ಸೋತು ಸೊರಗಿದೊಡೆ
ನಿಂದಿಪರು ಮಂದಿ
ಮನದ ಕಾರ್ಮೋಡ ಕರಗಿಸಲು
ಒಂದೆಜ್ಜೆ ಹಿಂದಿಡುವರನೇಕರು
ಜೊತೆ ನಿಲ್ಲಲದುವೆ ಸಂಕಷ್ಟವೆನಿಪುದು
ಎನಿತು ನಂಬಿಕೆ ಇಡುವೆ ಇಂತಿರಲು
ಮಾಧವ //
ತನಿಕೆಗೈವ ಸಮಯದಿ ನೀ..
ತೂಕದಿ ಪಾಪ ಪುಣ್ಯವ ಲೆಕ್ಕಿಸಿ
ಅಲ್ಲಿಗಲ್ಲಿಗೆ ತೀರ್ಪಿತ್ತು ಮುನ್ನಡೆವೆ
ನಾಕವ ಕಾಣಲು ಬಯಸುವ ಮಂದಿ
ನಾರಿಯಲದುವೆ ದೈವತ್ವವ ಕಾಣ್ವರೇ..?
ನಾರದರಂತೆ ತಂದಿಕ್ಕಿ ತಮ್ಮ ಬೇಳೆ
ಬೇಯಿಸಲು ಕಾಯ್ವರು ಮಾಧವ //
ಮನುಜನಿಂತಿರಲು ಗಾವುದ ದೂರ ಸರಿದು
ಕಾಲ ಕಾಲಕೆ ಮಳೆ ಬೆಳೆ ಕೇಳ್ವನವನ
ಎಂತು ಕ್ಷಮೆಯಿತ್ತು ಕರುಣದಿ
ಕಾಯ್ವೆ ಮಾಧವ //

*ವಾಣಿ ಮಹೇಶ್*
*ಹಾಸನ*
