IPL 2025: IPL ಸೀಸನ್-18 ಪುನರಾರಂಭಕ್ಕೆ ಸಿದ್ಧತೆಗಳು ಶುರುವಾಗಿದೆ. ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಣ ಯುದ್ಧ ಭೀತಿ ಹಿನ್ನಲೆಯಲ್ಲಿ ಮೇ 9 ರಂದು ಸ್ಥಗಿತಗೊಂಡಿದ್ದ ಟೂರ್ನಿಯನ್ನು ಈ ವಾರದೊಳಗೆ ಮತ್ತೆ ಶುರು ಮಾಡಲು ಬಿಸಿಸಿಐ ನಿರ್ಧರಿಸಿದೆ.
ಭಾನುವಾರ ನಡೆದ ಬಿಸಿಸಿಐ ಪದಾಧಿಕಾರಿಗಳು ಮತ್ತು ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಟೂರ್ನಿ ಆಯೋಜನೆಯ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗಿದ್ದು, ಈ ಸಭೆಯ ಬಳಿಕ ಎಲ್ಲಾ ಫ್ರಾಂಚೈಸಿಗಳು ಟೂರ್ನಿಗೆ ಸಜ್ಜಾಗಿರುವಂತೆ ಸೂಚಿಸಲಾಗಿದೆ. ಅಲ್ಲದೆ ಕೆಲ ಮಾರ್ಪಡುಗಳೊಂದಿಗೆ ಟೂರ್ನಿಯನ್ನು ಪುನರಾರಂಭಿಸುವುದಾಗಿ ತಿಳಿಸಲಾಗಿದೆ.
ಐಪಿಎಲ್ 2025 ಪುನರಾರಂಭದ ಮುಖ್ಯಾಂಶಗಳು:
- ಪ್ರಸ್ತುತ ಮಾಹಿತಿಯಂತೆ ಮೇ 16 ರಿಂದ ಟೂರ್ನಿ ಶುರುವಾಗಲಿದೆ.
- ನಾಲ್ಕು ಮೈದಾನಗಳ ಮೂಲಕ ಟೂರ್ನಿಯನ್ನು ಪೂರ್ಣಗೊಳಿಸಲು ಪ್ಲ್ಯಾನ್ ರೂಪಿಸಲಾಗಿದೆ.
- ದಕ್ಷಿಣ ಭಾರತದಲ್ಲೇ ಟೂರ್ನಿಯನ್ನು ಆಯೋಜಿಸಲು ಚಿಂತಿಸಲಾಗಿದೆ.
- ಫೈನಲ್ ಪಂದ್ಯವು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಿಂದ ಸ್ಥಳಾಂತರಿಸುವ ಬಗ್ಗೆ ಚರ್ಚಿಸಲಾಗಿದೆ.
- ಮೇ 25ರ ಬದಲು ಮೇ 30 ರಂದು ಫೈನಲ್ ಪಂದ್ಯವನ್ನು ಆಯೋಜಿಸಲು ತೀರ್ಮಾನ.
- ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಮ್ಯಾಚ್ ಆಯೋಜಿಸುವ ಬಗ್ಗೆ ಚರ್ಚೆ.
- ಉಳಿದ ಪಂದ್ಯಗಳನ್ನು ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ನಡೆಸುವ ಬಗ್ಗೆ ಚರ್ಚಿಸಲಾಗಿದೆ.
- ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ಗೆ ಹೋಮ್ ಪಂದ್ಯಗಳಿರುವುದಿಲ್ಲ ಎಂದು ಸೂಚನೆ.
- ಡಬಲ್ ಹೆಡರ್ ಪಂದ್ಯಗಳ ಮೂಲಕ ಟೂರ್ನಿಯನ್ನು ಬೇಗನೆ ಮುಗಿಸಲು ಪ್ಲ್ಯಾನ್.
- ಅಭ್ಯಾಸ ಆರಂಭಿಸಲು ಎಲ್ಲಾ ಫ್ರಾಂಚೈಸಿಗಳಿಗೆ ಗ್ರೀನ್ ಸಿಗ್ನಲ್.
- ಇಂದು ಅಥವಾ ನಾಳೆ ಹೊಸ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ.
ಐಪಿಎಲ್ 2025 ಫೈನಲ್ ಪಂದ್ಯ ಸ್ಥಳಾಂತರವೇಕೆ?
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಫೈನಲ್ ಪಂದ್ಯವು ಮೇ 25 ಕ್ಕೆ ನಿಗದಿ ಮಾಡಲಾಗಿತ್ತು. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಇದೀಗ ಸ್ಥಳಾಂತರಿಸುವ ಬಗ್ಗೆ ಬಿಸಿಸಿಐ ಸಭೆಯಲ್ಲಿ ಚರ್ಚಿಸಲಾಗಿದೆ. ಏಕೆಂದರೆ ಹೊಸ ವೇಳಾಪಟ್ಟಿಯಿಂದಾಗಿ ಫೈನಲ್ ಪಂದ್ಯವು ಮೇ 30 ರಂದು ನಡೆಯಲಿದೆ.
