ಮೀಟರ್ ಬಡ್ಡಿ ದಂಧೆ ವಿರುದ್ಧ ಕ್ರಮಕ್ಕೆ ಮುಂದಾದ ಅಧಿಕಾರಿಗಳು
ಅರಕಲಗೂಡು ತಾಲೂಕು ಬಡ್ಡಿ ಮಂಜುನಾಥನ ಮನೆಗೆ ಸಹಕಾರಿ ಇಲಾಖೆ ತಂಡ ಭೇಟಿ ಪರಿಶೀಲನೆ
ಅರಕಲಗೂಡು : ಪಟ್ಟಣದಲ್ಲಿ ವಾಸವಾಗಿರುವ ಮಂಜುನಾಥ ಕೆಕೆ ಕಂಚೇನಹಳ್ಳಿ ಇವರ ಮನೆಗೆ ಅತಿ ಹೆಚ್ಚು ಮೀಟರ್ ಬಡ್ಡಿ ದಂಧೆಯನ್ನು ಮಾಡುತ್ತಿದ್ದಾನೆ ಎಂಬ ಸಾರ್ವಜನಿಕರ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರುಗಳ ಇಲಾಖೆ ತಂಡ ಅರಕಲಗೂಡಿನ ಮಾಜಿ ಬಿಎಂಟಿಸಿ ನೌಕರ ಮಂಜುನಾಥ ಮನೆಯ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದರು.
ಏನಿದು ಘಟನೆ ?
ಅರಕಲಗೂಡು ಕೋಟೆ ನಿವಾಸಿ ಮೂವರು ಜಮೀನು ವಿವಾದ ಮತ್ತು ಅತಿ ಹೆಚ್ಚು ಮೀಟರ್ ಬಡ್ಡಿ ಪಡೆಯುತ್ತಿದ್ದಾನೆ ಮತ್ತು ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಿದ್ದಾನೆ, ಎಂದು ಆರೋಪಿಸಿ ವ್ಯಕ್ತಿಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದ ಘಟನೆ ನೆಡೆದಿತ್ತು,
ಈ ಘಟನೆ ಸಂಬಂಧ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಕುಟುಂಬದವರು, ಮಂಜುನಾಥ್ ವಿರುದ್ದ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು , ಈ ಸಂಬಂಧ ಹಾಸನ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಬಿಎಸ್ಪಿ ರಾಜ್ಯ ಮುಖಂಡ ಹರೀಶ್ ನೇತೃತ್ವದಲ್ಲಿ ಹಲವರು ಮಂಜುನಾಥ್ ವಿರುದ್ಧ ಪ್ರತಿಭಟನೆ ಕೂಡ ಹಮ್ಮಿಕೊಂಡಿದ್ದರು, ಅಲ್ಲದೆ ಜಿಲ್ಲಾಧಿಕಾರಿ , ಜಿಲ್ಲಾ ಎಸ್ಪಿ ಅವರಿಗೆ ದೂರು ನೀಡಿ ಒತ್ತಾಯಿಸಿದರು.
ಈ ಹಿನ್ನಲೆ ಸಹಕಾರ ಸಂಘಗಳ ಇಲಾಖೆ ಅಧಿಕಾರಿಗಳ ತಂಡ ಮಂಜುನಾಥ ರವರ ಮನೆಯ ಮೇಲೆ ದಾಳಿ ಮಾಡಿ ದಾಖಲೆ ಹಾಗೂ ಹಣಕಾಸಿನ ವಹಿವಾಟು ಸಂಬಂಧ ಮಾಹಿತಿ ಸಂಗ್ರಹಿಸಿದ್ದಾರೆ.
ಸಹಕಾರಗಳ ಉಪ ನಿಬಂಧಕರು ಖಾಲಿದ್ ಅಹ್ಮದ್ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಇವರ ಮನೆಗೆ ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ಅಗತ್ಯವಾದ ದಾಖಲೆಗಳು ನಮ್ಮಲ್ಲಿ ಸಿಕ್ಕಿವೆ ಅವುಗಳನ್ನು ಮಾಧ್ಯಮದ ಮುಂದೆ ಹಂಚಿಕೊಳ್ಳಲು ಆಗುವುದಿಲ್ಲ ಅವುಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಲಾಗುವುದು ಎಂದರು.
ಈ ವೇಳೆ ಸಹಕಾರ ಉಪ ನಿಬಂಧಕರ ಕಚೇರಿ ಸಕಲೇಶಪುರ ಮಂಜುನಾಥ್,ಕುಮಾರ್, ಹಾಸನ ಡಿ ಆರ್ ಕಚೇರಿಯ ಲೀಲಾ ಇದ್ದರು.
