ಕೆ.ಆರ್.ಪೇಟೆ: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕರ 12 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ 11 ಬೆಂಬಲಿತ ಅಭ್ಯರ್ಥಿಗಳು ವಿಜಯಪತಾಕೆ ಹಾರಿಸಿದ್ದಾರೆ ಸಾಮಾನ್ಯ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾದಾಪುರ ಡಾ: ರಾಮಕೃಷ್ಣೇಗೌಡ ಗೆಲವು ಸಾಧಿಸಿದ್ದಾರೆ.ಚುನಾವಣಾ ಅಧಿಕಾರಿಗಳಾಗಿ ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್ ಕಾರ್ಯನಿರ್ವಹಿಸಿದರು.
ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಕೊಟ್ಟಹಳ್ಳಿ ಶ್ರೀನಿವಾಸ್,ಸಾಮಾನ್ಯ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೃಷ್ಣೇಗೌಡ ಗೌಡ,ಅಣ್ಣೆಗೌಡ,ಬೈರೇಶ್,ಶಿವೇಗೌಡ,ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಸಿ.ಕೆಬಸವರಾಜು, ಕೆ.ನಂಜೇಗೌಡ,ಮಹಿಳಾ ಮೀಸಲು ಕ್ಷೇತ್ರದಿಂದ ಪವಿತ್ರ ಬಿ.ಟಿ, ಎಂ.ಕೆ ಸುಮ, ಪರಿಶಿಷ್ಟ ಜಾತಿ ಲೋಕೇಶ್, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಚಲುವರಾಜುನಾಯ್ಕ ಹಾಗೂ ಸಾಮಾನ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾದಾಪುರ ಡಾ: ರಾಮಕೃಷ್ಣೇಗೌಡ ಎಂ.ಕೆ ಜಯಗಳಿಸಿದ್ದಾರೆ.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಒಂದು ಖಾತೆ ತೆರೆಯದೆ ಹೀನಾಯ ಸೋಲು ಅನುಭವಿಸಿದೆ.
ಬಳಿಕ ವಿಜಯೋತ್ಸವ ಆಚರಿಸಿ ಮಾತನಾಡಿದ ನೂತನ ನಿರ್ದೇಶಕ ಕೋಟಹಳ್ಳಿ ಶ್ರೀನಿವಾಸ್ ನಮ್ಮ ನಾಯಕರಾದ ಶಾಸಕ ಹೆಚ್.ಟಿ ಮಂಜು ಹಾಗೂ ರಾಜ್ಯ ಮಾರಾಟ ಮಹಾ ಮಂಡಳಿ ನಿರ್ದೇಶಕ ಚೋಳೆನಹಳ್ಳಿ ಪುಟ್ಟಸ್ವಾಮಿಗೌಡ ಮಾರ್ಗದರ್ಶನದಲ್ಲಿ ಮತದಾರರ ಆಶೀರ್ವಾದದಿಂದ ನಮ್ಮ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳಾಗಿ 12 ರಲ್ಲಿ 11 ಸ್ಥಾನಕ್ಕೆ ನಮ್ಮ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ ಅದಕ್ಕೆ ಋಣಿಯಾಗಿ ಸಂಘದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ಫಲಿತಾಂಶ ಹೊರ ಬೀಳುತ್ತಿದ್ದಂತೆ ಜೆಡಿಎಸ್-ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಮತ ನೀಡಿದ ಮತದಾರರಿಗೆ ಗೆಲುವಿಗೆ ಸಹಕರಿಸಿದ ನಾಯಕರಿಗೆ ಕೃತಜ್ಞತೆ ನಡೆಸಿದರು.
ಸಂದರ್ಭದಲ್ಲಿ ಗುಡ್ಡೆಹೊಸಹಳ್ಳಿ ಜಿ. ಟಿ ಪ್ರಸನ್ನ,ಮಾರ್ಗೋನಹಳ್ಳಿ ರಾಜಣ್ಣ, ಅಜ್ಜೆಗೌಡ,ಚಂದ್ರು, ಗಿರೀಶ್,ಗೋವಿಂದರಾಜು, ಅರಾಸೆಗೌಡ, ಚಿನ್ನೇನಹಳ್ಳಿ ಶಿವರಾಜು, ರಮೇಶ್, ಕೋಟಹಳ್ಳಿ ಕಾಳೆಗೌಡ, ಹೊನ್ನೇಗೌಡ, ಗೋವಿಂದನಹಳ್ಳಿ ಪ್ರಕಾಶ್, ನಾಗರಾಜ್, ಗೊಂದಿಹಳ್ಳಿ ತೊಪೇಗೌಡ, ರಾಜಣ್ಣ, ಕೃಷ್ಣೇಗೌಡ, ಯೋಗೇಶ್, ನಂಜುಂಡೇಗೌಡ, ನಂಜೇಗೌಡ, ಬಿಡರಹಳ್ಳಿ ಚಂದ್ರಶೇಖರ,ಉಗಿನಹಳ್ಳಿ ಪುಟ್ಟರಾಜು, ಮುರುಳಿ, ಮಂಡಿಲಿಕನಹಳ್ಳಿ ಪುನೀತ್, ಹಳೆ ಮಾದಾಪುರ ಜವರೇಗೌಡ, ಹೊಸೂರು ಮಂಜುನಾಥ್, ಅಣ್ಣೆಗೌಡ, ರಘು ರಾಮ್ ಸೇರಿದಂತೆ ಉಪಸ್ಥಿತರಿದ್ದರು.
– ಮನು ಮಾಕವಳ್ಳಿ ಕೆ.ಆರ್.ಪೇಟೆ
