹ್ಮಾಂಡದಲ್ಲಿ ನಿರಂತರ ಆಮ್ಲಜನಕವಿರುವುದರಿಂದ ಪ್ರಾಣಯಾಮ ಕ್ರಿಯೆಯಿಯು ಹೆಚ್ಚು ಆಮ್ಲಜನಕ ಸೇವನೆಗೆ ಒಳಗಾಗಿ ನಮ್ಮ ಏಕಾಗ್ರತೆ ಮತ್ತು ಗಮನವು ಹೆಚ್ಚಾಗಿ, ತಿಳಿದಿಕೊಳ್ಳುವಂತದನ್ನ ಅತಿ ಹೆಚ್ಚು ತಿಳಿದಕೊಳ್ಳಬಹುದಷ್ಟೆ. ನಾವು ತಿಳಿದ ಹಾಗೆ ಪ್ರಾಣಯಾಮ ಮಾಡಿದರೆ ಸಿದ್ದಿ ಲಭಿಸುವುದಿಲ್ಲ. ಮಾಡುವಂತಹ ಕರ್ತವ್ಯವನ್ನು ಹೃದಯದಿಂದ ಮಾಡಿದರೆ ಮಾತ್ರ ಸಿದ್ದಿಯನ್ನು ಪಡೆಯಬಹುದು.
ಇದನ್ನೆ ನಾನು “ಧ್ಯಾನದಿಂದ ಮುಕ್ತಿಯ ಕಡೆ” ಅನ್ನವುದು. ಭೋಗಾನಂದ ಮತ್ತು ಯೋಗಾನಂದಗಳ ಮೂಲಕವೇ ಅಥವ ಇವರೆಡುಗಳಿಂದ ಮಾತ್ರವೆ ನಮಗೆ ಜೀವನ ಮುಕ್ತಿ ಸಾಧ್ಯ. ಒಮ್ಮೆ ನನ್ನ ಕಡೆ ಗಮನಹರಿಸಿ, ನಾನು ಹೇಳುವುದನ್ನ ಆಲಿಸಿ, ನಾ ಹೇಳಿದಾ ಎಲ್ಲಾ ವಿಚಾರಗಲನ್ನು ಒಂದುಗೂಡಿಸಿದರೆ “ಸಂ(ನಾವು)ಬೋಗದಿಂದ ಯೋಗದ ಕಡೆಗೆ” ಅನ್ನೋ ವಿಚಾರಕ್ಕೆ ಬರಬಹುದು. ಈ ಕಾರಣದಿಂದಲೆ ನಾನು ಪ್ರತಿಪಾದಿಸುವ ವಿಷಯ ಬೋಗಕ್ಕೂ ಮತ್ತು ಯೋಗಕ್ಕೂ ಯಾವುದೇ ವ್ಯತ್ಯಾಸವಿಲ್ಲ.
ಯೋಗದಿಂದ ಭೋಗ, ಭೋಗದಿಂದ ಯೋಗ, ಹಾಗೆಯೆ ಸಂಭೋಗದಿಂದ ಸಂಯೋಗ ಮತ್ತು ಸಂಯೋಗದಿಂದ ಸಂಭೋಗ. ಇವರೆಡನ್ನು ಲಭಿಸಬೇಕಾದರೆ ವಿಶ್ವ ಪ್ರೇಮ ಹಾಗು ಪವಿತ್ರ ಪ್ರೀತಿಗಳಿಂದ ಮಾತ್ರ ಸಾಧ್ಯ ಅಲ್ಲವೆ ಗುಂಡಾ………….”
ಧೀರ್ಘ ಉಪನ್ಯಾಸವನ್ನು ನೀಡಿದ ವೈದ್ಯರು ಗುಂಡನ ಕಡೆ ನೋಡಿದಾಗ, ಅವನು ಕಾಣದೆ ಇರುವುದನ್ನು ಕಂಡು “ನನ್ನ ಹತ್ತಿರ ಬಂದು ಹೆಂಡತಿಯನ್ನು ಮರೆತಿದ್ದರಿಂದ ಹೆಂಡತಿಯನ್ನು ಹುಡಕಲು ಹೊರಟನೇನೊ” ಎಂದು ಹೇಳಿ ವೈದ್ಯರು ಪ್ರವಚನವನ್ನು ಮುಗಿಸಿದರು.
ಯೋಗ
ಯೋಗದಲ್ಲೀ ಏನೈತೇ ಶಿವಾ?
ಯೋಗದಲ್ಲಿ ಎಲ್ಲಾ ಐತೇ ಶಿವಾ…
ಮಣ್ಣಲ್ಲಿ ಏನೈತೇ ಶಿವಾ?
ಮಣ್ಣಲ್ಲಿ ಮಡಿಕೆ ಇದ್ದು…
ಕಂಡಾ ಮಡಿಕೆಯ ಕೊಂಡು…
ಕೊಂಡಾ ಮಡಿಕೇಲಿ ಮಜ್ಜಿಗೆಯ ತುಂಬಿ….
ತುಂಬಿದ ಮಡಿಕೆ ಅಟ್ಟದ ಮೇಲಿಟ್ಟು……
ತುಂಬಿಟ್ಟಾ ಸುರವ ಮಿಯ್ಯೋ ಶಿವಾ…. ಮಿಯ್ಯೋ ಶಿವಾ…..
ಮುರಿದಾ ಮನೆಯಲ್ಲಿ ಏನೈತೇ ಶಿವಾ?
ಮುರಿದಾ ಮನೆಗೆ ಸೂರೊಂದಿದ್ದು…..
ಹಣತೆತ್ತಿ ಮನೆಯ ಕೊಂಡು…..
ಕೊಂಡಾ ಮನೆಯಲ್ಲಿ ಹೆಂಡತಿಯ ತುಂಬಿ……
ಹೆಂಡತೀಯ ಮನವಾ ಗೆದ್ದು…….
ಗೆದ್ದಾ ಮನದಲ್ಲಿ ಖುಷಿಯಾ ಕಾಣೋ ಶಿವಾ…. ಖುಷಿಯ ಕಾಣೋ ಶಿವಾ……
ಮರಳು ಬಾಳಲ್ಲಿ ಏನೈತೇ ಶಿವಾ?
ಮರಳೆಂಬಾ ಬಾಳಲ್ಲಿ ನೀರಿನ ಕಾರಂಜಿ ಇದ್ದೂ…….
ಮನೆಯಾ ಮುಂದೇ ಕಾರಂಜಿ ಕಟ್ಟೀ…..
ಕಟ್ಟಿದಾ ಕಾರಂಜಿ ಪಕ್ಕ ಕೂತು……
ಕುಳಿತವನಾ ಮೈ ಮೇಲೆ ಗಂಗೆಯಾ ಸಿಂಚನಿಸಿ…..
ಸಿಂಚನದ ಗಂಗೆಯಾ ಅನುಬವಿಸೋ ಶಿವಾ….. ಅನುಬವಿಸೋ ಶಿವಾ…….
ಮುಳ್ಳೆನ್ನೊ ಜೀವನದಲ್ಲಿ ಏನೈತೇ ಶಿವಾ?
ಜೀವನದಲ್ಲಿ ರಸವೊಂದಿದ್ದು….
ನಿನ್ನ ಮುಂದೇ ಬ್ರಹ್ಮನೊಬ್ಬನಿದ್ದು……
ಬ್ರಹ್ಮನಡಿ ಪ್ರೀತಿಪ್ರೇಮವಿದ್ದು…..
ಬಂಧನದಾ ಮನಸಾ ಗೆದ್ದು……
ಗೆದ್ದ ಮನವ ಉಳಿಸೊ ಶಿವಾ…. ಮನವ ಉಳಿಸೊ ಶಿವಾ…….
ಯೋಗದಲ್ಲಿ ಏನೈತೆ ಶಿವಾ…….
ಯೋಗದಲ್ಲಿ ಎಲ್ಲಾ ಐತೇ ಶಿವಾ…….ಯೋಗದಲ್ಲಿ ಎಲ್ಲಾ ಐತೆ ಶಿವಾ……..
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

