ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ ತಾಲ್ಲೂಕು ಘಟಕದ ವತಿಯಿಂದ ೨೦೨೬ ನವೆಂಬರ್ ೨೨ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಹಾಸನ ನಗರದ ಗಾಂಧಿ ಭವನದಲ್ಲಿ ಹಿರಿಯ ಸಾಹಿತಿ ಹರಿಹರಪುರ ಶ್ರೀಧರ್ ಅವರ ಸರ್ವಾಧ್ಯಕ್ಷತೆಯಲ್ಲಿ ಹಾಸನ ತಾಲ್ಲೂಕು ದ್ವಿತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷೆ ಕೆ.ಸಿ. ಗೀತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಅವರು ಆಶಯ ನುಡಿಗಳನ್ನಾಡಲಿದ್ದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಬಿ. ಮದನಗೌಡ ಉದ್ಘಾಟಿಸಲಿದ್ದಾರೆ, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಭುವನೇಶ್ವರಿ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಹಾಸನದ ಗಂಧದಕೋಠಿಯ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ.ಕೆ. ಮಂಜಯ್ಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಶ್ರೀನಿವಾಸ್ ಅವರು ‘ಸಂಘಟನಾ ಸೇವಾ ಭೂಷಣ ಪ್ರಶಸ್ತಿ’ ಪ್ರದಾನ ಮಾಡುವರು. ಪೂರ್ಣಪ್ರಜ್ಞಾ ಇನ್ಫಾಸ್ಟçಕ್ಚರ್ ಮಾಲೀಕರಾದ ಕೆ.ಆರ್. ಲಕ್ಷ್ಮೀಕಾಂತ್ ಅವರು ‘ಸಮಾಜ ಸೇವಾ ಭೂಷಣ ಪ್ರಶಸ್ತಿ’ ಪ್ರದಾನ ಮಾಡುವರು, ಟೈಮ್ಸ್ ಶಿಕ್ಷಣ ಸಮೂಹ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ ಅವರು ‘ಶಿಕ್ಷಣ ಸೇವಾ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಸುಕನ್ಯ ಮುಕುಂದ ಅಧಿಕಾರ ಹಸ್ತಾಂತರ ಮಾಡುವರು, ಪತ್ರಕರ್ತ ಹಾಗೂ ಸಾಹಿತಿ ನಾಗರಾಜ್ ಹೆತ್ತೂರು ಸಮ್ಮೇಳನಾಧ್ಯಕ್ಷರ ಕುರಿತು ಮಾತನಾಡುವರು. ಮುಖ್ಯ ಅತಿಥಿಗಳಾಗಿ ವೇದಿಕೆಯ ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ವೈ.ಎಸ್. ತಮ್ಮಣ್ಣಶೆಟ್ಟಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಉದಯ ಟಿ. ಭಾಗವಹಿಸುವರು ಎಂದರು.
ತಾಲ್ಲೂಕು ಉಪಾಧ್ಯಕ್ಷ ವಿ. ಮೋಹನ್ ಮಾತನಾಡಿ ಸಮಾಜ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿದ ಆರಕ್ಷಕ ಇಲಾಖೆಯ ಅನಂತ ಎಚ್.ಎನ್, ಸಮಾಜಿಕ ಕ್ಷೇತ್ರದ ಟಿ.ಎನ್. ಮೋಹನ್ ಕುಮಾರ್, ನ್ಯಾಯಾಂಗ ಇಲಾಖೆಯ ಎಚ್.ಆರ್. ಮಂಜುನಾಥ್, ನ್ಯಾಯವಾದಿ ಎಂ.ಬಿ. ಗಿರಿಜಾಂಬಿಕ, ಕವಿ ಹಾಗೂ ಸಮಾಜ ಸೇವಕ ಜಿ.ಕೆ. ವೆಂಕಟೇಶ್, ಕೃಷಿ ಸಾಧಕ ಟಿ.ಸಿ. ಹರೀಶ್, ಯುವ ಮುಖಂಡ ಟಿ.ಬಿ. ರಾಜಶೇಖರ, ಸಮಾಜ ಸೇವಕಿ ಎಚ್.ಎಸ್. ಭಾನುಮತಿ ಹಾಗೂ ಮಮತಾ ಪಾಟೀಲ ಅವರುಗಳಿಗೆ ‘ಸಮಾಜ ಸೇವಾ ಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದರು.
ತಾಲ್ಲೂಕು ಕಾರ್ಯದರ್ಶಿ ಸಿ.ಎನ್. ನೀಲಾವತಿ ಮಾತನಾಡಿ ಸಂಘಟನಾ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡಿದ ಆಲೂರು ತಾಲ್ಲೂಕಿನ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಪಿ. ವಿಶ್ವನಾಥ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜು ಟಿ, ರಾಜ್ಯ ಸಾಂಸ್ಕೃತಿಕ ಕಾರ್ಯದರ್ಶಿ ಮಧು ಎಸ್, ಬೆಳ್ಳಿತೆರೆ ಹಾಗೂ ರಂಗಭೂಮಿ ಕಲಾವಿದೆ ಪೂಜಾ ರಘುನಂದನ್, ರಂಗಭೂಮಿ ಕಲಾವಿದೆ ಶ್ವೇತಾ ಮೋಹನ್ ಎಂ.ಎಸ್, ಸಂಘಟಕಿ ಸಾವಿತ್ರಿ ಮಲ್ಲಿಕಾರ್ಜುನ ಅವರುಗಳಿಗೆ ‘ಸಂಘಟನಾ ಸೇವಾ ಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದರು.
ತಾಲ್ಲೂಕು ಕೋಶಾಧ್ಯಕ್ಷೆ ಡಿ.ಎಂ. ಕಲ್ಪನಾ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಆಲೂರು ತಾಲ್ಲೂಕಿನ ಜಗದೀಶ್ ಎಚ್.ಎಸ್ ಹಾಗೂ ಜಿ.ವಿ. ಸುಜಾತ, ಹಾಸನ ತಾಲ್ಲೂಕಿನ ರಾಧಾಮಣಿ ಕೆ, ಐರಿನ್ ಎ ಹಾಗೂ ಬಿ.ಎಂ. ಚಂದ್ರನಾಯಕ್, ಸಕಲೇಶಪುರ ತಾಲ್ಲೂಕಿನ ಕೇಶವಮೂರ್ತಿ ಕೆ.ಎಂ ಮತ್ತು ಹೊಳೆನರಸೀಪುರ ತಾಲ್ಲೂಕಿನ ಎಂ.ಜಿ. ಪರಮೇಶ್ ಮಡಬಲು ಅವರುಗಳಿಗೆ ‘ಶಿಕ್ಷಣ ಸೇವಾ ಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದರು.
ತಾಲ್ಲೂಕು ಮಹಿಳಾ ಕಾರ್ಯದರ್ಶಿ ಪದ್ಮಾವತಿ ವೆಂಕಟೇಶ್ ಮಾತನಾಡಿ ಮಧ್ಯಾಹ್ನ ೦೨-೩೦ ಕ್ಕೆ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ಹಮ್ಮಿಕೊಂಡಿದ್ದು ಶಿವಮೊಗ್ಗದ ಹೆಸರಾಂತ ಸಾಹಿತಿ ಡಾ. ಹಸೀನಾ ಎಚ್.ಕೆ. ಅಧ್ಯಕ್ಷತೆ ವಹಿಸಲಿದ್ದು, ಹಾಸನದ ಹಿರಿಯ ಸಾಹಿತಿ ಗೊರೂರು ಅನಂತರಾಜು ಆಶಯ ನುಡಿಗಳನ್ನಾಡುವರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಕೇಂದ್ರ ಸಮಿತಿಯ ಕೋಶಾಧ್ಯಕ್ಷ ಎಚ್.ಎಸ್. ಸಬವರಾಜ್, ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ಆಲೂರು ತಾಲ್ಲೂಕು ಅಧ್ಯಕ್ಷ ಮಣಿಪುರ ಕೃಷ್ಣೇಗೌಡ, ಅರಸೀಕೆರೆ ತಾಲ್ಲೂಕು ಅಧ್ಯಕ್ಷ ಕೆ.ಎಸ್. ಮಂಜುನಾಥ್, ಅರಕಲಗೂಡು ತಾಲ್ಲೂಕು ಅಧ್ಯಕ್ಷ ಗಂಗೇಶ್ ಬಸವನಹಳ್ಳಿ, ಹೊಳೆನರಸೀಪುರ ತಾಲ್ಲೂಕು ಅಧ್ಯಕ್ಷೆ ಕಾವ್ಯಶ್ರೀಕೃಷ್ಣ, ಬೇಲೂರು ತಾಲ್ಲೂಕು ಅಧ್ಯಕ್ಷ ಮಾರುತಿ ಕೆ.ಬಿ. ದೊಡ್ಡಕೋಡಿಹಳ್ಳಿ, ಸಕಲೇಶಪುರ ತಾಲ್ಲೂಕು ಅಧ್ಯಕ್ಷ ಅರುಣಗೌಡ ಕರಡಿಗಾಲ, ಕಂಚಮಾರನಹಳ್ಳಿ ಪ್ರಗತಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗ್ಯಾರಂಟಿ ರಾಮಣ್ಣ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಾ.ನಂ. ಲೋಕೇಶ್, ಲೇಖಕಿಯರ ಬಳಗದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿ, ಅನನ್ಯ ಟ್ರಸ್ಟಿನ ಅಧ್ಯಕ್ಷೆ ಕೆ.ಟಿ. ಜಯಶ್ರೀ ಅವರುಗಳು ಗೌರವ ಉಪಸ್ಥಿತಿ ವಹಿಸುವರು. ಕವಿಗೋಷ್ಠಿಯಲ್ಲಿ ಜಿಲ್ಲೆಯ ೪೦ ಕವಿಗಳು ಕಾವ್ಯ ವಾಚನ ಮಾಡುವರು ಎಂದರು.
*ಚಿತ್ರದಲ್ಲಿ*
1. ಕೆ.ಸಿ. ಗೀತಾ, ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ.
2. ವಿ. ಮೋಹನ್, ಉಪಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ.
3. ಸಿ.ಎನ್. ನೀಲಾವತಿ, ಕಾರ್ಯದರ್ಶಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ.
4. ಕಲ್ಪನಾ ಡಿ.ಎಂ, ಕೋಶಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ.
5. ಪದ್ಮಾವತಿ ವೆಂಕಟೇಶ್, ಮಹಿಳಾ ಕಾರ್ಯದರ್ಶಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ.
