“ಪುರಂದರದಾಸರು “
~~~~~~~~~~~~~~~
1. ಪುರಂದರದಾಸರ ಮೂಲ ಹೆಸರೇನು?
1)ತಿಮ್ಮಪ್ಪ ನಾಯಕ. 2)ಶ್ರೀನಿವಾಸ ನಾಯಕ. 3)ಪುರದಪ್ಪ ನಾಯಕ
2. ಪುರಂದರದಾಸರ ತಂದೆಯ ಹೆಸರೇನು?
1)ವರದಪ್ಪ ನಾಯಕ. 2)ಜವರ ನಾಯಕ. 3)ನಟರಾಜ ನಾಯಕ
3. ಪುರಂದರದಾಸರ ತಾಯಿಯ ಹೆಸರೇನು?
1)ಯಶೋಧರ. 2)ರಾಧೆ. 3)ರುಕ್ಮಿಣಿ
4. ಹಿಂದಿನ ದಾಖಲೆಯಂತೆ ಪುರಂದರದಾಸರ ಜನ್ಮಸ್ಥಳ ಯಾವುದು?
1)ರಾಮಾಪುರ. 2)ರಾಯಗಡ. 3)ಪುರಂದರಗಡ
5. ಪುರಂದರದಾಸರು ಯಾವ ದೈವದ ವರಬಲದಿಂದ ಜನಿಸಿದರೆಂಬ ಪ್ರತೀತಿಯಿದೆ?
1)ಮಲೆ ಮಹದೇಶ್ವರ. 2)ತಿರುಪತಿ ತಿಮ್ಮಪ್ಪ. 3)ಹಂಪೆಯ ವಿರೂಪಾಕ್ಷ
6. 2018 ರಲ್ಲಿ ತಜ್ಞರು ಸಲ್ಲಿಸಿದ ವರದಿಯಂತೆ ಪುರಂದರದಾಸರ ಹುಟ್ಟೂರು ಯಾವುದು?
1)ಅರಗ. 2)ಸೊರಭ. 3)ತೀರ್ಥಹಳ್ಳಿ
7. ಪುರಂದರದಾಸರ ಧರ್ಮಪತ್ನಿಯ ಹೆಸರೇನು?
1ಸರಸ್ವತಿ. 2)ಅರುಂಧತಿ. 3)ವಸುಮತಿ
8. ಇವಗಳಲ್ಲಿ ಪುರಂದರದಾಸರ ಜನಪ್ರಿಯ ಕೀರ್ತನೆ ಯಾವುದು?
1)ಬೆಟ್ಟದ ಮೇಲೊಂದು ಮನೆಯ ಮಾಡಿ… 2)ತೊರೆದು ಜೀವಿಸಬಹುದೇ…. 3) ಲಂಬೋದರ ಲಕುಮಿಕರ….
9. ಪುರಂದರದಾಸರ ಪುತ್ರನ ಹೆಸರೇನು?
1)ಮಧ್ವಪತಿ ದಾಸರು. 2)ಮಹಿಪತಿ ದಾಸರು. 3)ವಿಜಯವಿಠ್ಠಲ ದಾಸರು
10. ಪುರಂದರದಾಸರ “______ ಜನ್ಮ ದೊಡ್ಡದು, ಇದ ಹನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ…” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ನಾಯಿ. 2)ಮಾನವ. 3)ಹಂದಿ
11. ಪುರಂದರದಾಸರಿಗೆ ಇರುವ ಜನಪ್ರಿಯ ಬಿರುದು ಯಾವುದು?
1)ವಿದೇಶಿ ಸಂಗೀತ ಪಿತಾಮಹ. 2)ಹಿಂದೂಸ್ತಾನಿ ಸಂಗೀತ ಪಿತಾಮಹ. 3)ಕರ್ನಾಟಕ ಸಂಗೀತ ಪಿತಾಮಹ
12. “ದಾಸರೆಂದರೆ ಪುರಂದರದಾಸರಯ್ಯ” ಎಂಬ ಉದ್ಘಾರ ಯಾರದ್ದು?
1)ವ್ಯಾಸರಾಯರು. 2)ತ್ಯಾಗರಾಜರು. 3)ವಿಜಯದಾಸರು
13. ಪುರಂದರದಾಸರ “ನಗೆಯು ಬರುತಿದೆ ಎನಗೆ ನಗೆಯು ಬರುತಿದೆ…” ಕೀರ್ತನೆಯ ಆಶಯವೇನು?
1)ಮನೆ ಮಠ ಶುದ್ಧಿ. 2)ಅಂತರಂಗ ಬಹಿರಂಗ ಶುದ್ಧಿ. 3)ಹಾದಿ ಬೀದಿ ಶುದ್ಧಿ
14. ಧರೆಯೊಳಿರುವ ದುರ್ಜನರನ್ನು ಪುರಂದರದಾಸರು ಯಾವ ಮರಕ್ಕೆ ಹೋಲಿಸಿದ್ದಾರೆ?
1)ತೆಂಗಿನ ಮರ. 2)ಈಚಲ ಮರ. 3)ಜಾಲಿ ಮರ
15. ಮೋಸ ಮಾಡುವವರ ಹೆಸರನ್ನು ಯಾರಿಗೆ ಇಡಬೇಕೆಂದು ಪುರಂದರದಾಸರು ಹೇಳಿದ್ದಾರೆ?
1)ಮಗನಿಗೆ. 2)ನಾಯಿಗೆ. 3)ಬೆಕ್ಕಿಗೆ
~~~~~~~~~~~~~~~~~~~~~~~~~~
★ಉತ್ತರಗಳು:-
1)ಶ್ರೀನಿವಾಸನಾಯಕ
2)ವರದಪ್ಪನಾಯಕ
3)ರುಕ್ಮಿಣಿ
4)ಪುರಂದರಗಡ
5)ತಿರುಪತಿ ತಿಮ್ಮಪ್ಪ
6)ಅರಗ
7)ಸರಸ್ವತಿ
8)ಲಂಬೋದರ ಲಕುಮಿಕರ
9)ಮಧ್ವಪತಿದಾಸ
10)ಮಾನವ
11)ಕರ್ನಾಟಕ ಸಂಗೀತ ಪಿತಾಮಹ
12)ವ್ಯಾಸರಾಯರು
13)ಅಂತರಂಗ ಬಹಿರಂಗ ಶುದ್ಧಿ
14) ಜಾಲಿಮರ
15)ಮಗನಿಗೆ
*****
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
