ಚನ್ನರಾಯಪಟ್ಟಣ: ಮಾನವ ಕುಲಕ್ಕೆ ಭಗವಾನ್ ಬುದ್ಧರ ಸಂದೇಶ ಸ್ಪೂರ್ತಿದಾಯಕ ಎಂದು ಶಾಸಕ ಸಿ ಎನ್ ಬಾಲಕೃಷ್ಣ ಹೇಳಿದರು.
ಅವರು, ತಾಲೂಕು ಆಡಳಿತದಿಂದ ತಾಲೂಕು ಕಚೇರಿ ಸಭಾoಗಣದಲ್ಲಿ ನಡೆದ ಬುದ್ಧ ಪೂರ್ಣಿಮೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪ್ರತಿಯೊಬ್ಬರು ಭಗವಾನ್ ಬುದ್ಧರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಜೀವನ ನಡೆಸಬೇಕು, ಹಲವಾರು ದೇಶಗಳಲ್ಲಿ ಭಗವಾನ್ ಬುದ್ಧ ರವರ ಅಷ್ಟಾಂಗ ಮಾರ್ಗಗಳನ್ನು ಅಳವಡಿಸಿಕೊಂಡು ಮುಂದುವರಿಯುತ್ತಿವೆ. ಜಗತ್ತಿನಲ್ಲಿ ಭಗವಾನ್ ಬುದ್ಧನಿಂದ ಭಾರತಕ್ಕೆ ತನ್ನದೇ ಆದ ವಿಶೇಷ ಗೌರವ ಸಿಗುತ್ತಿದೆ ಎಂದರು.

ಮುಖ್ಯ ಭಾಷಣಗಾರ ಹಾಗೂ ಉಪನ್ಯಾಸಕರಾದ ಎಂ ಜೆ ರತ್ನಾಕರ ಮಾತನಾಡಿ ಭಗವಾನ್ ಬುದ್ಧರ ಜಯಂತಿಯನ್ನು ಆಚರಿಸುವಂತೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವುದು ಒಳ್ಳೆಯ ತೀರ್ಮಾನ. ಜಗತ್ತಿನ ಹಲವಾರು ದೇಶಗಳಲ್ಲಿ ಭಗವಾನ್ ಬುದ್ಧರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದುತ್ತಿರುವುದು ಹೆಮ್ಮೆಯ ವಿಚಾರ. ಭಗವಾನ್ ಬುದ್ಧ ಹುಟ್ಟಿದ ನಾಡಿನಲ್ಲಿ ಭಗವಾನ್ ಬುದ್ಧರ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳದಿರುವುದು ದೊಡ್ಡ ದುರಂತವಾಗಿದೆ ಈ ಜಗತ್ತಿನಲ್ಲಿ ದ್ವೇಷವನ್ನು ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ ಎಂಬ ಸಂದೇಶವನ್ನು ನೀಡಿದ ಕರುಣಾಮಯಿ ಭಗವಾನ್ ಬುದ್ಧ ಎಂದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕ ಎಂ ಜೆ ರತ್ನಾಕರ್, ತಹಶೀಲ್ದಾರ್ ನವೀನ್ ಕುಮಾರ್, ಪುರಸಭೆ ಅಧ್ಯಕ್ಷ ಮೋಹನ್, ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷ ಅನಿಲ್ ಮರಗೂರು, ಪುರಸಭಾ ಸದಸ್ಯ ಪ್ರಕಾಶ್, ಇಸಿಓ ಸುಧಾಕರ್ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ
