ಕೇಂದ್ರ ಬಜೆಟ್ 2025 – ಹೈಲೈಟ್ಸ್ ಹೀಗಿವೆ
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ದಾಖಲೆಯ 8 ನೇ ಬಜೆಟ್ ಮಂಡನೆಯನ್ನು ಮಾಡಿದ್ದಾರೆ. ಸರ್ವಾಂಗೀಣ ಅಭಿವೃದ್ಧಿಯ ಬಜೆಟ್ ಇದು ಹೇಳಿಕೊಂಡಿರುವ ನಿರ್ಮಲಾ ಅವರ ಬಜೆಟ್ ಮಂಡನೆಯ ಮುಖ್ಯಾಂಶಗಳು ಹೀಗಿವೆ.
- ಸಬ್ ಕಾ ವಿಕಾಸ್ , ಸಬ್ ಕಾ ವಿಶ್ವಾಸ್ ಮಂತ್ರದ ಅಡಿಯಲ್ಲಿ ಎಲ್ಲಾ ರಾಜ್ಯಗಳಿಗೂ ಅಭಿವೃದ್ಧಿ ಪಥ
- ಕೃಷಿ, ನಿರ್ಮಾಣ ಮತ್ತು ಅಭಿವೃದ್ಧಿ ಕ್ಷೇತ್ರಗಳಿಗೆ ಒತ್ತು.
- ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು. ಕೃಷಿಕರಿಗೆ ಬೆಂಬಲ
- ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಉತ್ಪಾದನಾ ವಲಯಕ್ಕೆ ಬೂಸ್ಟ್
- ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ
- ಉದ್ಯೋಗ ಸೃಷ್ಟಿ ಮಾಡುವಂತಹ ಉದ್ಯಮಗಳಿಗೆ ಬೆಂಬಲ
- ಇಂಧನ ವಲಯದ ಸುರಕ್ಷತೆಗೆ ಕ್ರಮ, ನವೀಕರಿಸಲಾಗುವ ಇಂಧನಗಳ ಹೆಚ್ಚಳಕ್ಕೆ ಹೊಸ ಯೋಜನೆ
- ರಫ್ತು ನೀತಿಗೆ ಹೆಚ್ಚಿನ ಒತ್ತು. ಅನ್ವೇಷಣಾ ವಲಯಕ್ಕೂ ಸಹ ಉತ್ತೇಜನ
- ತೆರಿಗೆ, ಇಂಧನ ವಲಯ, ಗ್ರಾಮೀಣ ಅಭಿವೃದ್ಧಿ, ಗಣಿಗಾರಿಕೆ, ವಿತ್ತೀಯ ಕ್ಷೇತ್ರಗಳಿಗೆ ಹೆಚ್ಚಿನ ಗಮನ
- ಬಿಹಾರದಲ್ಲಿ ಮಖಾನಾ ಬೋರ್ಡ್ ಸ್ಥಾಪನೆ ರೈತರ ಆದಾಯ ಹೆಚ್ಚಳಕ್ಕಾಗಿ ಹಣ್ಣು ಕೃಷಿಗೆ ಬೆಂಬಲ
- ನವೋದ್ಯಮಗಳ ಉತ್ತೇಜನಕ್ಕೆ ಫಂಡ್ ಆಫ್ ಫಂಡ್ಸ್ ಯೋಜನೆ ಪ್ರಾರಂಭ, ಮೊದಲ ಕಂತಿನಲ್ಲಿ 10 ಸಾವಿರ ಕೋಟಿ ಮೀಸಲು
- ದಲಿತ ಮಹಿಳಾ ಉದ್ಯಮಿಗಳಿಗೆ ಸಾಲ ಯೋಜನೆ
- ಅಭಿವೃದ್ಧಿ ಕಾರ್ಯಗಳಿಗಾಗಿ ರಾಜ್ಯಗಳಿಗೆ 50 ವರ್ಷ ಅವಧಿಯ ಬಡ್ಡಿ ರಹಿತ ಸಾಲ
- ಹಿರಿಯ ನಾಗರಿಕರಿಗೆ ಟಿಡಿಎಸ್ ಮಿತಿಯಲ್ಲಿ ಹೆಚ್ಚಳ
- ಜೀವ ರಕ್ಷಕ ಔಷಧಿ ಮತ್ತು ಕ್ಯಾನ್ಸರ್ ಔಷಧಿಗಳಿಗೆ ಕಸ್ಟಮ್ ತೆರಿಗೆಯಿಂದ ವಿನಾಯಿತಿ
- ಪ್ರತಿಯೊಂದು ಜಿಲ್ಲಾಸ್ಪತ್ರೆಗಳಲಿಯೂ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ
- ಮೊಬೈಲ್, ವಿದ್ಯುಚ್ಚಾಲಿತ ವಾಹನ, ಟಿವಿ ಮತ್ತಿತರ ಎಲೆಕ್ಟ್ರಾನಿಕ ವಸ್ತುಗಳಿಗೆ ತೆರಿಗೆ ಕಡಿತ
