ಕೈಯಲ್ಲ ಲೇಖನಿ,
ಮನಸ್ಸಿನಲ್ಲಿ ಸಾವಿರ ಭಾವನೆಗಳು…
ಪುಟಗಳ ಮೇಲೆ ಅವನು
ಒಂದು ಜಗತ್ತನ್ನೇ ಕಟ್ಟುತ್ತಾನೆ.
ಅವನ ಸಾಲುಗಳಲ್ಲಿ
ಪ್ರೀತಿಯೂ ಇರುತ್ತದೆ,
ನೋವೂ ಇರುತ್ತದೆ,
ಕನಸುಗಳೂ ಇರುತ್ತವೆ,
ಕಣ್ಣೀರಿನ ಗುರುತುಗಳೂ ಇರುತ್ತವೆ.
ಅವನ ಬರಹ ಓದುವವರಿಗೆ
ಅವನ ಮನಸ್ಸು ತುಂಬಿದಂತೆ ಕಾಣುತ್ತದೆ…
ಆದರೆ ವಾಸ್ತವದ ಬದುಕಿನಲ್ಲಿ
ಅವನು ಮಾತ್ರ ಒಬ್ಬನೇ.
ಎಲ್ಲರ ಭಾವನೆಗಳನ್ನು
ಅಕ್ಷರಗಳಾಗಿ ರೂಪಿಸುವ ಅವನು,
ತನ್ನದೇ ಭಾವನೆಗಳನ್ನು
ಹೇಳಿಕೊಳ್ಳಲು ಮಾತ್ರ
ಒಬ್ಬರನ್ನೂ ಹುಡುಕುತ್ತಿರುತ್ತಾನೆ.
ಪುಟಗಳು ಅವನ ಮಾತು ಕೇಳುತ್ತವೆ,
ಲೇಖನಿ ಅವನ ನೋವು ಅರಿಯುತ್ತದೆ…
ಆದರೆ ಅವನ ಮೌನವನ್ನು
ಅರ್ಥಮಾಡಿಕೊಳ್ಳುವವರು
ಬಹಳ ಕಡಿಮೆ.
ಅದಕ್ಕೇ ಇರಬಹುದು—
ಅವನು ಜನರ ನಡುವೆ ಇದ್ದರೂ
ತನ್ನೊಳಗೆ ಮಾತ್ರ
ಒಂಟಿಯಾಗಿ ಬದುಕುತ್ತಾನೆ.
ಲೇಖಕನಿಗೆ ಲೋಕವೇ
ಒಂದು ಪುಸ್ತಕ…
ಆದರೆ ಕೆಲವೊಮ್ಮೆ
ಅವನ ಹೃದಯದ ಕೊನೆಯ ಪುಟದಲ್ಲಿ
ಲೇಖನಿಯ ಹೊರತು
ಯಾರೂ ಇರುವುದಿಲ್ಲ…

– ಕಾರ್ತಿಕ್…
✍️ಶ್ರವಣ ಬೆಳಗೊಳ
ಹಾಸನ ಜಿಲ್ಲೆ
