ಟಿ.ನರಸೀಪುರ : ವಿಶ್ವದ ಪ್ರಥಮ ಶುಶ್ರೂಷಕಿಯಾದ ಫ್ಲಾರೆನ್ಸ್ ನೈಟಿಂಗೇಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಾಜ ಸೇವಕ ನಿಲಸೋಗೆ ಉಮೇಶ್ ನೇತೃತ್ವದಲ್ಲಿ ದಾದಿಯರ ಸಮ್ಮುಖದಲ್ಲಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು.
ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ರವಿಕುಮಾರ್ ಹಾಗೂ ಆಸ್ಪತ್ರೆಯ ಆಡಳಿತ ವೈಧ್ಯಾದಿಕಾರಿಗಳಾದ ಡಾ. ಅಭಿಲಾಷ್ ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸಮಾಜ ಸೇವಕ ನಿಲಸೋಗೆ ಉಮೇಶ್ ಮಾತನಾಡಿ 1854 ರ ಕ್ರೈಮನ್ ಯುದ್ಧದಲ್ಲಿ ಗಾಯಗೊಂಡ ಸೇನಾನಿಗಳ ಆರೈಕೆ ಮಾಡಿ ಜಗತ್ತಿನಾದ್ಯಂತ ಗೌರವ ಪಡೆದ ಪ್ಲಾರೆನ್ಸ್ ನೈಟಿಂಗಲ್ ವೃತ್ತಿ ಘನತೆಯನ್ನು ಎತ್ತಿ ಹಿಡಿದ ಅನುಭವಿ ದಾದಿ.ಮಾನವೀಯತೆಯ ಪ್ರತಿಪಾದಕರಾಗಿದ್ದರು.ಆಧುನಿಕ ನರ್ಸಿಂಗ್ ವಿದ್ಞಾನ ಕಾಲೇಜನ್ನು ಸ್ಥಾಪಿಸಿ ಶಿಕ್ಷಣದ ಪ್ರಗತಿಗಾಗಿ ಕೊಡುಗೆ ನೀಡಿದ್ದಾರೆಂದರು.

ಚಿದರವಳ್ಳಿ ಗ್ರಾಮ ಪಂಚಾಯತಿ ಸದಸ್ಯ ಕೆ.ಮಹೇಶ್ ಮಾತನಾಡಿ ಮನುಕುಲಕ್ಕೆ ಮಾರಕವಾಗಿ ಆಗಾಗ ಕಂಜು ಬರುವ ವಿವಿಧ ವ್ಯಾಧಿಗಳನ್ನು ನಿಯಂತ್ರಿಸಲು ದಾದಿಯರ ಸೇವೆ ಅಗತ್ಯ.ಅಸೌಖ್ಯದಿಂದ ಬಳಲುವ ರೋಗಿಗಳಿಗೆ ದಾದಿಯರ ಸೇವೆ ಸದಾ ಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಅರೋಗ್ಯಧಿಕಾರಿ ರವಿಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅಭಿಲಾಷ್, ಹಿರಿಯ ಶುಶ್ರೂಷಕರಾದ ಮಂಗಳಮ್ಮ, ಯಶೋಧ, ಜಯಂತಿ, ಗೀತಾ, ತುಳಸಿ, ಕಿರಿಯ ಶುಶ್ರೂಷಕರಾದ ಶ್ವೇತಾ, ಭಾಗ್ಯ, ಮಂಜುಳಾ, ಅಶ್ವಿನಿ, ಆಶಾ, ನಿರ್ಮಲ, ಸಮಾಜ ಸೇವಕ ನಿಲಸೋಗೆ ಉಮೇಶ್, ಗ್ರಾ. ಪಂ. ಸದಸ್ಯ ಚಿದರವಳ್ಳಿ ಮಹೇಶ್, ಅಯ್ಯಪ್ಪ ಸಿದ್ದಲಿಂಗಸ್ವಾಮಿ, ಹೊಸಪುರ ಸಿದ್ದು, ನಿಲಸೋಗೆ ಕಲ್ಯಾಣ್ ಹಾಗೂ ಇನ್ನಿತರರು ಹಾಜರಿದ್ದರು.
– ಎಂ.ನಾಗೇಂದ್ರ ಕುಮಾರ್
