ಮನಸು ಮೃದಂಗ
(ಲೇಖನಗಳ ಸಂಕಲನ)
ಸುಮುಖ
ನನ್ನ ಪದವಿ ಪೂರ್ವ ವಿದ್ಯಾಭ್ಯಾಸವನ್ನು ನನ್ನ ದೊಡ್ಡಮ್ಮನವರ ಜೊತೆಯಿದ್ದು ಮುಗಿಸಿದೆ. ದೊಡ್ಡಪ್ಪನವರಿಗೆ ನಮ್ಮ ದೊಡ್ಡಮ್ಮ ಎರಡನೆ ಹೆಂಡತಿ. ದೊಡ್ಡಮ್ಮನಿಗೆ ಮಕ್ಕಳಿರಲಿಲ್ಲ ಹಾಗೂ ಇವರ ಮದುವೆ ಆದ ಕೆಲವೆ ವರ್ಷಗಳಲ್ಲಿ ಅಂದರೆ ಚಿಕ್ಕಂದಿನಲ್ಲೆ ದೊಡ್ಡಪ್ಪ ಸ್ವರ್ಗ ವಾಸಿಯಾದರು.
ಅಂದು ದೊಡ್ಡಪ್ಪ ಶ್ರೀಮಂತರು, ದೊಡ್ಡಮ್ಮ ಸುಂದರ ಅಪ್ರಾಪ್ತ ಯುವತಿ, ಶ್ರೀಮಂತರೆಂಬ ಕಾರಣಕ್ಕೆ ಮದುವೆ ಮಾಡಿ ಕೊಟ್ಟಿದ್ದರು. ದೊಡ್ಡಮ್ಮನವರಿದ್ದ ಊರನ್ನು ಅಲ್ಲಿಯ ಸ್ಥಳೀಯ ನಾಯಕರ ಇಚ್ಚಾ ಕೊರತೆಗಳಿಂದ ಹಾಗೂ ಮೌಢತ್ವದಿಂದ ಹಿಂದುಳಿದ ಜಾಗವೆಂದೆ ಕರೆಯುತ್ತಿದ್ದರು. ಆದರೆ ನಾನು ಮಾತ್ರ ಇವೆಲ್ಲರ ಪರಿವಿಲ್ಲದೆ ಆ ಊರಿನಲ್ಲಿ ಸಂಭ್ರಮಿಸಿದ್ದೇ ಹೆಚ್ಚು. ಕಾರಣ ನನ್ನ ಆಸಕ್ತಿ ಆಟಗಳಿಂದ ಕೂಡಿದ್ದು ಹಾಗೂ ಪಾಠಗಳಲ್ಲಿಯೂ ಕೇಂದ್ರಿಕೃತವಾಗಿತ್ತು, ಎಲ್ಲದಕ್ಕಿಂತ ಮಿಗಿಲಾಗಿ ಅಲ್ಲಿಯ ಸಮ ವಯಸ್ಸಿನ ಬಂಧುಗಳು ಮತ್ತು ಸ್ನೇಹಿತರು ನನಗೆ ಮನತುಂಬಾ ಹಿಡಸಿದ್ದರು. ಆಲ್ಲಿಯ ಕಾಲೇಜಿನ ಪ್ರಾಧ್ಯಪಕರಂತೂ ನನಗೆ ಅಚ್ಚುಮೆಚ್ಚು ಹಾಗೂ ಬುದ್ದಿವಂತರಿದ್ದರು.
ಆ ಕಾರಣದಿಂದ ಒಳ್ಳೆಯ ಅಂಕಗಳನ್ನು ಪಡೆದು ವೈದ್ಯ ಕಾಲೇಜಿಗೆ ಸೇರ್ಪಡೆಯಾದೆ. ನನಗೆ ಇನ್ನೂ ಹದಿನೇಳು ವರ್ಷಗಳು, ಅಪ್ರಭುಧ್ದತೆಯ ವಯಸ್ಸುಳ್ಳವನು, ಹುಡುಗ ಬುದ್ದಿಯಿಂದ ಸಿಟ್ಟು ಹಾಗು ಕೋಪ ಯಾವಾಗಲು ಮೂಗಿನ ತುದಿಯಲ್ಲೇ ಇರತ್ತಿತ್ತು. ಮಾರ್ಕೆಟ್ ಹತ್ತಿರದಲ್ಲೇ ಇದ್ದರೂ ದೊಡ್ಡಮ್ಮನವರ “ಕಾಯಿ ಪಲ್ಯ ತಾರೊ” ಕೂಗಿಗೆ ಬೆಲೆ ಕೊಡತ್ತಿರಲಿಲ್ಲ. ಈ ಕಾರಣದಿಂದ ಅವರೇ ಮಾರ್ಕೆಟ್ಗೆ ಹೋಗಿ ತರಕಾರಿಗಳನ್ನ ತರುತ್ತಿದ್ದರು. ನಮ್ಮ ಮನೆ ಇರುವ ಜಾಗ ಓಣಿಯಾದ್ದರಿಂದ ಆ ಓಣಿಯಲ್ಲಿ ಯಾರೇ ಮಾತನಾಡಿದರೂ ನಮ್ಮ ಮನೆಯ ಒಳಗೆ ಮಾತಾನಾಡುತಿದ್ದಾರೇನೊ ಅನ್ನುವ ರೀತಿಯಲ್ಲಿ ಧ್ವನಿ ಕೇಳಿಸುತ್ತಿತ್ತು.
ಅಂದು ಬೆಳಗ್ಗೆ ಗಂಟೆ ಏಳು ಇರಬಹುದು. ನಮ್ಮ ದೊಡ್ಡಮ್ಮನವರೆ ಕಾಯಿ ಪಲ್ಯ ತರಲೆಂದು ಹೊರ ನೆಡದರು ಸ್ವಲ್ಪ ಸಮಯದೆಲ್ಲೆ ದೊಡ್ಡಮ್ಮನವರನ್ನು ಎದುರಾದ ವ್ಯಕ್ತಿ “ಅಯ್ಯೊ ಹಾಳ್ ಶನಿ, ಮುಂಡೆ ಎದುರಾದ್ಲಲ್ಲೆ, ಮಿಂಡರಿಗೆ ಹುಟ್ದೋಳು” ಎನ್ನುವ ಧ್ವನಿ ಕೇಳಿಸಿತು. ದೊಡ್ಡಮ್ಮ ತನ್ನ ಮನದಲ್ಲೆ ಅವನಿಗೆ ಕೋಟಿ ಶಾಪ ಹಾಕಿ ತನ್ನ ದುಖಃವನ್ನು ನುಂಗಿದ್ದರೊ ಏನೋ ತಿಳಿಯದು. ಅದನ್ನು ಕೇಳಲು ಅವರು ಭೂಮಿಯ ಮೇಲೆ ಇಲ್ಲ.
ನಾನು ಈ ಚಿಂತನಾ ಲೇಖನವನ್ನು ಬರೆಯಲು ಶುರು ಮಾಡಿದ ಹೊತ್ತಿನಲ್ಲಿ ಅದೇ ಧ್ವನಿ ಮತ್ತೆ ಮತ್ತೆ ನನ್ನ ಅಂತರಾಳದಲ್ಲಿ ಪ್ರತಿಧ್ವನಿಸಿತು. ಅಂದರೆೆ ಎದುರಾದ ವ್ಯಕ್ತಿಗೆ ದೊಡ್ಡಮ್ಮ ಸುಮಂಗಲಿಯಲ್ಲಾ ಮತ್ತು ಅಂದಿನ ಅವನ ಕಾರ್ಯಗಳೆಲ್ಲಾ ವಿಘ್ಞವಾಗುತ್ತವೆ ಅನ್ನೊ ಭಯ ಅವನಲ್ಲಿ ಕಾಡುತ್ತಿತ್ತು ಎನ್ನುವದು ನನ್ನ ಅನುಮಾನ.

ವಿನಾಯಕನ ಮೊದಲನೆಯ ಹೆಸರು “ಸುಮುಖ”. ಅಂದರೆ ಸುಮಂಗಲಿಯ ಮುಖ ಎಂದರ್ಥ. ಹಿಂದು ಧರ್ಮದಲ್ಲಿ ಮಾನವ ತನ್ನ ಕಾರ್ಯ ಸಿದ್ದಿ ಪಡೆಯುವದಕ್ಕೋಸ್ಕರ ವಿನಾಯಕನನ್ನು ಆಮಂತ್ರಸಿ ಪೂಜಿಸವುದು ವಾಡಿಕೆ. ಈ ನಂಬಿಕೆ ಯುಗ ಯುಗಾಂತರ ದಿಂದಲೂ ನೆಡದುಬಂದಿದೆ. ವಿನಾಯಕನನ್ನು “ಸುಮುಖ” ಎನ್ನಲು ಕಾರಣವು ಏನು? ಇದರ ಬಗ್ಗೆ ತಿಳಿಯುವ ಪ್ರಯತ್ನ ಮಾಡೋಣ.
ಯಾವುದೇ ವ್ಯಕ್ತಿ ಏಕ ಮುಖ ಧಾರಿಯಾದರೆ ಅವನು ಖಂಡಿತವಾಗಲೂ ದೇವತಾ ಸ್ವರೂಪಿ. ಆದರೆ ಮಾನವ ಅನೇಕ ಮುಖಗಳನ್ನು ಅಥವ ಮುಖವಾಡಗಳನ್ನು ಹೊಂದಿರುವದರಿಂದ ಮಾನವ ದೇವನಾಗಲು ಸಾಧ್ಯವಿಲ್ಲ. ಆದುದರಿಂದ ದೇವನೊಬ್ಬನೆ ‘ಏಕ ಮುಖವಾಡಧಾರಿ’. ಜ್ಞಾನದ ಒಳ ಅರ್ಥದಲ್ಲಿ ಹಸುಕೂಸನ್ನು ದೇವರೆಂದು ಕರೆಯುವುದಿದೆ. ಇದರ ಕಾರಣ, “ಮುಗ್ದತೆಯ ಮುಖವಾಡ” ಹೊಂದಿರುವನಾದ್ದರಿಂದ ಪುರಾಣಗಳು ಮಕ್ಕಳಿಗೆ ದೇವರೆಂದು ಹೇಳುತ್ತವೆ.
ಕೂಸು ಮಗುವಾಗಿ ಬೆಳೆದಂತೆ ಈ ಮುಗ್ದತೆಯ ಮುಖವಾಡವನ್ನು ತೊರೆದು ಅನೇಕ ತರ ತರಹದ ಲೌಕಿಕ ಮುಖವಾಡಗಳನ್ನು ಹೊಂದಿ ವಿವಿದ ದ್ರವ್ಯ ರಾಶಿಯ ಮಾಯಾ ಲೋಕದಲ್ಲಿ ತನ್ನ ಇಂದ್ರಿಯಗಳ ಜೊತೆ ಬೆರತು, ಇಲ್ಲದ ಮಾನಸಿಕ ಸಮಸ್ಯೆಗಳನ್ನು ತನ್ನ ಹೆಗಲಿಗೆ ಹೇರಿಕೊಳ್ಳುವನು. ಕಾಲಾನುಗುಣವಾಗಿ, ಇಂದ್ರಿಯಾತೆನಗಳಿಂದ ತಿಳುವಳಿಕೆಗೊಂಡು ಸೂಕ್ಷ್ಮ ಅರ್ಥಗಳನ್ನ ಹುಡುಕಿ ಹಾಗೂ ಸೃಜನಶೀಲತೆಗಳ ಒಳಗೆ ಭಾವನೆ, ಜ್ಞಾನ, ಯೋಚನೆ ಮತ್ತು ಇಚ್ಚೆಗಳಿಂದ ಬೆರಸಿ ಸಕರಾತ್ಮಕ ಮುಖವಾಡಗಳನ್ನು ಧರಸಿ ಮಾನವನು ತನ್ನ “ವ್ಯಕ್ತಿತ್ವ” ವನ್ನು ಊರ್ಧ್ವಮುಖವಾಗಿ ಗಳಸಿಕೊಳ್ಳುತ್ತಾ ಹೋಗುತ್ತಾನೆ.
ರೋಮನ್ ಬಾಷೆಯಲ್ಲಿ ಮುಖವಾಡವನ್ನು “ರ್ಸೊನಾ ” ಎಂದು ಕರೆದರು. ಇಂತಹ ಅನೇಕ ರ್ಸೊನಾಗಳನ್ನು ಧರಿಸಿದ ವ್ಯಕ್ತಿಯ ರೂಪ ರೇಷಗಳನ್ನ “ರ್ಸನಾಲಿಟಿ ” ಎಂದು ಕರೆದರು. ವ್ಯಕ್ತಿಗಳ ನಿರೂಪಣ ಶೀಲತೆಯೊಳಗೆ ಅಂದರೆ ರ್ಸನಾಲಿಟಿ ಒಳಗೆ ತನ್ನ ಕರ್ಮ, ಸಂಸ್ಕೃತಿ, ಆಚಾರ, ವಿಚಾರ, ವಿವೇಕ, ಬುದ್ದಿ, ಬೆಳೆದಿರುವ ರೀತಿಗಳೆಲ್ಲವೂ ಸೇರಿಕೊಂಡಿರುತ್ತೆ.
ಮಹಾನ್ ಬುದ್ದನು ತನ್ನ ಲೌಕಿಕ ಮುಖಗಳನ್ನ ಜ್ಞಾನೋದಯದಿಂದ ಒಮ್ಮಿಂದೊಮ್ಮೆಗೆ ಕಳಚಿ ಸರ್ವ ವ್ಯಾಪ್ತಿ, ಸದಾಚಾರಿ ಹಾಗೂ ಪ್ರೀತಿಯ ಚಿಲುಮಾಧಿಪತಿಯಾದ. ತನ್ನ ಪ್ರಶ್ನೆಗಳಿಗೆ ಉತ್ತರಗಳು ಸಿಗಿದಿದ್ದ ಕಾರಣ ಮೌನಾವಾಸಿಯಾಗಿ ಒಲುಮೆಯ ಬಿಳಿ ಬಣ್ಣವನ್ನ ಧರಿಸಿ ಕೈಲಾಸನಾಥನಾದ. ಅಂದರೆ ಯಾವುದೆ ವ್ಯಕ್ತಿ ಹಿಂದೆ ಹೊಂದಿರುವ ನಕಾರಾತ್ಮಕ ಮುಖವಾಡಗಳನ್ನ ಹೇಗೆ ಕಳಚಬಹುದು ಹಾಗೆಯೆ ಕಂಡ ಸಕಾರಾತ್ಮಕ ಮುಖವಾಡಗಳನ್ನ ಧರಿಸಬಹುದು.
ಧರಿಸುವಂತಹಾ ಮುಖವಾಡಗಳು ಮುಕ್ತಿಮಾರ್ಗೋಪಾಯದಲ್ಲಿ ಸಾಗಿದರೆ ಒಳ್ಳೆಯದು. ಆದರೆ ಈ ಆಡಂಬರದ ತಾಂತ್ರಿಕ, ಯಾಂತ್ರಿಕ ಮತ್ತು ವಾಸ್ತು ಲೋಕದಲ್ಲಿ ಮಾನವನ ವ್ಯಕ್ತಿತ್ವವು ಷಢ್ ಐಶ್ರ್ಯಾದಿ, ಕಣ್ಣು ಕೋರೈಸುವ ಬಣ್ಣಗಳಿಂದ ಮುಚ್ಚಿ ಕಂಗೊಳಿಸುವುದು. ಸಂಪತ್ತಿಗೆ ಹಾಗು ದ್ರವ್ಯಕ್ಕೆ ಬೆಲೆ ಕೊಡುವ ಪ್ರಸ್ತುತ ಪ್ರಪಂಚದಲ್ಲಿ ಮಾನವನು ಕಂಡುಕೂಂಡ ಬಣ್ಣಗಳನ್ನು ಸಂದರ್ಭಾನುಸಾರ ಕಳಿಚಿ ನಿಜ ಸ್ವರೂಪವನ್ನು ತಾಳುವನು. ಇಂತಹ ಸ್ಥಿತಿಯಲ್ಲೆ ಆ ವ್ಯಕ್ತಿ ಮಂಗನಾಗವುದು.ಮನೋವಿಜ್ಞಾನದಲ್ಲಿ ಕೆಲವು ಮಾನದಂಡಗಳನ್ನು ಉಪಯೋಗಿಸಿ ದ್ರವ್ಯಗಳಿಗೆ ಅಳತೆ ಹಾಗು ತೂಕ ಪ್ರಮಾಣಗಳಿದ್ದಂತೆ ಅನೇಕ ರೂಪುರೇಷೆಗಳಿಂದ ಕೂಡಿದ ನಡವಳಿಕೆಗಳನ್ನೆ “ವ್ಯಕ್ತಿತ್ವ” ಮಾನದಂಡವೆಂದು ನಾಮಕರಣ ಮಾಡಿರುವರು.
)
ಉದಾಹರಣೆಗೆ ಅನುಮಾನದ ವ್ಯಕ್ತಿ, ಗಾಬರಿ ವ್ಯಕ್ತಿ, ಪೀಡಿಸೊ ವ್ಯಕ್ತಿ ಹೀಗೆ ವಿಂಗಡಿಸುತ್ತಾ ಹೋಗಬಹುದು. ಈ ಕಾರಣದಿಂದಾಗಿ ಮನುಷ್ಯನನ್ನು ನೋಡಿದೊಡನೆ ರೂಪದಿಂದ ಗುರಿತಸಬಹುದೇ ಹೊರೆತು ವ್ಯಕ್ತಿತ್ವದಿಂದ ಅಲ್ಲ. ಸಾಮಾನ್ಯವಾಗಿ ಎಲ್ಲರು ಸಮಾಜದ ದೃಷ್ಟಿಯಲ್ಲಿ ಒಂದೆ ಮುಖವಾಡವನ್ನು ಹೊಂದಿರುತ್ತಾರೆ. ನಾನು ಮನೋ ವೈದ್ಯನಾದ್ದರಿಂದ ನನ್ನನ್ನು ಅತಿಯಾಗಿ ಕಾಡುವ ವ್ಯಕ್ತಿತ್ವ “ದ್ವಿಮುಖ” ಅಂದರೆ ಎರಡು ಮುಖವಾಡಗಳನ್ನು ಹೊಂದಿರುವತವರು. ಇಂತವರನ್ನ ಜನ ಸಾಮಾನ್ಯರು ನಯವಂಚಕರು ಅಥವ ವ್ಯಾಘ್ರಮುಖವುಳ್ಳವರು ಅಥವ ಗೋಸುಂಬೆಗಳು ಎಂದು ಕರೆಯುವರು.
ಇವರು ಮನೋನ್ಯೂನತೆ ಮತ್ತು ವಿಕಲತೆ ಪಟ್ಟಿಗೆ ಸೇರ್ಪಡೆಗೊಂಡಿರುವುದಿಲ್ಲ. ಜನ ಸಾಮಾನ್ಯರು ಇವರನ್ನು ಕಂಡುಕೊಳ್ಳುವದರಲ್ಲಿ ತುಂಬ ಕಷ್ಟ ಪಡಬೇಕಾಗುವದು. ಮತ್ತು ನಮ್ಮ ಸಮಾಜದಲ್ಲಿ ಇಂತವರು ಗುರುತಿಸಲಾರದಷ್ಟು ಬೆರೆತು ಹೋಗಿರುವದರಿಂದ ಅನೇಕ ವೇಳೆ ಇವರಿಂದ ಮುಗ್ದರು ಪಡಬಾರದ ಕಷ್ಟಗಳಿಗೆ ಅಥವ ಶೋಷಣೆಗೆ ಒಳಗಾಗುತ್ತಾರೆ. ಇಂತವರನ್ನು ಹೆಸರಿಸುತ್ತಾ ಹೋದರೆ ಒಂದು ದೊಡ್ಡ ಪಟ್ಟಿಯನ್ನೇ ಮಾಡಬಹುದು. ಇವರನ್ನು ಅತಿ ಸೂಕ್ಷ್ಮವಾಗಿ ನಾವು ನೋಡಬೇಕು ಹಾಗೂ ಕಾಣಬೇಕು ಮತ್ತು ಸಮಾಜದ ಎಲ್ಲಾ ವಿಭಾಗದಲ್ಲೂ ಇಂತವರನ್ನು ನೋಡಬಹುದಾಗಿದೆ.
ಈ ವ್ಯಕ್ತಿತ್ವ ಹೊಂದಿರುವವರ ಅರ್ಥಹೀನ ನಡವಳಿಕೆಗಳು ನನಗೆ ಸಂದರ್ಭಾನುಸಾರ ಎಂದು ಅನಿಸುವುದಿಲ್ಲ. ಎಲ್ಲರಲ್ಲು ಒಮ್ಮೂಮ್ಮೆ ಇಂತಹ ದುರ್ವರ್ಥನೆಗಳಿದ್ದರೂ ಜನರಿಗೆ ನೊವ್ವು ಉಂಟು ಮಾಡವುದಿಲ್ಲ. ದ್ವಿಮುಖರಲ್ಲಿ ಅನುವಂಶಿಯತೆ, ಪರಿಸರ, ವಿದ್ಯೆ ಹಾಗು ಪ್ರೇರಣೆಗಳು ಏನೇ ಇದ್ದರೂ ನರ ರಚನಾತ್ಮಕ ನ್ಯೂನತೆ, ನರ ರಸಗಳ ಉತ್ಪಾದನೆಯಲ್ಲಿ ಏರು ಪೇರು, ಕಾಳಜಿಯ ನ್ಯೂನತೆ, ಸಮಾಜದ ಭಯಹೀನತೆ ಹಾಗೂ “ನಾನು ಮಾಡುತ್ತಿರುವ ಕೆಲಸ ಸರಿಯಲ್ಲ” ಅನ್ನೋ ಮನೋ ಹಿಡಿತ ಇಲ್ಲದೆ ಇರುವದರಿಂದ ದ್ವಿಮುಖ ನೀತಿ ಅನುಸರಿಸುತ್ತಾರೆ. ಸಮಾಜದ ದೃಷ್ಟಿಯಲ್ಲಿ ಇವರನ್ನು “ಸಮಾಜ ಘಾತುಕರು” ಎಂದು ಕರೆಯುವರು.
ಬಾಂದವ್ಯ, ಸಂಸಾರ ಹಾಗೂ ಸಂಸ್ಕೃತಿ ಇವರಿಗೆ ಹಿಡಿಸದು. ಹಿಂಸೆಯಿಂದ ಖುಷಿ, ಅಹಂಭಾವನೆ, ಅತಿ ಆಸೆ, ದುರಾಡಳಿತ, ಅನೈತಿಕ ವ್ಯವಹಾರ, ಸ್ವಾರ್ಥ, ಹೊಂಚುಹಾಕುವದು, ಕ್ರೂರ ಕೃತ್ಯಗಳನ್ನು ಎಸಗುವದು ಇವುಗಳು ಇವರ ಸಾಂಧರ್ಬಿಕ ಮುಖವಾಡಗಳು. ಇತರೆ ಸಮಯದಲ್ಲಿ ಒಳ್ಳೆಯವರು. ಇಂತವರಿಗೆ ನಿರ್ದಿಷ್ಠ ಮನೋ ಚಿಕಿತ್ಸೆಗಳು ಇಲ್ಲ.
ಔಷದೋಪಚಾರಗಳು ಇದ್ದರೂ ಇಂತವರ ಮಾನಿಸಿದ ಲಕ್ಷಣಗಳಿಗೆ ಮತ್ರ ಸೀಮಿತವಾಗಿರುತ್ತವೆ. ಮುಕ್ತ ಮತ್ತು ಆಪ್ತ ಸಮಾಲೋಚನೆಗಳು ಅಲ್ಪ ಪರಿವರ್ತನೆಗೆ ಮಾತ್ರ ಪ್ರಯೋಜನ. ಕಾನೂನಿನಲ್ಲಿ ಹಾಗೂ ಸಂವಿಧಾನದಲ್ಲಿ ಇವರಿಗೆ ಶಿಕ್ಷೆ ಅಪೂರ್ಣ. ಭಾವನಾಸಂಭಂದಗಳಲ್ಲಿ ಇವರು ವಿಶ್ವಾಸ ಘಾತುಕರು, ಬೇಜವಾಬ್ದಾರಿ ಉಳ್ಳವರು, ಸಹಿಷ್ಣುತೆ ಕಮ್ಮಿ, ಆತ್ಮ ತೃಪ್ತಿ ಕಡಿಮೆ, ಮನೊ ಚಾಂಚಲತೆ ಇವರ ವಿಶೇಷ. ಶರೀರ ದಂಡನೆ ಇವರ ಹುಟ್ಟು ಗುಣ. ನಿತ್ಯ ಆತ್ಮ ನಿಂದನೆ ಹಾಗೂ ಪದೇ ಪದೇ ಆತ್ಮಹತ್ಯೆ ವಿಚಾರಗಳು ಬರುವವು. ಅವರುಗಳ ನೊವ್ವು ಶಮನಿಸಲು ಮಧ್ಯಸಾರ ಹಾಗು ಅನೇಕ ಮಾದಕ ದ್ರವ್ಯಗಳಿಗೆ ದಾಸರಾಗುವರು. ಇಂತವರ ಅಪರಾಧಗಳಿಗೆ ಶಿಕ್ಷೆ ಅಪೂರ್ಣವಾದ್ದರಿಂದ ಶಿಕ್ಷೆಗೆ ಒಳಗಾದರೂ ಯಾವುದೆ ಸಾಕ್ಷಿ ಆಧಾರಗಳನ್ನ ಕರಾರುವಕ್ಕಾಗಿ ನ್ಯಾಯವಾದಿಗಳು ನ್ಯಾಧೀಶರಿಗೆ ನೀಡಲು ಕಷ್ಟವಾಗುವುದರಿಂದ ತ್ವರಿತವಾಗಿ ಕಾರಗೃಹದಿಂದ ಹೊರ ಬರುವರು. ಇವರು ಅಮಾಯಕ ಹಾಗು ಮುಗ್ದರಿಗೆ ಉಪ್ಪು ನೀರೆರೆಯುವರು.
ಜನ ಸಾಮಾನ್ಯನಿಗೆ ಅಸಹಾಯಕತನವೇ ಉತ್ತರ. ಇವುರಗಳನ್ನು ಸೂಕ್ಷ್ಮವಾಗಿ ಗುರಿತಿಸಿ ದೂರ ಉಳಿಯುವುದೇ ಲೇಸು. ನಯ ವಿನಯದಿಂದ ಮೋಸ ಮಾಡುವರು. ಜನ ಸಾಮಾನ್ಯರ ಕೂಡಿಟ್ಟ ಹಣ ದೋಚುವರು, ಸರಪಳಿ ವ್ಯವಾಹರದಲ್ಲಿ ಹಣ ಇಡಿಸುವದು, ದುಪ್ಪಟ್ಟು ಬಡ್ಡಿಯ ಅಮೀಷ, ಚೀಟಿ ವ್ಯವಹಾರ, ಇವರ ಅನೇಕ ವಾಣಿಜ್ಯ ಮುಖಗಳು. ಇವರಿಂದ ದೂರವಿರಬೇಕಾದರೆ ಮೊದಲು ನಾವು ಜಾಗೃತರಾಗಿರಬೇಕು.
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

