India Pakistan Tensions Live: ಇಂದು ಭಾರತ-ಪಾಕಿಸ್ತಾನ ಡಿಜಿಎಂಒ ಮಾತುಕತೆ
ಭಾರತ ಹಾಗೂ ಪಾಕಿಸ್ತಾನ(Pakistan)ದ ಡಿಜಿಎಂಒ ಇಂದು ಮಾತುಕತೆ ನಡೆಸಲಿದ್ದು, ಉದ್ವಿಗ್ನತೆ ಶಮನವಾಗುವುದೇ ಎಂದು ಕಾದು ನೋಡಬೇಕಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಮೇ 7 ರಂದು ಉದ್ವಿಗ್ನತೆ ಪ್ರಾರಂಭವಾಗಿತ್ತು, ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಲು, ಭಾರತವು ಪಿಒಕೆ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿ ನಾಶಪಡಿಸಿತು.
****
ಪರಮಾಣು ಅಸ್ತ್ರದ ‘ಪೊಳ್ಳು’ ಬೆದರಿಕೆ ಇನ್ನು ಮುಂದೆ ಪಾಕಿಸ್ತಾನವನ್ನು ಕಾಪಾಡುವುದಿಲ್ಲ: ಭಾರತ

ನವದೆಹಲಿ: ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತದ ಪ್ರತಿಕ್ರಿಯೆಯಲ್ಲಿ ಹೊಸ ಚೈತನ್ಯ ಸಿಕ್ಕಿದ್ದು, ಗಡಿ ನಿಯಂತ್ರಣ ರೇಖೆ (LOC) ಅಂತರರಾಷ್ಟ್ರೀಯ ಗಡಿ (IB) ಮತ್ತು ಪರಮಾಣು ಅಸ್ತ್ರದ ಬೆದರಿಕೆಯು ಇನ್ನು ಮುಂದೆ ಪಾಕಿಸ್ತಾನವನ್ನು ರಕ್ಷಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನಡೆದ ಭಾರತದ ಪ್ರತೀಕಾರದ ನಂತರ ಪಾಕಿಸ್ತಾನದ ಪರಮಾಣು ಅಸ್ತ್ರದ ಬೆದರಿಕೆಯನ್ನು ಬ್ಲಫ್(FAKE) ಎಂದು ಕರೆದಿದ್ದೇವೆ ಎಂದು ಸರ್ಕಾರದ ಮೂಲಗಳು ಹೇಳಿಕೊಂಡಿವೆ.
ಭಾರತ ಪರಮಾಣು ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದರೂ, ‘ನಮ್ಮ ದೇಶದಲ್ಲಿ ಭಯೋತ್ಪಾದನೆ ಮಾಡಲು ಪಾಕಿಸ್ತಾನಕ್ಕೆ ಸುಮ್ಮನೆ ಬಿಡುವುದಿಲ್ಲ ಎಂದು ಉನ್ನತ ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
****
ಪಾಕಿಸ್ತಾನ ಉಗ್ರ ಚಟುವಟಿಕೆಗಳು ಬಹಿರಂಗ: ಹೊಸ ಪುರಾವೆಗಳೊಂದಿಗೆ UNSC ಕದ ತಟ್ಟಿದ ಭಾರತ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಕಠಿಣ ನಿಲುವು ತಳೆದಿದೆ. ಈ ದಾಳಿಯಲ್ಲಿ 26 ಜನರು ಭಯೋತ್ಪಾದಕರಿಂದ ಸಾವನ್ನಪ್ಪಿದರು. ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ. ಈಗ ಭಾರತ ಹೊಸ ಹೆಜ್ಜೆಗಳನ್ನು ಇಡಲಿದ್ದು, ಪಾಕಿಸ್ತಾನವನ್ನು ಜಗತ್ತಿನ ಮುಂದೆ ಬಯಲು ಮಾಡಲಿದೆ.
ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಒಂದು ಅಂಗಸಂಸ್ಥೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಪಾತ್ರದ ಬಗ್ಗೆಯೂ ಈ ಪುರಾವೆಗಳು ಗಮನಹರಿಸುತ್ತವೆ. ಪಾಕಿಸ್ತಾನ ಭಯೋತ್ಪಾದನೆಯಲ್ಲಿ ಭಾಗಿಯಾಗಿರುವ ಇತ್ತೀಚಿನ ಪುರಾವೆಗಳೊಂದಿಗೆ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (UNSC) ತಂಡವನ್ನು ಕಳುಹಿಸಲಿದೆ.
****
ಪಾಕಿಸ್ತಾನದ 700 ಡ್ರೋನ್, ಕೆಲವು ಜೆಟ್ ಗಳು ಧ್ವಂಸ; ಭಾರತದ ಎಲ್ಲಾ ಪೈಲಟ್ ಸುರಕ್ಷಿತ, ಯಾವುದೇ ಹಾನಿಯಾಗಿಲ್ಲ! ಐವರು ಹುತಾತ್ಮ

ನವದೆಹಲಿ: ಮೂರು ದಿನಗಳಿಂದ ನಡೆದ ಭಾರತ- ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನದ ಶೆಲ್, ಡ್ರೋನ್ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ ಎಂದು ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಭಾನುವಾರ ದೃಢಪಡಿಸಿದರು.
DGMO ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 7 ರಂದು ಪಾಕಿಸ್ತಾನಿ ಸೇನೆ ನಡೆಸಿದ ಶೆಲ್ ದಾಳಿಯಿಂದ ನಮ್ಮ ನೆಲದಲ್ಲಿ ಯಾವುದೇ ಹಾನಿಯಾಗದಂತೆ ಭಾರತದ ವಾಯು ರಕ್ಷಣಾ ವ್ಯವಸ್ಥೆ ಸನ್ನದ್ಧವಾಗಿತ್ತು. ಮೇ 8 ಮತ್ತು 9 ರಂದು ರಾತ್ರಿ 10-30 ಗಂಟೆಗೂ ಮುನ್ನಾ ಭಾರತದ ಹಲವಾರು ನಗರಗಳಲ್ಲಿ ಡ್ರೋನ್ಗಳು, ಮಾನವ ರಹಿತ ವೈಮಾನಿಕ ವಿಮಾನಗಳು (UAVS) ಮತ್ತು ಮಾನವರಹಿತ ಯುದ್ಧ ವೈಮಾನಿಕ ವಾಹನ (UCAVS) ಮೂಲಕ ದಾಳಿಗೆ ಯತ್ನಿಸಲಾಗಿತ್ತು. ಮೇ 7 ರಂದು UAVಗಳನ್ನು ನಿಯೋಜಿಸಿದ್ದ ಪಾಕಿಸ್ತಾನ ಮರುದಿನ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಿತ್ತು. ನಾಗರಿಕರಿಗೆ ಕಿರುಕುಳ ನೀಡಲು ಹೆಚ್ಚಿನ ಹೆಲಿಕಾಪ್ಟರ್ ಗಳನ್ನು ಕಳುಹಿಸಿತ್ತು ಎಂದು ತಿಳಿಸಿದರು.
****
ಮಾತುಕತೆಗೆ ಬೇರೇನೂ ಇಲ್ಲ; PoK ಬಿಟ್ಟು ತೊಲಗಿ, ಉಗ್ರರ ಹಸ್ತಾಂತರಿಸಿ: DGMO ಸಭೆಗೂ ಮುನ್ನ ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ!

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ನಡುವೆ, ಪಾಕಿಸ್ತಾನದೊಂದಿಗೆ ಮಾತುಕತೆ ನಡೆದರೆ ಅದು PoK ಬಿಟ್ಟು ತೊಲಗುವುದು, ಉಗ್ರರ ಹಸ್ತಾಂತರಕಷ್ಟೇ ಮಹತ್ವ ಎಂದು ಭಾರತ ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದೆ. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಮಾತುಕತೆ ಇರುವುದಿಲ್ಲ.
“ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ಒಂದೇ ಒಂದು ವಿಷಯ ಉಳಿದಿದೆ. ಅದು ಪಾಕ್ ಆಕ್ರಮಿತ ಕಾಶ್ಮೀರ (PoK) ಹಿಂತಿರುಗಿಸುವಿಕೆ. ಇದನ್ನು ಹೊರತುಪಡಿಸಿ ಮಾತನಾಡಲು ಏನೂ ಇಲ್ಲ. ಪಾಕಿಗಳು ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತನಾಡಿದರೆ ನಾವು ಮಾತನಾಡಬಹುದು. ನಮಗೆ ಬೇರೆ ಯಾವುದೇ ವಿಷಯದ ಬಗ್ಗೆ ಮಾತನಾಡುವ ಉದ್ದೇಶವಿಲ್ಲ. ನಮಗೆ ಯಾವುದೇ ಮಧ್ಯಸ್ಥಿಕೆ ಬೇಡ. ನಮಗೆ ಯಾರ ಮಧ್ಯಸ್ಥಿಕೆಯೂ ಅಗತ್ಯವಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಪಹಲ್ಗಾಮ್ ಒಂದು ಪ್ರತ್ಯೇಕ ಘಟನೆಯಾಗಿದ್ದು, ಪಾಕಿಸ್ತಾನದ ವಿರುದ್ಧದ ಕ್ರಮವು ನಲವತ್ತು ವರ್ಷಗಳ ಭಯೋತ್ಪಾದನೆಯ ಪರಿಣಾಮವಾಗಿದೆ.
