ಕಾವ್ಯಸಂಸ್ಕೃತಿ ಯಾನ ಸಂಘಟನೆಯು ಪ್ತತಿಜಿಲ್ಲೆ ಹಾಗೂ ಹೊರನಾಡಿನ ಕನ್ನಡ ಪ್ರದೇಶಗಳ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಏ.26ರ ಶನಿವಾರ ಜನರೆಡೆಗೆಕಾವ್ಯ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಲಿರುವ ಇಡೀ ದಿನದ ಕಾರ್ಯಕ್ರಮಕ್ಕೆ ಡಾ ನಲ್ಲೂರು ಪ್ರಸಾದ್ ಅವರು ಸರ್ವಾಧ್ಯಕ್ಷರಾಗಿ ಇರಲಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯರಾದ ಎಲ್ ಹನುಮಂತಯ್ಯನವರು ಈ ಹತ್ತನೇ ಜನರೆಡೆಗೆ ಕಾವ್ಯ ಕವಿಗೋಷ್ಠಿಯ ದೀವಟಿಗೆಯನ್ನು ಡಾ ನಲ್ಲೂರು ಪ್ರಸಾದ್ ಅವವರಿಗೆ ಹಸ್ತಾಂತರಿಸಲಿದ್ದಾರೆ.

ಬೆಳಗ್ಗೆ ಹತ್ತು ಗಂಟೆಗೆ ಸಾಹಿತ್ಯ ಪರಿಷತ್ ಭವನದ ಅನಕೃ ದ್ವಾರದಿಂದ ಮೆರವಣಿಗೆ ಸಾಹಿತ್ಯ ಪರಿಷತ್ತಿನ ಕಿರಂ ನಾಗರಾಜ ವೇದಿಕೆಯ ತನಕ ಬರಲಿದೆ.
ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಿರಿಯ ಚಿಂತಕರಾದ ಬಾನುಮುಷ್ತಾಕ್ ಅವರಿಗೆ ಅಭಿನಂದನೆ ನಡೆಯಲಿದೆ.
ಕಾವ್ಯ ಸಂಸ್ಕೃತಿಯಾನದ ರಾಜ್ಯ ಸಂಚಾಲಕರಾದ ಡಿ ಬಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಎರಡು ಕವಿಗೋಷ್ಠಿಗಳು ನಡೆಯಲಿದ್ದು ಮೊದಲ ಕವಿಗೋಷ್ಠಿಗೆ ಹಿರಿಯ ಕವಿ ಎನ್ ಎಲ್ ಚನ್ನೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಎರಡನೇ ಕವಿಗೋಷ್ಠಿಗೆ ಕವಯಿತ್ರಿ ಜ ನಾ ತೇಜಶ್ರೀ ಅಧ್ಯಕ್ಷತೆ ವಹಿಸಲಿದ್ದಾರೆ.

ಒಂದೊಂದು ಕವಿಗೋಷ್ಠಿಯಲ್ಲಿ ಹದಿನಾರು ಕವಿಗಳು ಭಾಗವಹಿಸಲಿದ್ದು ಎರಡೂ ಕವಿಗೋಷ್ಠಿಗಳಲ್ಲೂ ಜಿಲ್ಲೆಯ ಎಲ್ಲಾ ತಾಲೂಕಿನ ಕವಿಗಳಿಗೆ ಅವಕಾಶ ನೀಡಲಾಗಿದೆ.
ಸಮ್ಮೇಳನಾಧ್ಯಕ್ಷರೊಟ್ಟಿಗೆ ಜಿಲ್ಲೆಯ ಸಾಹಿತಿಗಳು ಸಂವಾದ ನಡೆಸುವ ಒಂದು ಗೋಷ್ಠಿಯಿದ್ದು ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಎಚ್ ಎಲ್ ಮಲ್ಲೇಶಗೌಡರು ಸಮಾರೋಪ ನುಡಿಗಳನ್ನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವಾರು ಹಿರಿಯ ಸಾಹಿತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಸಂಚಾಲಕರಾದ ಉದಯರವಿ ಹಾಗು ಚಲಂ ಹಾಡ್ಲಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[…] ಶನಿವಾರ ಸಾಹಿತ್ಯ ಪರಿಷತ್ತಿನಲ್ಲಿ ಕಾವ್ಯ ಸ… […]