ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ Pahalgam ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರವಾಸಿಗರು ಆ ಪ್ರದೇಶಕ್ಕೆ ಕುದುರೆ ಮೂಲಕ ಬಂದಿದ್ದಾರೆ. ಹಾಗಾದರೆ ಈ ಉಗ್ರರು ಹೇಗೆ ಬಂದ್ರು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಪಹಲ್ಗಾಮ್ಗೆ ಒಂದೋ ಕುದುರೆ ಮೇಲೆ ಇಲ್ಲವೇ ನಡೆದುಕೊಂಡೇ ಬರಬೇಕು. ಅಲ್ಲಿ ವಾಹನಗಳ ತೆಗೆದುಕೊಂಡು ಹೋಗುವಂಥಾ ಸಾಮಾನ್ಯ ರಸ್ತೆಗಳೇ ಇಲ್ಲ.
ಉಗ್ರರು ಎಕೆ-47 ಜತೆಗೆ ಇತರೆ ಶಸ್ತ್ರಾಸ್ತ್ರಗಳ ಜತೆ ಸುಮಾರು 20-22 ಗಂಟೆಗಳ ಕಾಲ ಕಾಡಿನ ಮೂಲಕ ನಡೆದು ಬೈಸರನ್ ಕಣಿವೆ ತಲುಪಿದ್ದರು. ಬಳಿಕ ಪುರುಷರ ಪ್ಯಾಂಟ್ ಬಿಚ್ಚಿಸಿ ಕೇವಲ ಹಿಂದೂಗಳ ಮೇಲೆ ಗುಂಡು ಹಾರಿಸಿದ್ದಾರೆ. ಹಾಗೆಯೇ ಸ್ಥಳೀಯ ಮುಸ್ಲಿಂ ವ್ಯಕ್ತಿಯೊಬ್ಬರು ಪ್ರವಾಸಿಗರನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಭದ್ರತಾ ಪಡೆಗಳು ಭಯೋತ್ಪಾದಕರ ಹುಟುಕಾಟದಲ್ಲಿ ತೊಡಗಿದ್ದಾರೆ. ಅನೇಕರನ್ನು ವಶಕ್ಕೆ ಪಡೆಯಲಾಗಿದೆ. ದೇಶಾದ್ಯಂತ ಜನರು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ದಾಳಿಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುತ್ತಿದೆ. ಗೃಹ ಸಚಿವಾಲಯದ ಆದೇಶದ ನಂತರ, ಎನ್ಐಎ ಅಧಿಕೃತವಾಗಿ ತನಿಖೆಯನ್ನು ಪ್ರಾರಂಭಿಸಿದೆ.
