ಥೈಲ್ಯಾಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಬ್ಯಾಂಕಾಕ್ನಲ್ಲಿ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ನನ್ನು ಭೇಟಿಯಾದರು. ಇತ್ತೀಚೆಗೆ ಚೀನಾ ಓಲೈಕೆಗೆ ಭಾರತದ ಹೆಸರು ಹೇಳಿದ್ದ ಕಾರಣಕ್ಕೆ ಇಂದು ಮೋದಿ ಅವರನ್ನು ಭೇಟಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಅಲ್ಲಿBIMSTEC ಶೃಂಗಸಭೆ ನಡೆಯುತ್ತಿದ್ದು, ಯೂನಸ್ ಕೂಡ ಆಗಮಿಸಿದ್ದಾರೆ. ಯೂನಸ್ ಅವರು ಭೋಜನದ ಸಮಯದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಕುಳಿತಿದ್ದ ಚಿತ್ರವೂ ನಿನ್ನೆ ಕಾಣಿಸಿಕೊಂಡಿತ್ತು.
ಬ್ಯಾಂಕಾಕ್, ಏಪ್ರಿಲ್ 04: ಪ್ರಧಾನಿ (Narendra Modi) ಇಂದು ಬ್ಯಾಂಕಾಕ್ನಲ್ಲಿ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್(Muhammad Yunus)ನನ್ನು ಭೇಟಿಯಾದರು. ಇತ್ತೀಚೆಗೆ ಚೀನಾ ಓಲೈಕೆಗೆ ಭಾರತದ ಹೆಸರು ಹೇಳಿದ್ದ ಕಾರಣಕ್ಕೆ ಇಂದು ಮೋದಿ ಅವರನ್ನು ಭೇಟಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಅಲ್ಲಿBIMSTEC ಶೃಂಗಸಭೆ ನಡೆಯುತ್ತಿದ್ದು, ಯೂನಸ್ ಕೂಡ ಆಗಮಿಸಿದ್ದಾರೆ. ಯೂನಸ್ ಅವರು ಭೋಜನದ ಸಮಯದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಕುಳಿತಿದ್ದ ಚಿತ್ರವೂ ನಿನ್ನೆ ಕಾಣಿಸಿಕೊಂಡಿತ್ತು.
ಸ್ವಲ್ಪ ದಿನಗಳ ಹಿಂದೆ ಯೂನಸ್, ಈಶಾನ್ಯ ರಾಜ್ಯಗಳನ್ನು ಭಾರತದೊಂದಿಗೆ ಸಂಪರ್ಕಿಸುವ ಚಿಕನ್ ನೆಕ್ಗೆ ಸಮೀಪವಿರುವ, ಸಿಕ್ಕಿಂನಿಂದ ಬಾಂಗ್ಲಾಗೆ ಹರಿಯುವ ತೀಸ್ತಾ ನದಿ ಸಂರಕ್ಷಣಾ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಅವರು ಚೀನಾಗೆ ಆಹ್ವಾನ ನೀಡಿದ್ದಾರೆ. ಕೆಲ ತಿಂಗಳುಗಳ ಹಿಂದಷ್ಟೇ ಈ ಯೋಜನೆಗೆ ಬೆಂಬಲ ಸೂಚಿಸಿದ್ದ ಭಾರತ, ತಾಂತ್ರಿಕ ತಂಡವನ್ನು ಕಳಿಸಲೂ ಒಪ್ಪಿಕೊಂಡಿತ್ತು.
ಅಂತೆಯೇ, ಸರಕು ಸಾಗಣೆಗೆ ಚಿತ್ತಗಾಂಗ್ ಬಂದರನ್ನು ಬಳಸಲು 2017ರಲ್ಲಿ ಭಾರತಕ್ಕೆ ಅನುಮತಿಸಿದ್ದ ಬಾಂಗ್ಲಾ ಇದೀಗ ಅದರ ಬಳಿ ಆರ್ಥಿಕ ಮತ್ತು ಕೈಗಾರಿಕಾ ಪಾರ್ಕ್ ನಿರ್ಮಿಸುವಲ್ಲಿ ಚೀನಾದೊಂದಿಗೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದೆ.

