ಹಾಸನ: ನಗರದ ಕನಕ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ₹2,00,000 ರೂ. ಅನುದಾನ ನೀಡಿ ಸಂಘದ ಅಭಿವೃದ್ಧಿಗೆ ಮುಂದಾಗಿ ಬೆನ್ನೆಲುಬಾಗಿ ನಿಂತಿದ್ದಾರೆ.
ಇತ್ತೀಚೆಗಷ್ಟೇ ಹಾಸನ ನಗರದ ರಿಂಗ್ ರಸ್ತೆಯ ಪುಷ್ಪಗಿರಿ ಬಡಾವಣೆಯ 7ನೇ ಅಡ್ಡರಸ್ತೆಯಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕರು ನೆರವೇರಿಸಿ, ಕಟ್ಟಡ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ವಹಿಸುವುದಾಗಿ ಹೇಳಿದ್ದರು, ಅದರಂತೆ ಇದೀಗ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಿಸದಲು 2 ಲಕ್ಷ ಅನುದಾನ ನೀಡಿದ್ದು, ಅವರ ಈ ಸಹಕಾರ ನಡೆ, ಸಂಘದ ಬೆಳವಣಿಗೆಗೆ ಅವರು ನೀಡುತ್ತಿರುವ ನಿಷ್ಠೆಯ ಸಂಕೇತವಾಗಿದೆ.

ಈ ನೆರವಿಗೆ ಸಂತಸ ವ್ಯಕ್ತಪಡಿಸಿದ ಸಂಘದ ಪದಾಧಿಕಾರಿಗಳು ಶಾಸಕರಿಗೆ ಕೃತಜ್ಞತೆ ಸಲ್ಲಿಸಿ, “ಸಂಘದ ಅಭಿವೃದ್ಧಿಯತ್ತ ಅವರ ದಿಟ್ಟ ಹೆಜ್ಜೆ ನಮಗೆ ಪ್ರೇರಣಾದಾಯಕವಾಗಿದೆ,” ಎಂದು ಶ್ಲಾಘಿಸಿದರು.
