ಟಿ.ನರಸೀಪುರ : ತಾಲ್ಲೂಕಿನ ಬನ್ನೂರು ಕಾವೇರಿ ಸೇತುವೆ ಮೇಲೆ ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ತಾಯಿ ಮತ್ತು ಮಗ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಹಳೇ ಸೇತುವೆ ಪಕ್ಕದಲ್ಲಿ ನಿರ್ಮಾಣವಾಗಿರುವ ಹೊಸ ಸೇತುವೆಯನ್ನು ಉದ್ಘಾಟನೆ ಮಾಡಿ ಸಾರ್ವಜನಿಕರ ಜೀವ ಕಾಪಾಡಬೇಕೆಂದು ಕರ್ನಾಟಕ ರಾಜ್ಯ ರೈತ ಮೂಲ ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪರವರ ಬೆಂಗಳೂರಿನ ನಿವಾಸಕ್ಕೆ ತೆರಳಿ ಮನವಿ ಮಾಡಿರುವುದಾಗಿ ತಿಳಿಸಿದ್ದು, ಇದೇ ಸಂದರ್ಭದಲ್ಲಿ ತಾಯಿ ಮಗ ಸಾವನ್ನಪ್ಪಿದ ಸುದ್ದಿ ತಿಳಿದು ಆತಂಕ ಪಟ್ಟು ಮನನೊಂದು ಕೂಡಲೇ ಇಲಾಖೆ ಸಭೆ ಕರೆದು ತ್ವರಿತ ಗತಿಯಲ್ಲಿ ಸೇತುವೆ ಉದ್ಘಾಟನೆ ಮಾಡಲು ತಿಳಿಸುತ್ತೇನೆಂದು ತಿಳಿಸಿದ್ದಾರೆಂದರು.
– ಎಂ.ನಾಗೇಂದ್ರಕುಮಾರ್,
ಟಿ.ನರಸೀಪುರ
