“ಸರ್ವಜ್ಞ ”
~~~~~~~~
1. ಸರ್ವಜ್ಞನ ಮೂಲ ಹೆಸರೇನು?
1.ಪುಷ್ಪದತ್ತ. 2.ಜಯದೇವ. 3.ಜ್ಞಾನದತ್ತ
2. ಸರ್ವಜ್ಞನ ತಂದೆಯ ಹೆಸರೇನು?
1. ಕಂಬಾರ ನಿಂಗ 2. ಬಸವರಸ. 3.ನೇಕಾರ ನಾಗ
3. ಸರ್ವಜ್ಞನ ಹೆತ್ತ ತಾಯಿಯ ಹೆಸರೇನು?
1. ಪ್ರಮೋದಾದೇವಿ 2. ಮಲ್ಲಕ್ಕ. 3.ಕುಂಬಾರ ಮಾಳಿ
4. ಸರ್ವಜ್ಞನು ಯಾವ ಪ್ರಕಾರದ ಸಾಹಿತ್ಯ ರಚನೆಗೆ ಹೆಸರುವಾಸಿ?
1. ತ್ರಿಪದಿ. 2. ಷಟ್ಪದಿ. 3. ಸಪ್ತಪದಿ
5. ಸರ್ವಜ್ಞನ ಜನ್ಮಸ್ಥಳ ಯಾವುದು?
1. ಅಂಬಲೂರ ಮಾಸೂರು. 2.ರಟ್ಟಿಹಳ್ಳಿ. 3.ಹಾವೇರಿ
6. ಸರ್ವಜ್ಞನು ಯಾವ ದೈವದ ವರಪ್ರಸಾದನಿಂದ ಜನಿಸಿದವನೆಂಬ ಪ್ರತೀತಿ ಇದೆ?
1. ಕಾಶಿ ವಿಶ್ವನಾಥ. 2. ಶಿರಡಿ ಸಾಯಿಬಾಬಾ. 3. ತಿರುಪತಿ ತಿಮ್ಮಪ್ಪ
7. “ಸರ್ವಜ್ಞನೆಂಬುವನು __ ದಿಂದಾದವನೇ?” ಈ ಸಾಲಿನಲ್ಲಿ ಬಿಟ್ಟ ಪದ ಯಾವುದು?
1. ಜ್ಞಾನ. 2. ಪರ್ವ. 3. ಗರ್ವ
8. ಸರ್ವಜ್ಞನು ತನ್ನದೊಂದು ತ್ರಿಪದಿಯಲ್ಲಿ “ಕೋಟಿ ವಿದ್ಯೆಗಿಂತ ಯಾವ ವಿದ್ಯೆ ಮೇಲು” ಎಂದಿದ್ದಾನೆ?
1. ರಂಗ ವಿದ್ಯೆ. 2. ಬಿಲ್ಲು ವಿದ್ಯೆ. 3.ಮೇಟಿ ವಿದ್ಯೆ
9. ಸರ್ವಜ್ಞನ “ಮೂರ್ಖಂಗೆ ಬುದ್ದಿಯನು __ ಕಾಲ ಹೇಳಿದರೆ, ಗೋರ್ಕಲ್ಲ ಮೇಲೆ ಮಳೆ ಹೊಯ್ದಂತೆ” ಸಾಲಿನಲ್ಲಿ ಬಿಟ್ಟ ಪದ ಯಾವುದು?
1. ನೂರ್ಕಾಲ. 2. ಸಾವಿರ ಕಾಲ. 3.ಸದಾಕಾಲ
10. ಸರ್ವಜ್ಞನ “ವಿದ್ಯೆ ಕಲಿಸದ ತಂದೆ, ಬುದ್ಧಿ ಹೇಳದ ಗುರುವು….____ವೈರಿಗಳು” ಇದರಲ್ಲಿ ಬಿಟ್ಟ ಪದ ಯಾವುದು?
1.ಬದ್ಧ. 2. ಶುದ್ಧ. 3. ಕಡು
11. ಸರ್ವಜ್ಞನ “ಬೆಚ್ಚನೆಯ ಮನೆ, ವೆಚ್ಚಕ್ಕೆ ಹೊನ್ನು, ಇಚ್ಛೆಯರಿವ ಸತಿಯಿರಲು ___ ಕ್ಕೆ ಕಿಚ್ಚು ಹಚ್ಚೆಂದ…” ಸಾಲಿನಲ್ಲಿ ಬಿಟ್ಟ ಶಬ್ದ ಯಾವುದು?
1. ಮನೆ. 2. ನರಕ. 3. ಸ್ವರ್ಗ
12. “ಸಾಲವನು ಕೊಂಬಾಗ, ಹಾಲೋಗರುಂಡಂತೆ, ಸಾಲಿಗನು ಬಂದು ಸೆಳೆವಾಗ ____ಯ ಕೀಲು ಮುರಿದಂತೆ” ಇದರಲ್ಲಿ ಬಿಟ್ಟ ಪದ ಯಾವುದು?
1. ಕಿಬ್ಬದಿ. 2. ಕಿಬ್ಬೊಟ್ಟೆ. 3. ಕೈಕಾಲು
13. “ಜಾತಿಹೀನನ ಮನೆಯ ___ ತಾ ಹೀನವೇ, ಜಾತಿ ವಿಜಾತಿಯೆನಬೇಡ, ದೇವನೊಲಿದಾತನೇ ಜಾತ…” ಸಾಲಿನಲ್ಲಿ ಬಿಟ್ಟು ಪದ ಯಾವುದು?
1. ಪ್ರೀತಿ. 2. ಕೋತಿ. 3. ಜ್ಯೋತಿ
14. ಸರ್ವಜ್ಞನ “ನಡೆವುದೊಂದೇ ___, ಕುಡಿವುದೊಂದೇ ನೀರು, ಸುಡುವಗ್ನಿಯೊಂದೆ ಇರುತಿರಲು, ಕುಲಗೋತ್ರ….” ಸಾಲಿನಲ್ಲಿ ಬಿಟ್ಟ ಶಬ್ದ ಯಾವುದು?
1. ಆಕಾಶ. 2. ಭೂಮಿ. 3. ಚಪ್ಪಲಿ
15. ಡಾ.ರಾಜ್ ಕುಮಾರ್ ಅಭಿನಯದ ಸರ್ವಜ್ಞ ಮೂರ್ತಿ ಚಲನಚಿತ್ರವು ತೆರೆಕಂಡ ವರ್ಷ
1) 1975 2) 1965 3) 1955
~~~~~~~~~~
★ಉತ್ತರಗಳು:-
1.ಪುಷ್ಪದತ್ತ
2.ಬಸವರಸ
3.ಕುಂಬಾರ ಮಾಳಿ
4.ತ್ರಿಪದಿ
5.ಅಂಬಲೂರ ಮಾಸೂರು
6.ಕಾಶಿ ವಿಶ್ವನಾಥ
7.ಗರ್ವ
8.ಮೇಟಿವಿದ್ಯೆ
9.ನೂರ್ಕಾಲ
10.ಶುದ್ಧ
11.ಸ್ವರ್ಗ
12.ಕಿಬ್ಬದಿ
13.ಜ್ಯೋತಿ
14.ಭೂಮಿ
15) 1965
**
ಸಂ- ಹೊ.ರಾ.ಪರಮೇಶ್ ಹೊಡೇನೂರು

[…] ಸರ್ವಜ್ಞ-ಕವಿ ಪರಿಚಯ ಮಾಲಿಕೆ […]