ತುಮಕೂರು: ಬ್ಯಾಂಕುಗಳ ರಾಷ್ಟೀಕರಣ,ಉಳುವವನೇ ಭೂಮಿಯ ಒಡೆಯ,ಜೀತಪದ್ದತಿ ನಿರ್ಮೂಲನೆಯಂತಹ ಕಾಯ್ದೆಗಳು ಭಾರತದಲ್ಲಿ ಶೋಷಿತ ಸಮುದಾಯಗಳು ಇತರರಂತೆ ತಲೆಎತ್ತಿ ನಿಲ್ಲಲು ಸಹಾಯಕವಾಗಿದ್ದು, ಇದಕ್ಕೆ ಕಾರಣರಾದ ಶ್ರೀಮತಿಇಂದಿರಾಗಾಂಧಿ ಭಾರತೀಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಇದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ್ಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿದ್ದ ಭಾರತದ ಮೊದಲ ಮಹಿಳಾ ಪ್ರಧಾನಿ ಶ್ರೀ ಮತಿ ಇಂದಿರಾಗಾಂಧಿ ಅವರ 109ನೇ ಜನ್ಮ ದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು,ಅವರು ಜಾರಿಗೆ ತಂದ ಊರಿಗೊಂದು ರಸ್ತೆ, ಮಂಡಲಕ್ಕೊAದು ಆಸ್ಪತ್ರೆ ಭಾರತದ ಅಭಿವೃದ್ದಿಯ ದಿಕ್ಕನ್ನೇ ಬದಲಿಸಿತು ಎಂದರು.
ಲಾಲ್ ಬಹದ್ದೂರ್ ಶಾಸ್ತ್ರೀ ಅವರ ನಂತರ ದೇಶದ ಪ್ರಧಾನಿಯಾಗಿ 20 ಅಂಶದ ಕಾರ್ಯಕ್ರಮಗಳ ಮೂಲಕ ಗರೀಭಿ ಹಠಾವೋ ಘೋಷಣೆಯ ಮೂಲಕ ಎಲ್ಲರಿಗೂ ಸೂರು,ಬಟ್ಟೆ ಹಾಗೂ ಆಹಾರ ಸಿಗಬೇಕೆಂಬ ಉದ್ದೇಶದಿಂದ ಹಲವಾರು ದಿಟ್ಟ ಕಾಯ್ದೆಗಳನ್ನು ಜಾರಿಗೆ ತಂದರು. ತನ್ನ ಜೀವಕ್ಕೆ ಕುತ್ತು ಬರಬಹುದೆಂಬ ಶಂಕೆ ಇದ್ದರೂ ದೇಶದ ಐಕ್ಯತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಅಪರೇಷ್ ಬ್ಲೂಸ್ಟಾರ್ ಪ್ರಾರಂಭಿಸಿ, ದೇಶಕ್ಕೆ ಕಂಕಟ ಪ್ರಾಯರಾದ ಉಗ್ರ ಬಿಂದ್ರೇನ್ ವಾಲ ಅವರನ್ನು ಹತ್ಯೆಗೈದು, ಪಂಜಾಬ್ ಭಾರತದಿಂದ ಕೈತಪ್ಪದಂತೆ ನೋಡಿಕೊಂಡವರು ಇಂದಿರಾಗಾಂಧಿ.ಅವರ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದು ಜಿ.ಚಂದ್ರಶೇಗೌಡ ನುಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ಅಹಮದ್ ಮಾತನಾಡಿ,ಇಂದಿರಾ ಪ್ರಿಯದರ್ಶಿನಿ, ಪಿರೋಜ್ಗಾಂಧಿ ಅವರನ್ನು ಮದುವೆಯಾಗಿ ಇಂದಿರಾಗಾಂಧಿಯಾದರು.ವಿದೇಶದಲ್ಲಿ ಶಿಕ್ಷಣ ಪಡೆದು,ಅದನ್ನು ದೇಶದ ಸರ್ವತೋಮುಖ ಅಭಿವೃದ್ಧಿಗೆ ಬಳಕೆ ಮಾಡಿದವರು.ಬರಗಾಲದಿಂದ ದೇಶದ ಜನರು ಹಸಿವಿನಿಂದ ನರಳುವುದನ್ನು ನೋಡಲಾರದ ವಿದೇಶಗಳಿಂದ ಕೆಂಪುಜೋಳ, ಗೋಧಿ ನುಚ್ಚು ತರಿಸಿ ನೀಡುವ ಮೂಲಕ ಬಡವರನ್ನು ಬದುಕಿಸಿದವರು.ಪಾಕಿಸ್ಥಾನದೊಂದಿಗೆ ಯುದ್ಧ ಮಾಡಿ, ಹೊಸ ದೇಶ ಬಾಂಗ್ಲಾ ಹುಟ್ಟಿಗೆ ಕಾರಣರಾದರು.ಸಿಕ್ಕಿಂ ಗಲಾಟೆಯನ್ನು ನಿಭಾಯಿಸಿದ ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದರೆ ಇಂದು ಭಾರತದ ಈಶಾನ್ಯ ರಾಜ್ಯಗಳಲ್ಲಿ ಚೀನಾ ನೂರಾರು ಕಿ.ಮಿ. ರಸ್ತೆ ನಿರ್ಮಿಸಿದರೂ 56 ಇಂಚಿನ ಎದೆಯುಳ್ಳು ಪ್ರಧಾನಿ ತುಟಿ ಪಿಟಕ್ ಅನ್ನುತ್ತಿಲ್ಲ.ಜಾತಿ, ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ಒಡೆದು ಆಳದೆ ಎಲ್ಲರೂ ನಮ್ಮವರೇ ಎಂದ ಇಂದಿರಾಗಾಂಧಿಗೂ,ಹಿಂದು, ಮುಸ್ಲಿಂ ಹೆಸರಿನಲ್ಲಿ ವಿಭಜಿಸುವ ಇಂದಿನ ಪ್ರಧಾನಿಯ ಕಾರ್ಯವೈಖರಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.
ಮುಖಂಡರಾದ ಗಂಗಹನುಮಯ್ಯ,ಬ್ಲಾಕ್ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್, ಫೈಯಾಜ್,ಜಿಲ್ಲಾ ವಕ್ತಾರರಾದ ಶ್ರೀಮತಿ ಕೆ.ಎಂ.ಸುಜಾತ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
